ತುರುವೇಕೆರೆ

ತುರುವೇಕೆರೆ ಕ್ಷೇತ್ರದಲ್ಲಿ ಯಾವುದೇ ಮಣ್ಣು ತುಂಬಿದ ರಸ್ತೆಗಳು ಇರುವುದಿಲ್ಲ ಈಗಾಗಲೇ ಸರ್ಕಾರದಿಂದ ಬಂದಂತಹ ಅನುದಾನವನ್ನು ಬಳಸಿಕೊಂಡು ಹೆಚ್ಚು ಒತ್ತು ನೀಡಿರುವುದಾಗಿ ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲೆ ಜಯರಾಂ ತಿಳಿಸಿದರು.
ಗುಬ್ಬಿ ತಾಲೂಕು ತುರುವೇಕೆರೆ ಕ್ಷೇತ್ರದ ಕಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2ಕೋಟಿ ಎಂಭತ್ತು ಲಕ್ಷದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಲ್ಲೂರು ಗ್ರಾಮ ಪಂಚಾಯತ್‍ಗೆ ಬರುವ ಎಲ್ಲಾ ಗ್ರಾಮಗಳಲ್ಲಿ ಬಾಕ್ಸ್ ಚರಂಡಿ ಹಾಗು ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಯಾವುದೇ ಕಾಮಗಾರಿಗಳು ಬಾಕಿ ಇರುವುದಿಲ್ಲ ಎಂದ ಅವರು ನಾನು ಚುನಾವಣೆಗೆ ಮುನ್ನ ಕೊಟ್ಟ ಮಾತಿನಂತೆ ತಾಲ್ಲೂಕಿನ ಕೆರೆಗಳನ್ನು ತುಂಬಿಸಿದ್ದು ರಸ್ತೆಗಳನ್ನು ಆಧುನೀಕರಣಗೊಳಿಸಿದ್ದು ಇದರಿಂದ ಮುಂದಿನ ದಿನಗಳಲ್ಲಿ ನನ್ನ ಗೆಲುವಿಗೆ ಮತದಾರರು ಶ್ರಮಿಸುತ್ತಾರೆ ಎಂದು ತಿಳಿಸಿದರು.
ನೇಕಾರರಿಗೆ ಈಗಾಗಲೇ ಸರ್ಕಾರವು 5000 ರೂ.ಗಳನ್ನು ಸಹಾಯಧನವಾಗಿ ಘೋಷಿಸಿದ್ದು ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇನೆ. ಕೊಬ್ಬರಿ ಹಾಗೂ ಅಡಿಕೆ ಬೆಲೆಗಳ ಬೆಂಬಲಬೆಲೆ ನೀಡಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ಕಲ್ಲೂರು ಗ್ರಾಮಕ್ಕೆ ಈಗಾಗಲೇ 2 ಕೋಟಿ ಹಣವನ್ನು ನೀಡಿದ್ದು ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ತಿಳಿಸಿದ ಅವರು ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಯಾರೇ ಎದುರಾಳಿಯಾದರೂ ನನ್ನ ಗೆಲುವು ಶತಸಿದ್ದ. ಏಕೆಂದರೆ ಹಿಂದಿನ ಶಾಸಕರುಗಳು ಮಾಡದಂತಹ ಕೆಲಸವನ್ನು ಕೇವಲ ನಾಲ್ಕೂವರೆ ವರ್ಷದಲ್ಲಿ ಪೂರೈಸಿದ್ದೇನೆ ಹಾಗಾಗಿ ನನ್ನ ಗೆಲುವು ಶತಸಿದ್ದ ಎಂದರು.
ರಸ್ತೆ ಕಾಮಗಾರಿ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಕಲ್ಲೂರು ಗ್ರಾ.ಪಂ. ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರುಗಳು, ಗ್ರಾಮದ ಮುಖಂಡರುಗಳು ಭಾಗವಹಿಸಿದ್ದರು.

(Visited 1 times, 1 visits today)