ತುಮಕೂರು


ಕಳೆದ 45 ವರ್ಷಗಳಿಂದ ದೇಶದ ಯುವಸಮೂಹದಲ್ಲಿ ಭಾರತೀಯ ಪ್ರಾಚೀನ ಸಂಸ್ಕೃತಿ ಮತ್ತು ಏಕಾಗ್ರತೆ ಕಲೆಗಳ ಬಗ್ಗೆ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ಕ್ರಮವನ್ನು ಹಮ್ಮಿಕೊಂಡು ಸೇವೆ ಸಲ್ಲಿಸಲಾಗುತ್ತಿದೆ ಎಂದು SPIಅ ಒಂಅಂಙನ ಸಂಸ್ಥಾಪಕ, ಐಐಟಿಯ ಮಾಜಿ ಪ್ರಾಧ್ಯಾಪಕ ಮತ್ತು ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಇಂಡಿಯನ್ ಶಾಸ್ತ್ರೀಯ ಸಂಗೀತದ ಸಂಸ್ಥಾಪಕ ಪದ್ಮಶ್ರೀ ಪುರಸ್ಕøತ ಡಾ. ಕಿರಣ್ ಸೇಠ್ ಹೇಳಿದರು.
ಮನುಷ್ಯನ ಉತ್ತಮ ಆರೋಗ್ಯ ಮತ್ತು ಮಹಾತ್ಮ ಗಾಂಧಿಯವರ ತತ್ವಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅವರ 145 ದಿನಗಳ ಸೈಕಲ್ ಯಾತ್ರೆ ಕೈಗೊಂಡಿರುವ ಇವರು ಇಂದು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಂಪ್ರೆಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಾರತೀಯ ಕಲೆಗಳನ್ನು ಅಭ್ಯಸಿಸುವುದರ ಮೂಲಕ ವಿಧ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಬಹುದು ಎಂದರು.
ಸೈಕಲ್ ಯಾತ್ರೆ ಮೂಲಕ ದೇಶದ ಬುನಾದಿಯಾದ ಶಿಕ್ಷಣ ತಜ್ಞರನ್ನು ಶಿಕ್ಷಕ ವೃಂದ ಮತ್ತು ಯುವ ಪೀಳಿಗೆಯನ್ನು ಉತ್ತೇಜಿಸಲಿದ್ದಾರೆ. SPIಅ ಒಂಅಂಙ ಯೊಂದಿಗೆ ಸಹವರ್ತಿಸಲು ಮತ್ತು ಜೊತೆಗೂಡಲು ಕರ್ನಾಟಕದ ಸ್ವಯಂ ಸೇವಕ(ಮೊ.ಸಂ.9483537697, 9141219269, 6362093267)ರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜನಾಧಿಕಾರಿ ನವೀನ್ ಕುಮಾರ್, ಎಂಪ್ರೆಸ್ ಕಾಲೇಜ್ ಪ್ರಾಚಾರ್ಯ ಷಣ್ಮುಖ ಎಸ್., ಉಪ ಪ್ರಾಚಾರ್ಯ ಶಿವಾಜಿರಾವ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 1 times, 1 visits today)