ತುಮಕೂರು


ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಶಿಕ್ಷಣ ನೀತಿಯ (ಓಇP) ಸ್ನಾತಕ ಪದವಿ ವಿದ್ಯಾರ್ಥಿಗಳಾದ ಪ್ರಥಮ ವರ್ಷದ ಪ್ರಥಮ ಸೆಮಿಸ್ಟರ್‍ನ ಜನವರಿ 12ರಿಂದ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಸುತ್ತೋಲೆ ಹೊರಡಿಸಿದೆ. ತುಮಕೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಪಠ್ಯಕ್ರಮ ಮುಗಿಯದ ಕಾರಣ ವಿದ್ಯಾರ್ಥಿಗಳು ತೊಂದರೆ ಉಂಟಾಗುತ್ತಿದೆ. ಪ್ರಥಮ ಸೆಮಿಸ್ಟರ್‍ನ ಶೈಕ್ಷಣಿಕೆ ವೇಳಾಪಟ್ಟಿಯು ಡಿಸೆಂಬರ್ 31ರಂದು ಮುಗಿಯಲಿದೆ. ನವೆಂಬರ್ ತಿಂಗಳಲ್ಲಿ 4ನೇ ಹಾಗೂ 6ನೇ ಸೆಮಿಸ್ಟರ್‍ನ ಮೌಲ್ಯಮಾಪನ ನಡೆದಿತ್ತು. ಹಾಗೂ 2ನೇ ಸೆಮಿಸ್ಟರ್ ಪರೀಕ್ಷೆ ಕೂಡ ನಡೆದಿತ್ತು, ಇದರ ಜೊತೆಗೆ ಪ್ರಥಮ ಸೆಮಿಸ್ಟರ್‍ನ ತರಗತಿಗಳು ಕೂಡ ನಡೆದಿದೆ.
ಆದರೆ ನವೆಂಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳು ನಡೆದಿಲ್ಲ ಇದರ ಮಧ್ಯೆ ನವೆಂಬರ್ ತಿಂಗಳಲ್ಲಿ ಮೌಲ್ಯಮಾಪನ ಇದ್ದುದರಿಂದ 10ದಿನಗಳ ಕಾಲ ರಜೆ ಕೊಟ್ಟಿರುತ್ತಾರೆ. ಈ ಎಲ್ಲಾ ಕಾರಣಕ್ಕಾಗಿ ಪೂರ್ಣ ಪ್ರಮಾಣದ ಪಠ್ಯಕ್ರಮ ಮುಗಿದಿರುವುದಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಥಮ ಸೆಮಿಸ್ಟರ್ ಶೈಕ್ಷಣಿಕ ವೇಳಾಪಟ್ಟಿಯನ್ನು ವಿಸ್ತರಣೆ ಮಾಡಬೇಕು.
2021-22ನೇ ಸಾಲಿನ 2ನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಬಂದಿಲ್ಲದ ಕಾರಣ ಸರ್ಕಾರಿ ವಸತಿ ನಿಲಯಕ್ಕೆ ಅರ್ಜಿ ಹಾಕಲು ಹಾಗೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ತೊಂದರೆ ಉಂಟಾಗಿದ್ದು ಬೇಗನೇ ಫಲಿತಾಂಶವನ್ನು ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ಸ್ನಾತಕ ಪದವಿ 4ನೇ ಸೆಮಿಸ್ಟರ್, 6ನೇ ಸೆಮಿಸ್ಟರ್ ಹಾಗು 1ನೇ ಸೆಮಿಸ್ಟರ್‍ನ ಮರುಮೌಲ್ಯಮಾಪನ ಫಲಿತಾಂಶವನ್ನು ನೀಡಿರುವುದಿಲ್ಲ. ಫಲಿತಾಂಶವನ್ನು ನೀಡಬೇಕು. 2021-22ನೇ ಸಾಲಿನ ಘಟಿಕೋತ್ಸವ ಪ್ರಮಾಣ ಪತ್ರ ನೀಡಿರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಪ್ರಮಾಣ ಪತ್ರವನ್ನು ಜರೂರಾಗಿ ವಿತರಿಸಬೇಕು.
ಈ ಎಲ್ಲಾ ಬೇಡಿಕೆಯನ್ನು ಈಡೇರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕಾಗಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
ಮಾನ್ಯ ಕುಲಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು ಈ ಹೋರಾಟದಲ್ಲಿ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ಕಾರ್ಯಕರ್ತರಾದ ಜೀವನ್, ರೇಣುಕಪ್ರಸಾದ್, ಹರ್ಷವರ್ಧನ್, ಲಿಖಿತ್ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.

(Visited 1 times, 1 visits today)