ತುಮಕೂರು

ಅಣ್ಣ ಬಸವಣ್ಣನವರು 12ನೇ ಶತಮಾನದಲ್ಲಿ ಕಾಯಕ ಜನರಲ್ಲಿ ವಚನದ ಮೂಲಕ ತಮ್ಮ ಕಸುಬುಗಳಿಗೆ ಮನ್ನಣೆ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದು ಸಾಮಾಜಿಕ ಕ್ರಾಂತಿ ಮಾಡಿದ ಮಾದರಿಯೇ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಸ್ಲಂ ಜನರನ್ನು ಸಂಘಟಿಸಿ ಸಮಾಜ ಬದಲಾವಣೆ ಮಾಡುವುದಕ್ಕೆ ಸ್ಪೂರ್ತಿಯಾಗಿದೆ ಎಂದು ಎಸ್.ಜೆ,ಕೆ ರಾಜ್ಯ ಸಂಚಾಲಕ ಎ,ನರಸಿಂಹಮೂರ್ತಿಯವರು ಹೇಳಿದ್ದರು, ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪಿ.ಕೆ.ಎಸ್ ಕಾಲೋನಿಯ ಸಂಪನ್ಮೂಲ ಕೇಂದ್ರದಲ್ಲಿ 890ನೇ ಬಸವೇಶ್ವರರ ಜಯಂತಿಯನ್ನು ಆಯೋಜಿಸಲಾಗಿತ್ತು.
ಬಸವಣ್ಣನವರ ಭಾವಚಿತ್ರ ಮತ್ತು ವಚನಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಎ.ನರಸಿಂಹಮೂರ್ತಿ ಕಾಯಕದ ಮಾತು ಹೇಳಿದ ಅರ್ಥಶಾಸ್ತ್ರಜ್ಞ ಜಗತ್ತಿನಲ್ಲಿಯೇ ಮೊಟ್ಟ ಮೊದಲು ಅನುಭವ ಮಂಟಪದ ಮೂಲಕ ಸಂಸತ್ ನಿರ್ಮಿಸಿದ ರಾಜಕೀಯ ತಜ್ಞ, ಅಂತರ್‍ಜಾತಿ ವಿವಾಹ ಮಾಡಿದ ಸಮಾಜತಜ್ಞ ಮಹಿಳೆಯರಿಗೆ ಸಮಾನ ಅಧಿಕಾರ ಕೊಟ್ಟ ಸಮಾನತಾವಾದಿಯಾಗಿ ಎಲ್ಲಾ ಜಾತಿಯ ಶರಣರನ್ನು ಸಮಾನಾಗಿ ಕಂಡು ಸಾವಿರಾರು ವಚನಗಳ ಮೂಲಕ ಮಾನವೀಯತೆ ಸಾರಿದ ಮಹಾನ್ ಸಮಾಜ ಸುಧಾರಕ ಬಸವಣ್ಣ 12ನೇ ಶತಮಾನದಲ್ಲಿ ಕೆಳಜಾತಿಯ ಜನರನ್ನು ಒಗ್ಗೂಡಿಸಿ ಮನುವಾದಿಗಳ ನಾಡಿನಲ್ಲಿ ಸಮಸಮಾನತೆಗಾಗಿ ಕ್ರಾಂತಿ ಮಾಡಿದ್ದು ಸುಲಭದ ಮಾತಲ್ಲ ಇವರು ಕಂಡ ಕನಸ್ಸನ್ನು ಈ ನೆಲದಲ್ಲಿ ಸಂವಿಧಾನ ಸಕಾರಗೊಳಿಸಿದೆ. ಆದರೆ ಸಂವಿಧಾನವನ್ನು ಗಾಳಿಗೆ ತೂರಿ ಡಬಲ್ ಇಂಜಿನ್ ಸರ್ಕಾರ ಜನಸಾಮಾನ್ಯರ ಬದುಕನ್ನು ನಾಶಗೊಳಿಸಿ ಮೀಟರ್ ಇದ್ದವರು ಮಾತ್ರ ದೇಶದಲ್ಲಿರಲು ಯೋಗ್ಯರೆಂಬ ವಾತಾವರಣ ನಿರ್ಮಿಸಿರುವುದು ಶ್ರೀಮಂತ ಮತ್ತು ಬಡವರ ವರ್ಗಗಳನ್ನು ಸ್ಪಷ್ಟವಾಗಿ ವಿಭಾಗಿಸಿ ಮೇಲ್ವರ್ಗ ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾಗಿ ಇದ್ದೇವೆ ಎನ್ನುವುದನ್ನು ಬಿಜೆಪಿ ಸರ್ಕಾರ ಸಾಬೀತು ಪಡಿಸುತ್ತಿದೆ, ಹಾಗಾಗಿ ನಾವು ನಮ್ಮ ಮತದ ಮೂಲಕ ಸಂವಿಧಾನಕ್ಕೆ ಸವಾಲಾಗಿರುವ ಸನಾತನ ಸಿದ್ದಾಂತವನ್ನು ಸೋಲಿಸಬೇಕಿದೆ ಎಂದರು.
ಗೌರವಧ್ಯಕ್ಷರಾದ ದೀಪಿಕಾ ಮಾತನಾಡಿ ತೃತೀಯ ಲಿಂಗಿಗಳು ಈ ಚುನಾವಣೆಯಲ್ಲಿ ನಮ್ಮ ಗುರುತಿನ ಮೂಲಕ ಪ್ರಪ್ರಥಮ ಬಾರಿಗೆ ಇತ್ತೀಚಿಗೆ ಓಟ್ ಹಾಕುತ್ತಿದ್ದೇವೆ. ಎಲ್ಲಾ ಶೋಷಿತ ಸಮುದಾಯಗಳನ್ನು ಸಂಘಟಿಸುವ ಶಕ್ತಿ ನಮ್ಮ ಕೊಳಗೇರಿ ಸಮಿತಿಗೆ ಇರುವುದರಿಂದ ಹಲವಾರು ಪಕ್ಷಗಳ ಅಭ್ಯರ್ಥಿಗಳು ನಮ್ಮ ಬೆಂಬಲ ಕೋರುತ್ತಿರುವುದು ಸಂಘಟನೆಯ ಒಗ್ಗಟ್ಟಿನ ಪ್ರತಿಫಲವಾಗಿದೆ ಎಂದರು.
ಕಾರ್ಯದರ್ಶಿ ಅರುಣ್ ಮಾತನಾಡಿ ನಮ್ಮ ಸಂಘದ ದ್ಯೇಯೋದ್ದೇಶಗಳಿಗೆ ಹಾಗೂ ಸ್ಲಂ ಮಕ್ಕಳ ಶಿಕ್ಷಣಕ್ಕೆ ಹಲವಾರು ದಾನಿಗಳು ಸಮಿತಿಗೆ ಸಹಾಯ ಮಾಡಿದ್ದಾರೆ, ಇದನ್ನೇ ಕೆಲವರು ಸಂಕೀರ್ಣಗೊಳಿಸಿ ನಮ್ಮ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ, ಇದು ನಮ್ಮ ಸಂಘಟನೆ ಮತ್ತು ವಿಚಾರವನ್ನು ಸಹಿಸದೇ ಮಾಡುವ ಅರೋಪವಾಗಿದೆ, ಇದರಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಸಮುದಾಯ ಹಿತಾಸಕ್ತಿಯಿರುವುದನ್ನು ಸೋಕಾಲ್ಡ್ ಸಮಾನಮನಸ್ಕರು ಕಂಡುಕೊಂಡರೆ ಒಳಿತು ನಮ್ಮ ಸಂಘಟನೆ ಪಕ್ಷಾತೀತವಾದ ಸಂಘಟನೆಯಾಗಿದ್ದು ಯಾವುದೆ ಒಂದು ಪಕ್ಷದ ಬಾಲಂಗೋಚಿಯಲ್ಲ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶಾರದಮ್ಮ, ಗಂಗಾ, ರಂಗನಾಥ್, ಅನುಪಮಾ, ಪುಟ್ಟರಾಜು, ಶಾಬುದ್ದೀನ್, ಕೆಂಪಣ್ಣ, ತಿರುಮಲಯ್ಯ, ಮಂಗಳಮ್ಮ,ರಾಜ,ಮುರುಗ,ವೆಂಕಟೇಶ್,ಅಶ್ವತ್ ಯುವಘಟಕದ ಕೃಷ್ಣಮೂರ್ತಿ, ಮುಬಾರಕ್, ಮೋಹನ್, ಧನಂಜಯ್, ಲೋಕೇಶ್, ಗಣೇಶ್,ಪ್ರಥಮ್ ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ ಮುಂತಾದವರು ಪಾಲ್ಗೊಂಡಿದ್ದರು.

(Visited 1 times, 1 visits today)