ತುಮಕೂರು


ಜಿಲ್ಲೆಗೆ ತನ್ನದೇ ಘನತೆ, ಗೌರವವಿದೆ. ಹೊರ ಜಿಲ್ಲೆಯಿಂದ ರೌಡಿಸಂ ಎಳೆದು ತರುವ ಜನರಿಗೆ ಇಲ್ಲಿಯ ಜನರೇ ಉತ್ತರ ನೀಡುಬೇಕು ಎಂದು ಸುರೇಶ್ ಗೌಡರು ತಿಳಿಸಿದರು.
ಪಂಚರತ್ನ ರಥಯಾತ್ರೆಯ ವೇಳೆ ಪಕ್ಷದ ಕಾರ್ಯಕರ್ತನ ಮೇಲೆ ಶಾಸಕರಾದ ಗೌರಿಶಂಕರ್ ಅವರ ಕುಮ್ಮಕ್ಕಿನಿಂದ ಅವರ ಪಿಎ ಸುರೇಶ್ ಹಾಗೂ ಬೆಂಬಲಿಗರು ಹಿಗ್ಗಾಮಗ್ಗಾ ಥಳಿಸಿರುವುದನ್ನು ಖಂಡಿಸಿ ಮೌನ ಪ್ರತಿಭಟನೆಯ ನಂತರ ಕ್ಷೇತ್ರದ ಜನರಿಗೆ ಬಹಿರಂಗ ಪತ್ರವನ್ನು ಬಿಡುಗಡೆಗೊಳಿಸಿದರು.
ಗ್ರಾಮಾಂತರ ಕ್ಷೇತ್ರವು ಶಾಂತಿಯ ಕೈತೋಟ, ಸಮೃದ್ಧಿಯ ನೆಲೆಯಾಗಿರಬೇಕೆಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ.ಹೊರಗಿನಿಂದ ಬಂದಿರುವ ಕೆಲವು ಜನರು ಹಿಂಸೆಯನ್ನು ಪ್ರಚೋದಿಸಲು ಮಾಡುತ್ತಿರುವ ಪ್ರಯತ್ನವನ್ನು ಗ್ರಾಮಾಂತರದ ಜನರು ವಿಫಲಗೊಳಿಸುತ್ತಾರೆ ಎಂದರು.
ಶಾಂತಿ, ಸೌಹಾರ್ದತೆ ಗ್ರಾಮಾಂತರ ಮಣ್ಣಿನ ಗುಣವಾಗಿದೆ. ಇಂಥ ನೆಲದಲ್ಲಿ ಕೊಲೆ, ಸುಲಿಗೆ, ಹಲ್ಲೆಗಳಿಗೆ ನಮ್ಮ ಜನರು ಅವಕಾಶ ಕೊಡಲಾರರು ಎಂದು ತಿಳಿಸಿದರು.
ಹಿಂದಿನ ಹತ್ತು ವರ್ಷದ ಅವಧಿಯಲ್ಲಿ ಕ್ಷೇತ್ರ ಶಾಂತಿಯುತವಾಗಿತ್ತು. ಕಳೆದ ಐದು ವರ್ಷಗಳಿಂದ ಹಲ್ಲೆ,, ಅಧಿಕಾರಿಗಳಿಂದ ಸುಲಿಗೆ, ಬೆದರಿಕೆಗಳು, ಹಪ್ತಾ ವಸೂಲಿ ಮಾಡಲಾಗುತ್ತಿದೆ. ಹೊರಗಿನ ರೌಡಿಗಳನ್ನು ಕರೆತಂದು ಜನರನ್ನು ಹೆದರಿಸಿ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ತನ್ನ ಹೆಂಡತಿಯೊಂದಿಗೆ ಇದ್ದ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆಯನ್ನು, ಒಂದು ಜನಾಂಗವನ್ನು ಕೀಳಾಗಿ ಹೀಯ್ಯಾಳಿಸುವುದನ್ನು ಬಲವಾಗಿ ಖಂಡಿಸಿ ಈ ಮೌನ ಧರಣಿ ನಡೆಸಿದ್ದೇನೆ.
ಟೌನ್ ಹಾಲ್ ವೃತ್ತದಿಂದ ಡಿಸಿ ಕಚೇರಿವರೆಗೂ ಮೌನ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಮೌನ ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಶಂಕರ್, ಮಹಿಳಾ ಮೋರ್ಚಾ ಅಧ್ಯಕ್ಷ ರೇಣುಕಮ್ಮ, ಓಬಿಸಿ ಮೋರ್ಚಾ ಅಧ್ಯಕ್ಷ ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಓಂ ನಮೋ ನಾರಾಯಣ, ಎಸ್ಟಿ ಮೋರ್ಚಾ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಗಂಗಾ ಅಂಜನಪ್ಪ, ಕಂಟಪ್ಪ ಗಿರೀಶ್, ಎಸ್ ಪಿ ಮೋರ್ಚಾ ಅಧ್ಯಕ್ಷ ನಟರಾಜ್ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ನಿಶಾಂತ್ ಖಾನ್ ಹಾಗೂ ಕಾರ್ಯಕರ್ತರು ಇದ್ದರು.

(Visited 1 times, 1 visits today)