ತುಮಕೂರು


ಸಿದ್ಧ ಗಂಗಾ ಮಠಕ್ಕೆ ಬಸವ ಜಯಂತಿ ಯ ಶುಭ ದಿನದಂದು ನೂತನ ಉತ್ತರಾಧಿಕಾರಿ ನಿಯುಕ್ತಿ ಗೊಳಿಸಿದ್ದು, ನೆಲಮಂಗಲ ತಾಲೂಕು ಮೈಲನಹಳ್ಳಿ ಮೂಲದ ವಟು ಮನೋಜ್ ಕುಮಾರ್ ಅವರಿಗೆ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಯೆಂಬ ಹೊಸ ಅಬಿಧಾನದೊಂದಿಗೆ ನಿರಂಜನ ಪಟ್ಟಾಧಿಕಾರ ನೆರವೇರಿಸಲಾಯಿತು.
ಇವರೊಂದಿಗೆ ಕಂಚಗಲ್ ಬಂಡೆಮಠಕ್ಕೆ ಕಾಳೇನಹಳ್ಳಿ ಮೂಲದ ಹರ್ಷ ಅವರಿಗೆ ಮಹಾಲಿಂಗ ಸ್ವಾಮೀಜಿ ಎಂಬ ಅಭಿದಾನದೊಂದಿಗೆ ವಿರಕ್ತಾಶ್ರಮ ದೀಕ್ಷೆ ನೀಡಲಾಗಿದ್ದು ದೇವನಹಳ್ಳಿ ಮಠಕ್ಕೂ ಸದಾಶಿವ ಸ್ವಾಮೀಜಿ ಅವರನ್ನು ನೂತನ ಉತ್ತರಾಧಿಕಾರಿಯಾಗಿ ಶಾಸ್ತ್ರೋಕ್ತವಾಗಿ ಪಟ್ಟಕಟ್ಟಲಾಯಿತು.
ಕಾರ್ಯಕ್ರಮದ ನಿಮಿತ್ತ ಶನಿವಾರ ರಾತ್ರಿ ಯಿಂದಲೇ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರುದ್ದು ಸಿದ್ಧಗಂಗಾ. ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಮಠದ ನೂತನ ಉತ್ತರಾಧಿಕಾರಿಗೆ ದೀಕ್ಷಾ ಸಂಸ್ಕಾರಇಷ್ಟಲಿಮಗ ಪೂಜೆ ಮಾಡಿಸಿದರು.
ಮೂವರು ವಟುಗಳ ನಿರಂಜನ ಪಟ್ಟಾಧಿಕಾರ ಸಮಾರಂಭಕ್ಕೆ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಗಳು, ಹಿರೇಮಠ ಶ್ರೀ ಗಳುಸೇರಿ ಹರಗುರುಚರಮೂರ್ತಿಗಳು, ಸಂಸದ ಜಿ. ಎಸ್. ಬಸವರಾಜ್ ಸೇರಿ ಮಾಜಿ ಎಂಎಲ್ಸಿ ಡಾಹುಲಿನಾಯ್ಕರ್, ಮಾಜಿ ಸಚಿವ ಶಿವಣ್ಣ, ಕೆಆರ್ ಐಡಿಎಲ್ ಅಧ್ಯಕ್ಷ ರುದ್ರೇಶ್, ಡಾ. ಎಂ. ಎನ್ ಚನ್ನಬಸಪ್ಪ, ಟಿ. ಕೆ, ನಂಜುಂಡಪ್ಪ, ಎಸ್. ವಿಶ್ವನಾಥಯ್ಯ, ಡಾ.ಎಸ್.ಪರಮೇಶ್, ನಾಗರಾಜ್, ಡಾ. ಶಿವಕುಮಾರಯ್ಯ ಸೇರಿದಂತೆ ಮಠದ ಆಡಳಿತ ಮಂಡಳಿ ಯವರು ರಾಜ್ಯ ದ ಹಲವೆಡೆ ಯ ಭಕ್ತರು ಪಾಲ್ಗೊಂಡರು.

(Visited 2 times, 1 visits today)