ತುಮಕೂರು:

       ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡುವ ಹೇಮಾವತಿ ನೀರು ಗೊರೂರು ಜಲಾಶಯದಿಂದ ಗೊರೂರು 2.50 ಮೀಟರ್ ಹರಿದು ಬರುತ್ತಿರುವುದನ್ನು ವೀಕ್ಷಿಸಿದ ಸಾರ್ವಜನಿಕ ಸುರಕ್ಷಾ ಸಮಿತಿ ಸದಸ್ಯರು ಹರ್ಷ ವ್ಯಕ್ತಪಡಿಸಿ ಘನ ಸರ್ಕಾರಕ್ಕೆ ಅಭಿನಂದಿಸಿದ್ದಾರೆ.

      ಬುಗುಡನಹಳ್ಳಿಯಲ್ಲಿ ಹೇಮಾವತಿ ನೀರಿನ ಸಂಗ್ರಹಣೆ ದಿನೇ ದಿನೇ ಕಮ್ಮಿಯಾಗಿ ತುಮಕೂರು ನಗರ ನಾಗರೀಕರಿಗೆ ನೀರಿನ ಪೂರೈಕೆ ವ್ಯತ್ಯಯವಾಗಬಹುದೆಂಬ ಆತಂಕ ಎದುರಾಗಿತ್ತು. ಈ ಸಂಬಂಧ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಕಳೆದ ವಾರ ಭೇಟಿ ನೀಡಿ ನೀರಿನ ಲಭ್ಯತೆ ವೀಕ್ಷಿಸಿ ಘನ ಸರ್ಕಾರ, ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ಆಡಳಿತಕ್ಕೆ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಕೆ.ಪಿ. ಮಹೇಶ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿ ಮನವಿ ಮೂಲಕ ಗಮನ ಸೆಳೆದಿದ್ದನ್ನು ಗಮನಿಸಬಹುದಾಗಿದೆ.

      ಬುಗುಡನಹಳ್ಳಿ ಜಲ ಸಂಗ್ರಹಾಗಾರದ ಒಟ್ಟು ಸಂಗ್ರಹಣಾ ಸಾಮಥ್ಯ 282 MCFT ಆಗಿದ್ದು ಇದರ ಜೊತೆಗೆ ಹೆಬ್ಬಾಕದ ಕೆರೆಯಲ್ಲೂ 152 ಒಅಈಖಿ ಹೇಮಾವತಿ ನೀರು ಸಂಗ್ರಹಣೆ ಮಾಡುವ ಸಾಮಥ್ಯವಿದೆ. ಇದರ ಜೊತೆಗೆ ತುಮಕೂರು ಅಮಾನಿಕೆರೆಗೂ ನೀರು ಸಂಗ್ರಹಿಸುವ ಯೋಜನೆಯನ್ನು ಸರ್ಕಾರ ಮಾಡಿದ್ದು, ಬುಗುಡನಹಳ್ಳಿ ಮತ್ತು ಅಮಾನಿಕೆರೆಯ ಅಭಿವೃದ್ಧಿ ಚಟುವಟಿಕೆಯ ಕಾಮಗಾರಿ ನಡೆಯುತ್ತಿದ್ದು ಸರ್ಕಾರ ತುಮಕೂರು ನಗರ ನಾಗರೀಕರಿಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತಾ ಕ್ರಮ ಅನುಸರಿಸಿ, ಹೇಮಾವತಿ ನೀರಿನ ಸಂಗ್ರಹಣೆಗೆ ಮುಂಜಾಗ್ರತಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

      ತುಮಕೂರಿಗೆ 350 ರಿಂದ 400 MCFT ನೀರು ಹರಿದು ಬರುತ್ತಿದ್ದು ಸುಮಾರು ಮುಂದಿನ ಜೂನ್ 5ರವರೆಗೆ ಸುಮಾರು 25 MCFT ನೀರು ಹರಿದು, ಸುಮಾರು 250 MCFT ಸಂಗ್ರಹವಾಗಬಹುದು, ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಮುಂದಿನ ಮಳೆಗಾಲದ ನಂತರ ಪುನಃ ಹೇಮಾವತಿ ನೀರು ಹರಿಯಬಹುದೆಂದು ಕೆ.ಪಿ. ಮಹೇಶ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ 2019-20ನೇ ಸಾಲಿನಲ್ಲಿ ಗೊರೂರು ಜಲಾಶಯದಿಂದ ಮೂರು ಬಾರಿ ನೀರನ್ನು ಬುಗುಡನಹಳ್ಳಿ ಮತ್ತು ಹೆಬ್ಬಾಕ ಕೆರೆಗೆ ಹರಿದು ಬಂದಿದ್ದು ಮಾಹಿತಿ ಪ್ರಕಾರ ಸುಮಾರು 650 MCFT ನೀರು ಹರಿದು ಬಂದಿತ್ತು.

      ತುಮಕೂರಿಗೆ ಹೇಮಾವತಿ ಕುಡಿಯುವ ನೀರಿನ ಪೂರೈಕೆಗೆ ಮಾಡುವ ಮಹಾನಗರಪಾಲಿಕೆಗೆ ಸೂಕ್ತವಾದ ಲಭ್ಯತಾ ಸಾಮಥ್ರ್ಯದ ಬುಗುಡನಹಳ್ಳಿ, ಹೆಬ್ಬಾಕ, ಅಮಾನಿಕೆರೆಗಳ ಮೂಲಕ ನೀರು ಸಂಗ್ರಹಣೆ ಸರ್ಕಾರದ ನೆರವಿನಿಂದ ಸಾಧ್ಯವಾಗಿದೆ.

      ಬುಗುಡನಹಳ್ಳಿ ಜಲಸಂಗ್ರಹಾಗಾರದ ಕುಪ್ಪೂರು ಜಾಕ್‍ವೆಲ್ ಮತ್ತು ಹೇಮಾವತಿ ನೀರು ಹರಿದು ಬರುತ್ತಿರುವ ಸ್ಥಳಕ್ಕೆ ಸಾರ್ವಜನಿಕ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ತುಮಕೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ. ಮಹೇಶ, ರಾಜೀವ್ ಕೃಷ್ಣಮೂರ್ತಿ(ಸಂಸ್ಕøತಿ), ಕೆ. ಹರೀಶ್, ಎಂ.ಎಸ್. ಚಂದ್ರು, ಕನ್ನಡ ಪ್ರಕಾಶ್ ಇದ್ದರು.

(Visited 41 times, 1 visits today)