ಬೀದಿಬದಿ ವ್ಯಾಪಾರಿಗಳ ತೆರವು : ಅರಿವು

ಶಿರಾ :


ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ನಗರದ ಪುಟ್ಟಮ್ಮನ ಛತ್ರ ಹಾಗೂ ಗಣಪತಿ ದೇವಸ್ಥಾನದ ಅಕ್ಕಪಕ್ಕದಲ್ಲಿ ತರಕಾರಿ ಅಂಗಡಿಗಳನ್ನು ಇಟ್ಟುಕೊಂಡು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಘಟನೆ ಬುದುವಾರದಂದು ನಡೆಯಿತು.
ನಗರಸಭೆಯ ಪ್ರಭಾರ ಆಯುಕ್ತೆ ಪಲ್ಲವಿ ಹಾಗೂ ಆರೋಗ್ಯ ನಿರೀಕ್ಷಕ ಮಾರೇಗೌಡ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.
ಮಂಗಳವಾರದAದು ನಗರ ಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಟಿಬಿ ಜಯಚಂದ್ರ ಅವರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದೆ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸ್ ಇಲಾಖೆಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಆದೇಶಿಸಿ ದ್ದರು. ಈ ಆದೇಶದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ನಮ್ಮ ಈ ಸಮಸ್ಯೆಗೆ ಪರಿಹಾರ ನೀಡಿ
ತರಕಾರಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ಒಂದು ಕಡೆ ಜಾಗ ನಿಗದಿಪಡಿಸಿ. ಬೀದಿ ಬದಿ ವ್ಯಾಪಾರಸ್ಥರಾದ ನಮ್ಮನ್ನು ನಮ್ಮನ್ನು ಮಾತ್ರ ತೆರವುಗೊಳಿಸಿದರೆ, ಇದೇ ಜಾಗದಲ್ಲಿ ಅಂಗಡಿ ಇಟ್ಟುಕೊಂಡು ತರಕಾರಿ ಮಾರುವ ವ್ಯಾಪಾರಸ್ಥರಿಗೆ ಮಾತ್ರ ವ್ಯಾಪಾರವಾಗುತ್ತದೆ. ಬೇರೆ ಕಡೆ ನಮಗೆ ವ್ಯಾಪಾರವಾಗುವುದಿಲ್ಲ. ನಾವು ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದೇವೆ, ನಮ್ಮನ್ನು ಒಕ್ಕಲಿಬ್ಬಿಸಿದರೆ ನಾವು ಜೀವನ ನಡೆಸುವುದು ಹಾಗೂ ಸಾಲ ತೀರಿಸುವುದು ಹೇಗೆ?
ಭಾಗ್ಯಮ್ಮ, ಬೀದಿಬದಿ ವ್ಯಾಪಾರಸ್ತೆ.

ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡು ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಎಚ್ಚರಿಕೆ ಕೊಡುವುದರ ಮೂಲಕ ತೆರವುಗೊಳಿಸಿ ಅವರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ಶಿಸ್ತು ಕ್ರಮ ಜರುಗಿಸಲಾಗುವುದು.
ಪಲ್ಲವಿ, ಪ್ರಭಾರ ಆಯುಕ್ತರು, ಶಿರಾ

(Visited 1 times, 1 visits today)