ಪಾವಗಡ


ತಾಲ್ಲೂಕಿನ ಮತದಾರರ ಒಲವು ನನ್ನ ಮೇಲಿದ್ದು ಮುಂಬರುವ ಚುನಾವಣೆಯಲ್ಲಿ ನನಗೆ ಆರ್ಶಿವಾದ ನೀಡಲಿದ್ದಾರೆ ಎಂದು ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ಎಚ್.ವಿ. ವೆಂಕಟೇಶ್ ತಿಳಿಸಿದರು.
ಕಾರ್ತಿಕ ಮಾಸದ ಅಂಗವಾಗಿ ಪಟ್ಟಣದ ಮೂರು ಮುಖ ನೆಲದಲ್ಲಿರುವ ಕರಿಕಲ್ಲು ಗಂಗಮ್ಮ ಮತ್ತು ಸಪ್ತಮಾತ್ರಿಕಾ ದೇವಸ್ಥಾನದಲ್ಲಿ ಲಕ್ಷ್ಮದಿಪೋತ್ಸವ ಮತ್ತು ಗಂಗಾರತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನನ್ನ ತಂದೆಯವರು ಕೈಗೊಂಡಿರುವ ಅಭಿವೃದ್ದಿ ಕೆಲಗಳನ್ನು ನೋಡಿ ಜನರು ಮೆಚ್ಚಿದ್ದಾರೆ, ಹೀಗಾಗಲೆ ಹೈಕಮಾಂಡ್ ನನ್ನನ್ನು ಗುರ್ತಿಸಿದ್ದು, ಮುಂದಿನ ಜನವರಿಯಲ್ಲಿ ರಾಜ್ಯದ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಪ್ರಕಟಣೆ ಮಾಡಲಿದ್ದು ಅದರಲ್ಲಿ ನನ್ನ ಹೆಸರು ಇರುತ್ತದೆ ಎಂದು ತಿಳಿಸಿ, ಗಂಗಮ್ಮ ದೇವಸ್ಥಾನವು ದಿನೇ ದಿನೇ ಹೆಚ್ಚು ಪ್ರಖ್ಯಾತಿಯಾಗುತ್ತಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದು ಈ ದೇವಿಯ ಅರ್ಶೀವಾದ ನನ್ನ ಮೇಲೆ ಇದ್ದು, ಕರಿಕಲ್ಲುಗಂಗಮ್ಮ ಅನುಗ್ರಹದಿಂದ ತಾಲ್ಲೂಕಿನ ಜನರ ಸೇವೆ ಮಾಡುತ್ಥೇನೆ ಮತ್ತು ದೇವಸ್ಥಾನದ ಅಭಿವೃದ್ದಿಗೆ ಸಹಾಯಹಸ್ತ ನೀಡುತ್ತೇನೆ ಎಂದು ತಿಳಿಸಿದರು.
ಕರಿಕಲ್ ಗಂಗಮ್ಮ ದೇವಸ್ಥಾನ ನಿರ್ಮಾಣವಾದಾಗಿನಿಂದ ಪಾವಗಡ ತಾಲ್ಲೂಕಿಗೆ ಉತ್ತಮ ಮಳೆಯಾಗಿದ್ದು ಕೆರೆಕುಂಟೆಗಳು ತುಂಬಿದ್ದು ಇದೆಲ್ಲಾ ಗಂಗಮ್ಮ ದೇವಿಯ ಮಹಿಮೆ ಎಂದು ಜಾನಪದ ವಿದ್ವಾಂಸರಾದ ಸಣ್ಣನಾಗಪ್ಪ ಹರ್ಷ ವ್ಯಕ್ತಪಡಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜೇಶ್ ಮತ್ತು ಪುರೋಷತ್ತಮ ತಂಡ ಗಂಗಾರತಿ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅತ್ಯಂತ ಶ್ರದ್ದಾ ಭಕ್ತಿಗಳಿಂದ ಮಹಿಳೆಯರು ಭಾಗವಹಿಸಿ ಉದ್ಭವ ಗಂಗಮ್ಮ ದೇವಿಯ ಕಲ್ಯಾಣಿಗೆ ದೀಪಗಳನ್ನು ಬಿಟ್ಟು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು, ಎಲ್ಲಾ ಭಕ್ತರಿಗೂ ದೇವಸ್ಥಾನದ ವತಿಯಿಂದ ಪ್ರಸಾದವನ್ನು ವಿತರಿಸಲಾಯಿತು.
ಈ ವೇಳೆ ಪುರಸಭಾ ಸದಸ್ಯರಾದ ರಾಜೇಶ್, ಟೆಂಕಾಯಲರವಿ, ವೆಂಕಟಮ್ಮನ ಹಳ್ಳಿ ನಾನಿ, ದೇವಸ್ಥಾನದ ಅಡಳಿತ ಮಂಡಳಿಯ ಚೈತ್ರಾಲಕ್ಷ್ಮಿ, ದೇವೇಂದ್ರಪ್ಪ, ಹರಿಪ್ರಸಾದ್, ಚಲಪತಿ, ಶ್ರೀನಿವಾಸ್ ಬಾಬು, ನಾಗರಾಜ್, ಗೋವಿಂದ, ಪಾಪಣ್ಣ, ರವಿಕುಮಾರ್,ಕೃಷ್ಣ ಉಪಸ್ಥಿತರಿದ್ದರು.

(Visited 2 times, 1 visits today)