ಕೊರಟಗೆರೆ


ಸರಕಾರದ ಆದೇಶವೇ ಇಲ್ಲದೇ ಅಂಚೆ ಇಲಾಖೆಯಲ್ಲಿ ಅನಧಿಕೃತವಾಗಿ ಡಿ.ಗ್ರೂಪ್ ನೌಕರನ ನೇಮಕ.. ಪ್ರತಿ ತಿಂಗಳು ಈತನ ಬ್ಯಾಂಕು ಖಾತೆಗೆ 15ಸಾವಿರ ಸಂಬಳ ಜಮಾ.. ಕಳೆದ 3ವರ್ಷದಿಂದ ಈತನೇ ಕೊರಟಗೆರೆ ಪಟ್ಟಣದ ಅಂಚೆ ಇಲಾಖೆ ಕಚೇರಿಯ ಬಾಸ್. ಡಿ.ಗ್ರೂಪ್ ನೌಕರ(ಹೊರಗುತ್ತಿಗೆ ಸಿಬ್ಬಂದಿ) ನೇಮಕದ ಬಗ್ಗೆ ತುಮಕೂರು ಅಂಚೆ ಇಲಾಖೆಯ ಜಿಲ್ಲಾ ಅಧಿಕ್ಷಕರಿಗೆ ಮಾಹಿತಿಯೇ ಇಲ್ವಂತೆ..!!
ಕೊರಟಗೆರೆ ಪಟ್ಟಣದ ಕೇಂದ್ರ ಸ್ಥಾನದಲ್ಲಿನ ಅಂಚೆ ಕಚೇರಿಯಲ್ಲಿ ಅಧಿಕೃತ ನೌಕರಗಿಂತ ಅನಧಿಕೃತ ಸಿಬ್ಬಂದಿಗಳ ದರ್ಬಾರು ಹೆಚ್ಚಾಗಿದೆ. ನೌಕರರ ಪ್ರತಿನಿತ್ಯದ ದಾಖಲಾತಿ ಪರಿಶೀಲನೆ ನಡೆಸಬೇಕಾದ ಅಂಚೆ ನಿರೀಕ್ಷಕರೇ ಕೊರಟಗೆರೆಗೆ ಬರೋದು ತುಂಬಾನೇ ಕಡಿಮೆ. ತುಮಕೂರು ಅಂಚೆ ಇಲಾಖೆಯ ಜಿಲ್ಲಾಮಟ್ಟದ ಅಧಿಕ್ಷಕರು ಮತ್ತು ಉಪ ಅಧಿಕ್ಷಕರ ನಿರ್ಲಕ್ಷದ ಜಾಣಮೌನವು ಕೊರಟಗೆರೆಯಲ್ಲಿ ಸಮಸ್ಯೆ ದ್ವಿಗುಣವಾಗಲು ಕಾರಣವಾಗಿದೆ.
ಡಿ.ಗ್ರೂಪ್ ನೌಕರ ಸುರೇಶ್ ಎಂಬಾತ ಪ್ರತಿನಿತ್ಯ ಬೆಳಿಗ್ಗೆ 8ಗಂಟೆಗೆ ಅಂಚೆ ಇಲಾಖೆಗೆ ಮೊದಲು ಬರ್ತಾನೇ. ಅಂಚೆ ಕಾಗದ, ಕ್ಯಾಸ್ ಕೌಂಟರ್, ಬ್ಯಾಗ್ ಕಟ್ಟೋದು ಸೇರಿದಂತೆ ಪ್ರಮುಖ ದಾಖಲೆಗಳಿಗೆ ಈತನೇ ಅಂಚೆ ಮುದ್ರೆ ಹಾಕ್ತಾನೇ. ಕಚೇರಿಯ ಬೀಗ ತೆಗೆಯುವ ಕೆಲಸದಿಂದ ಹಿಡಿದು ಸಂಜೆ ಕಚೇರಿಯ ಬಾಗಿಲು ಹಾಕುವ ಜವಾಬ್ದಾರಿಯು ಈತನದೇ. ಸಿಸಿಟಿವಿ ಇಲ್ಲದಿರುವ ಕಚೇರಿಯಲ್ಲಿ ಏನಾದರೂ ಅನಾಹುತ ಎದುರಾದರೇ ಜವಾಬ್ದಾರಿ ಯಾರು ಎಂಬುದೇ ಯಕ್ಷಪ್ರಶ್ನೆ.
ಕೊರಟಗೆರೆ ಪಟ್ಟಣದ ಅಂಚೆ ಕಚೇರಿಯಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಶಣ್ಮುಕÀಚಾರ್ಯ ಕಳೆದ 3ವರ್ಷದ ಹಿಂದೆ ಮೃತಪಟ್ಟ ನಂತರ ಪಾವಗಡದ ಸುರೇಶ್ ಎಂಬಾತನಿಗೆ ಕಚೇರಿಯ ಪೊಸ್ಟ್ ಮಾಸ್ಟರ್ ಜೀವನ್ ಪ್ರಕಾಶ್ ಮತ್ತು ಅಂಚೆ ನಿರೀಕ್ಷಕ ಹರ್ಷನ ಎಂಬಾತನ ಕೃಪಕಟಾಕ್ಷದಿಂದ ನೇಮಕವಾಗಿ ಸಂಬಳವು ಬರುತ್ತೀದೆ. ಅನಧಿಕೃತ ಡಿ.ಗ್ರೂಪ್ ನೌಕರ(ಹೊರಗುತ್ತಿಗೆ ಸಿಬ್ಬಂದಿ) ಸುರೇಶ್ ನೇಮಕಾತಿಯನ್ನು ತಕ್ಷಣ ತನಿಖೆ ನಡೆಸಬೇಕಿದೆ.
ಸಿಸಿಟಿವಿಯೇ ಇಲ್ಲದಿರುವ ಅಂಚೆ ಕಚೇರಿಯ ನಗದು ಹಣ ಅಥವಾ ದಾಖಲೆಗಳು ಮಾಯವಾದರೇ ಪೊಸ್ಟ್ ಮಾಸ್ಟರ್ ಜೀವನ್‍ಪ್ರಕಾಶ್ ಮತ್ತು ಅಂಚೆ ನಿರೀಕ್ಷಕ ಹರ್ಷರವರೇ ನೇರವಾಗಿ ಜವಾಬ್ದಾರಿ ಆಗ್ತಾರೇ. ತುಮಕೂರು ಜಿಲ್ಲಾ ಸಹಾಯಕ ಅಧಿಕ್ಷಕರಾದ ಉಮಾ ಮತ್ತು ಜಿಲ್ಲಾ ಅಧಿಕ್ಷಕರಾದ ಗೋವಿಂದರಾಜು ತಕ್ಷಣ ಪರಿಶೀಲನೆ ನಡೆಸಿ ಅನಧಿಕೃತ ನೌಕರನ ನೇಮಕದ ತನಿಖೆ ನಡೆಸಿ ತಕ್ಷಣ ಕಚೇರಿಗೆ ಸಿಸಿಟಿವಿಯ ವ್ಯವಸ್ಥೆ ಮಾಡಬೇಕಿದೆ.

 

(Visited 5 times, 1 visits today)