ಗುಬ್ಬಿ


ಜಿಲ್ಲೆಯಲ್ಲಿ ಯಾವುದೇ ಪಕ್ಷದಿಂದ ಆದರೂ ಸಹ ಕಾಡುಗೊಲ್ಲ ಸಮುದಾಯಕ್ಕೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಕಾಡುಗೊಲ್ಲರ ಮುಖಂಡ ಗುಡ್ಡದಹಳ್ಳಿ ಶಿವಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2008 ರಲ್ಲಿ ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 28 ಸಾವಿರ ಮತಗಳನ್ನು ಪಡೆದಿದ್ದೇನು ಈಗ ಬಿಜೆಪಿ ಪಕ್ಷದಲ್ಲಿ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದು 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಪಕ್ಷದ ಆಕಾಂಕ್ಷಿಯಾಗಿದ್ದು ಪಕ್ಷ ಟಿಕೆಟ್ ನೀಡಿದರೆ ಖಂಡಿತವಾಗಿಯೂ ಈ ಬಾರಿ ಬಿಜೆಪಿ ಪಕ್ಷಕ್ಕೆ ಗೆಲುವು ತಂದುಕೊಡುತ್ತೇನೆ ಕಾಡುಗೊಲ್ಲ ಸಮುದಾಯವು ತಾಲೂಕಿನಲ್ಲಿ ಸುಮಾರು 30,000 ಮತದಾರರಿದ್ದು ಅವರೆಲ್ಲರ ವಿಶ್ವಾಸ ಮತ್ತು ಎಲ್ಲ ಸಮುದಾಯಗಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಇದ್ದೇನೆ ಹಾಗಾಗಿ ಬಿಜೆಪಿ ಪಕ್ಷ ಹಿಂದುಳಿದ ಸಮುದಾಯದ ಕಾಡುಗೊಲ್ಲ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು. ಟಿಕೆಟ್ ನೀಡದೆ ಹೋದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ನಿಲ್ಲುವುದು ಗ್ಯಾರಂಟಿ ಎಂದು ತಿಳಿಸಿದರು.
ಕಾಡು ಗೊಲ್ಲ ಸಮುದಾಯದ ಜಿಲ್ಲಾ ಕಾರ್ಯ ದರ್ಶಿ ಪುರುμÉೂೀತ್ತಮ್ ಮಾತನಾಡಿ ಚಿತ್ರದುರ್ಗ ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ನಮ್ಮ ಸಮುದಾಯವಿದ್ದು ಈ ಬಾರಿ ನಮಗೆ ಟಿಕೆಟ್ ನೀಡಲೇಬೇಕು ರಾಜ್ಯದ 40 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಾಡುಗೊಲ್ಲರಿಗೆ ಅನ್ಯಾಯ ಮಾಡಿದರೆ ಯಾವುದೇ ಪಕ್ಷಗಳು ಸಹ ಸೋಲಿನ ರುಚಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಡುಗೊಲ್ಲ ಬುಡಕಟ್ಟು ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜು, ಮುಖಂಡ ರಾದ ಹಾಲೇ ಗೌಡ,ಚಿತ್ರ ಲಿಂಗಯ್ಯ,ಮೋಹನ್, ದುಂಜಯ, ಲೋಕೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

(Visited 1 times, 1 visits today)