ತುಮಕೂರು :

      ಹೊರ ರಾಜ್ಯದಿಂದ ತುಮಕೂರು ಜಿಲ್ಲೆಗೆ ಬರುವ ಸಾರ್ವಜನಿಕರು ವರದಿ ಮಾಡಿಕೊಳ್ಳಲು ಜಿಲ್ಲಾಡಳಿತ ವತಿಯಿಂದ ನಗರದ ತಾತ್ಕಾಲಿಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ “ಸೆಲ್ಫ್ ರಿಪೋರ್ಟಿಂಗ್ ಸೆಂಟರ್” ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ವೀಕ್ಷಣೆ ಮಾಡಿದರು.

      ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರ ರಾಜ್ಯದಿಂದ ಜಿಲ್ಲೆಗೆ ಬರಲು ಸೇವಾ ಸಿಂಧುನಲ್ಲಿ ಈಗಾಗಲೇ 1200ಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಜನರು, ಕಡ್ಡಾಯವಾಗಿ ಸ್ವಯಂ ವರದಿ ಮಾಡಿಕೊಳ್ಳಬೇಕು. ಇಲ್ಲಿ ಇವರಿಗೆ ಪರೀಕ್ಷೆಗೊಳಪಡಿಸಲಾಗುವುದು. ರೋಗ ಲಕ್ಷಣಗಳು ಇರುವವರನ್ನು ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಸ್ಥಳಾಂತರಿಸಲಾಗುವುದು. ನಗರ ಪಟ್ಟಣ ಪ್ರದೇಶದವರನ್ನು ಹೋಂ ಕ್ವಾರೆಂಟೈನ್‍ಗೆ ಕಳುಹಿಸಲಾಗುವುದು. ಆದರೆ ಗ್ರಾಮೀಣ ಪ್ರದೇಶದವರನ್ನು ಸಾಂಸ್ಥಿಕ ಹೋಂ ಕ್ವಾರೆಂಟೈನ್ ಮಾಡಲಾಗುವುದು. ಹೊರ ರಾಜ್ಯದಿಂದ ಖಾಸಗಿ ವಾಹನಗಳಲ್ಲಿ ಬಂದರೆ ಗಡಿ ಭಾಗಗಳಲ್ಲಿ ಅವರು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿಯೇ ಬರಬೇಕು. ಅಲ್ಲದೇ ಹೊರ ರಾಜ್ಯದಿಂದ ಬಂದು ಸ್ವಯಂ ವರದಿ ಮಾಡಿಕೊಳ್ಳದೇ ನೇರವಾಗಿ ಮನೆಗೆ ಬಂದವರ ಮಾಹಿತಿಯನ್ನು ಅಕ್ಕ-ಪಕ್ಕದ ಮನೆಯವರು ಜಿಲ್ಲಾಡಳಿತಕ್ಕೆ ನೀಡಬಹುದು ಎಂದರು.

      ಈ ಕಾರ್ಯದಲ್ಲಿ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು 3 ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೂಡೆಲ್ ಅಧಿಕಾರಿಗಳಾಗಿರುತ್ತಾರೆ. ಪಟ್ಟಣ ಪಂಚಾಯಿತಿ, ಪುರಸಭೆ, ಸ್ಥಳೀಯ ಸಂಸ್ಥೆಗಳು ಈಗಾಗಲೇ ಹೋಟೆಲ್, ಲಾಡ್ಜ್ ಮತ್ತಿತರ ವಸತಿ ಗೃಹಗಳನ್ನು ಗುರುತಿಸಿದ್ದು, ಹೊರ ರಾಜ್ಯದಿಂದ ಬಂದವರನ್ನು ಇಲ್ಲಿ ಕ್ವಾರೆಂಟೈನ್ ಮಾಡಲಾಗುವುದು.

      ಹೊರ ರಾಜ್ಯದಿಂದ ಜಿಲ್ಲೆಗೆ ಬಂದವರ ಕ್ಯಾಟಗರಿ-1 ಅವರ ಕ್ವಾರೆಂಟೈನ್ ನಿಯಮ ಇಂತಿದೆ. ಹೊರ ರಾಜ್ಯದಿಂದ ಬಂದ ಗ್ರಾಮೀಣ ಭಾಗದ ಜನರನ್ನು ಈಗಾಲೇ ನಿಗಧಿಪಡಿಸಿರುವ ವಸತಿ ಶಾಲೆ, ಹಾಸ್ಟೆಲ್, ಶಾಲೆಗಳಲ್ಲಿ ಸಾಂಸ್ಥಿಕ ಕ್ವಾರೆಂಟೈನ್ ಮಾಡಲಾಗುವುದು.

      ಹೈ ರಿಸ್ಕ್ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ತಮಿಳೂನಾಡು, ದೆಹಲಿ, ರಾಜಸ್ತಾನಗಳಿಂದ ನಗರಕ್ಕೆ ಬಂದವರಾದರೇ ವಸತಿ ಶಾಲೆ, ಹಾಸ್ಟೆಲ್, ಶಾಲೆ, ಕಲ್ಯಾಣ ಮಂಟಪಗಳಲ್ಲಿ ಕ್ವಾರೆಂಟೈನ್ ಮಾಡಲಾಗುವುದು.  ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತಿದಿನ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬೇಕು. ಒಂದು ವೇಳೆ ಅವರಿಗೆ ಏನಾದರೂ ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಗಂಟಲು ನೋವು ರೋಗದ ಲಕ್ಷಣ ಕಂಡು ಬಂದರೆ 108 ಆ್ಯಂಬುಲೆನ್ಸ್‍ಗಳಲ್ಲಿ ಫೀವರ್ ಕ್ಲಿನಿಕ್‍ಗಳಲ್ಲಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ ನಂತರ, ಇವರನ್ನು ಐಸೋಲೇಶನ್ ವಾರ್ಡಿನಲ್ಲಿರಿಸಲಾಗುವುದು ಎಂದರು.

(Visited 47 times, 1 visits today)