ತುಮಕೂರು


ತುಮಕೂರು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ,
ಎಐಎಂಎಸ್‍ಎಸ್ ಸಂಘಟನೆಗಳ ಒಕ್ಕೂಟದೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ನಿಯೋಗ ಕೈಗೊಂಡು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಸಂಶೋದನಾ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾದ ಮಲ್ಲಿಕಾರ್ಜುನ ಎಂಬ ಯುವಕನು ತುಮಕೂರು ನಗರದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾಗಿರುವ ಘಟನೆಯನ್ನು ಖಂಡಿಸಿ, ಶೀಘ್ರ ಕಾನೂನು ಕ್ರಮ ಕೈಗೊಂಡು ಬಂಧಿಸುವಂತೆ, ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಮೋಹನ್‍ಕುಮಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದ ಮಹಿಳಾ ಮುಖಂಡರಾದ ಬಾ.ಹ ರಮಾಕುಮಾರಿ ಮಾತನಾಡಿ ತುಮಕೂರು ನಗರ ಸಾಂಸ್ಕøತಿಕವಾಗಿ ಕಲ್ಪತರು ನಾಡು ಎಂಬ ಹಲವು ಹೆಸರುಗಳಿಗೆ ಸಾಕ್ಷಿಯಾಗಿದೆ. ತುಮಕೂರು ವಿ.ವಿಯ ಸಂಶೋಧನಾ ವಿದ್ಯಾರ್ಥಿ ಮಲ್ಲಿಕಾರ್ಜುನ್ ಎಂಬುವವನಿಂದ 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ವೆಸಗಿ ಗರ್ಭಿಣಿಯಾಗುವಂತೆ ಮಾಡಿರುವ ಘಟನೆ ಬಹಳ ಆತಂಕಕಾರಿಯಾಗಿದೆ. ವಿದ್ಯಾವಂತರೇ ಈತರದ ಘಟನೆಗಳನ್ನು ಮಾಡಿದರೇ ಹೇಗೆ. ಈ ಕುರಿತು ಹಲವು ಊಹಪೋಹಗಳು ನಡೆಯುತ್ತಿವೆ, ಆದ್ದರಿಂದ ತುಮಕೂರು ಜಿಲ್ಲಾಡಳಿತ ಈ ಘಟನೆ ಕುರಿತು ಕಾನೂನು ಕ್ರಮಕ್ಕೆ ಮುಂದಾಗಬೇಕು, ಸಂತ್ರಸ್ತ ಯುವತಿಗೆ ಸೂಕ್ತ ಆರೋಗ್ಯ ರಕ್ಷಣೆ ಮತ್ತು ಭದ್ರತೆ ಒದಗಿಸಬೇಕು, ಈ ಘಟನೆಗೆ ಕಾರಣನಾದ ತಲೆಮರಿಸಿಕೊಂಡಿರುವ ಮಲ್ಲಿಕಾರ್ಜುನ ಮೇಲೆ ನಿರ್ಧಾಕ್ಷಿಣ್ಯ ನಿಸ್ಪಕ್ಷಪಾತವಾದ ತನಿಖೆ ನಡೆಸಿ ಪೋಲಿಸ್ ಇಲಾಖೆ ಶಿಕ್ಷೆ ನೀಡಬೇಕು ಹಾಗೂ ಮಹಿಳೆಯರು.ಮಕ್ಕಳ ಮೇಲೆ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಕಟ್ಟೆಚ್ಚರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿದರು.
ನಂತರ ಘಟನೆಯನ್ನು ಖಂಡಿಸಿ
ಎಐಎಂಎಸ್‍ಎಸ್‍ನ ಕಲ್ಯಾಣಿ ಮಾತನಾಡಿ ಇಡೀ ದೇಶದಲ್ಲಿ ಪ್ರತಿ 20 ನಿಮಿಷಕ್ಕೊಂದು ಮಹಿಳಾ ದೌರ್ಜನ್ಯಗಳಲು ನಡೆಯುತ್ತಿವೆ. ಇಂದು ಮಹಿಳೆಯರಿಗೆ ಭದ್ರತೆ ಮರಿಚಿಕೆಯಾಗಿದೆ. ಶಾಲಾ ಕಾಲೇಜುಗಳಿಂದ ಹಿಡಿದು ಎಲ್ಲೆಡೆ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ ಇದಕ್ಕೆ ನಾವು ಮೂಲವನ್ನು ನೋಡಬೇಕು. ಇಂದಿನ ಸಾಂಸ್ಕøತಿಕ ವಾತಾವರಣವು ಕೀಳು ಹಂತಕ್ಕೆ ತಲುಪುತ್ತಿರುವುದು ಒಂದೆಡೆ ಆದರೆ ಇನ್ನೊಂದೆಡೆಗೆ ಉನ್ನತ ಮೌಲ್ಯ ಆದರ್ಶಗಳನ್ನು ಕಣ್ಮರೆಯಾಗುತ್ತಿರುವುದು ಇಂತಹ ಘಟನೆಗಳು ಸಂಭವಿಸಲು ಕಾರಣವಾಗುತ್ತವೆ. ಹಾಗಾಗಿ ಇಡೀ ಸಮಾಜದಲ್ಲಿ ಜೀವಪರವಾದ ಹಾಗೂ ಪಿತೃ ಪ್ರಧಾನ ಧೋರಣೆಗಳಿಗೆ ಬದಲಾಗಿ ಪ್ರಜಾತಾಂತ್ರಿಕ ಮೌಲ್ಯಗಳ ಆಧಾರದ ಮೇಲೆ ಸಂಸ್ಕøತಿಕ ಚಳುವಳಿಯನ್ನು ಗಟ್ಟಿಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಮಹಿಳೆಯರನ್ನು ನೋಡುವ ದೃಷ್ಠಿಕೋನ ಬದಲಾಗಬೇಕು. ಇಂತಹ ಸಾಮಾಜಿಕ ಪಿಡುಗಿನಿಂದ ಹೊರಬರಬೇಕು. ಈ ದೌರ್ಜನ್ಯಗಳು ಸಮಾಜದ ಅಶೃಬ್ದ ವಾತವರಣಕ್ಕೆ ಕಾರಣವಾಗುತ್ತವೆ. ನಾಗರೀಕ ಸಮಾಜದಲ್ಲಿ ಇಂತಹ ಘಟನೆಗಳು ನಡೆಯದಂತೆ ಸಾಂಸ್ಕøತಿಕವಾಗಿ ಚಳುವಳಿಗಳು ಘಟ್ಟಿಗೊಳ್ಳಬೇಕಿದೆ ಈ ಘಟನೆಯನ್ನು ಎಲ್ಲಾ ಜೀವಪರ ಸಂಘಟನೆಗಳು ಖಂಡಿಸಲೇಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯವಿರೋಧಿ ವೇಧಿಕೆಯ ರಾಣಿಚಂದ್ರಶೇಖರ್, ಅನುಪಮಾ, ಆಶಾಬಗ್ಗುನಡು, ಗಂಗಲಕ್ಷ್ಮೀ, ಲತಾ, ಪಾರ್ವತಮ್ಮ, ಹಾಗೂ ಸ್ಲಂ ಜನಾಂದೋಲನ ಸಂಘಟನೆಯ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಲಕ್ಷ್ಮೀಪತಿ,ಸುಬ್ರಮಣಿ ಪಾಲ್ಗೊಂಡಿದ್ದರು.

(Visited 6 times, 1 visits today)