ಕೊರಟಗೆರೆ


ತಾಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮದಲ್ಲಿ ನೂರಾರು ಕರವೇ ಕಾರ್ಯಕರ್ತರು ತುಂಬಾಡಿ ಗ್ರಾಮ ಘಟಕ ಹಾಗು ಹೋಬಳಿ ಘಟಕ ನೂತನವಾಗಿ ಉದ್ಘಾಟನೆ ಮಾಡುವ ಮುಖೇನ ಕರವೇ ನಾರಾಯಣಗೌಡರ ಬಣಕ್ಕೆ ತಾಲೂಕು ಅಧ್ಯಕ್ಷ ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ಸೇರ್ಪಡೆಯಾದರು.
ತಾಲೂಕು ಅಧ್ಯಕ್ಷ ಶ್ರೀನಾಥ್ ಮಾತನಾಡಿ. ನಾವೆಲ್ಲರೂ ಕನ್ನಡಿಗರು ಕನ್ನಡ ಜಲ ನುಡಿ ನಾಡಿಗಾಗಿ ಹೋರಾಡಬೇಕು ಯಾರಾದ್ರೂ ಪರಭಾಷಿಗರು ಕನ್ನಡದ ಸುದ್ದಿಗೆ ಬಂದರೆ ಕನ್ನಡಿಗರ ತಂಟೆಗೆ ಬಂದರೆ ಅವರ ವಿರುದ್ಧ ಹೋರಾಡಬೇಕು ಕನ್ನಡಿಗರನ್ನು ಕೆಣಕದಂತೆ ನೋಡಿಕೊಳ್ಳಬೇಕು
ಪರಭಾಶಿಗರು ಕರ್ನಾಟಕಕ್ಕೆ ಬಂದರೆ ಅವರ ಮನೆಯಲ್ಲಿ ಅವರ ಭಾಷೆ ಮಾತನಾಡಲಿ ಹೊರಗಡೆ ಬಂದಾಗ ಕೆಲಸಗಳಲ್ಲಿ ಇದ್ದಾಗ ಕನ್ನಡದಲ್ಲಿ ಮಾತನಾಡಬೇಕು ಕನ್ನಡದಲ್ಲಿ ವ್ಯವಹರಿಸಬೇಕು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಪರಭಾಷೆಗರಿಗೆ ಗೊತ್ತಾಗಬೇಕು ನಾವೆಲ್ಲರೂ ಒಗ್ಗಟ್ಟಾಗಿರಬೇಕು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಪರಭಾಷೆಗರಿಗೆ ತೋರಿಸಬೇಕು ಎಂದು ತಿಳಿಸಿದರು.
ತುಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾರ್ವತಮ್ಮ ಮಾತನಾಡಿ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಕಣ್ಮರೆಯಾಗುತ್ತಿವೆ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದ್ದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ ಕನ್ನಡ ಶಾಲೆಗಳು ಉಳಿಯಬೇಕಾದರೆ ನಮ್ಮ ನಿಮ್ಮೆಲ್ಲರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಬೇಕು ಅಷ್ಟೇ ಇಲ್ಲ ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಆದ್ದರಿಂದ ಕನ್ನಡಿಗರಾದ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಕನ್ನಡ ನಾಡು ನುಡಿ ಜಲದ ವಿಷಯಕ್ಕೆ ಯಾರಾದರೂ ಬಂದರೆ ಅವರಿಗೆ ತಕ್ಕ ಪಾಠ ಕಲಿಸಬೇಕು ಆದ್ದರಿಂದ ಇಂತಹ ಕನ್ನಡದಪರ ಹೋರಾಡುವ ಇಂತಹ ಸಂಘಟನೆಗಳಿಗೆ ಅತಿ ಹೆಚ್ಚು ಯುವಕರು ಸೇರ್ಪಡೆಯಾಗಬೇಕು ಎಂದು ತಿಳಿಸಿದರು…
ಇದೇ ಸಂದರ್ಭದಲ್ಲಿ ತಾಲೂಕು ಯುವಾಧ್ಯಕ್ಷ ಮಂಜುನಾಥ್,ನಗರಾಧ್ಯಕ್ಷ ಆನಂದ್,ತುಂಬಾಡಿ ಗ್ರಾಮ ಪಂಚಾಯತಿ ಸದಸ್ಯ ನಟರಾಜ್, ನೂತನ ಅಧ್ಯಕ್ಷರು ಕಾವಲಪ್ಪ ಕೆಜಿ ನಾಗಪ್ಪ,ನಾಗೇಶ್,ನಾಗರಾಜು, ಪ್ರಸನ್ನ ಕುಮಾರ್, ನವೀನ್ ಕುಮಾರ್,ಪ್ರದೀಪ್,ನವೀನ್, ಶಿವಕುಮಾರ್, ಮಂಜುನಾಥ್, ರಾಮಯ್ಯ,ನಾರಾಯಣ್, ಜಯರಾಮಯ್ಯ, ಹೋಬಳಿಯ ಅಧ್ಯಕ್ಷರಾದ ಕೋದಂಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ರವಿಚಂದ್ರನ್, ಜಯಸಿಂಹ,ಪ್ರೇಮ್ ಕುಮಾರ್, ವೆಂಕಟೇಶ್ ಬಾಬು, ಅಭಿಷೇಕ್, ಕಿರಣ್, ರಾಕೇಶ್, ನಾಗೇಂದ್ರ, ರಾಕೇಶ್,ಸಂತೋಷ್, ಸಿ ಎನ್ ದುರ್ಗ ಹೋಬಳಿ ಅಧ್ಯಕ್ಷ ವೀರಭದ್ರ,ಹರೀಶ್, ಕರವೇ ಸಂಘಟನೆಗೆ ಸೇರ್ಪಡೆಯಾದರು.

(Visited 5 times, 1 visits today)