ತುಮಕೂರು:

       ಜಿಲ್ಲೆಯಲ್ಲಿ ಕ್ಷಯರೋಗಿಗಳ ಕಾಂಟ್ಯಾಕ್ಟ್ ಟ್ರೇಸಿಂಗ್ ಸಪ್ತಾಹವು ಆಗಸ್ಟ್ 17ರವರೆಗೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಹೊರವಲಯದಲ್ಲಿ ಅನುಕೂಲವಾಗುವಂತೆ ಇಂದು ಮೊಬೈಲ್ ಎಕ್ಸ್-ರೇ ವಾಹನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ|| ಸನತ್‍ಕುಮಾರ್ ಜಿ.ಕೆ ಅವರು ಚಾಲನೆ ನೀಡಿದರು.

      ಸಪ್ತಾಹದಲ್ಲಿ ಆರೋಗ್ಯ ಕಾರ್ಯಕರ್ತರ ಕ್ಷಯರೋಗಿಗಳ ಮನೆಯ ಸುತ್ತ ಅಂದರೆ ಕನಿಷ್ಠ 100 ಮೀಟರ್ ಸುತ್ತಳತೆಯಲ್ಲಿರುವ ಜನರಿಗೆ ಯಾವುದೇ ಕ್ಷಯರೋಗದ ಲಕ್ಷಣಗಳಾದ(ಕೆಮ್ಮು,ರಾತ್ರಿ ವೇಳೆ ಜ್ವರ, ತೂಕ ಕಡಿಮೆ ಆಗುವುದು, ಹಸಿವಾಗದೇ ಇರುವುದು ಕಫದಲ್ಲಿ ರಕ್ತ ಬೀಳುವುದು) ಇಂತಹ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರಿಗೆ ತಕ್ಷಣವೇ ಕಫ ಪರೀಕ್ಷೆ ಒಳಪಡಿಸಿ ಕ್ಷಯರೋಗ ದೃಡಪಟ್ಟರೆ ಆ ದಿನವೇ ಚಿಕಿತ್ಸೆಯನ್ನು ಪ್ರಾರಂಭಿಸುವುದು ಈ ಸಪ್ತಾಹದ ಮುಖ್ಯ ಉದ್ದೇಶವಾಗಿದೆ.

      ಸಾರ್ವಜನಿಕರು ಕ್ಷಯರೋಗದ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹದುದಾಗಿದೆ.

(Visited 22 times, 1 visits today)