ತುಮಕೂರು:

ನಗರದ ವಾರ್ಡ್ ನಂ 15 ರಲ್ಲಿ ನಡೆಯುತ್ತಿರುವ ಸ್ಮಾರ್ಟಸಿಟಿ ಕಾ ಸಮಗಾರಿಗಳನ್ನು ಮುಂದಿನ 15 ದಿನಗಳಲ್ಲಿ ಮುಗಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಆಯುಕ್ತರಾದ ಶ್ರೀಮತಿ ರೇಣುಕ ಸೂಚಿಸಿದರು.
ಹದಿನೈದನೇ ವಾರ್ಡಿನ ಕಾರ್ಪೋರೇಟರ್ ಮತ್ತು ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಇಂದು ವಾರ್ಡಿನ ಹಲವು ರಸ್ತೆಗಳನ್ನು ಪರಿವೀಕ್ಷಣೆ ನಡೆಸಿದ ಆಯುಕ್ತರು, ವಾರ್ಡಿನ ಸಿ ಎಸ್ ಐ ಲೇಔಟ್, ಎಸ್.ಎಸ್.ಪುರಂನ ಹಲವರು ರಸ್ತೆಗಳಲ್ಲಿ ಪೈಪ್‍ಲೈನ್ ಕಾಮಗಾರಿ,ಡಕ್ ನಿರ್ಮಾಣಕ್ಕೆ ಅಗೆದಿರುವ ಜಾಗವನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ಆಯಾಯ ಬಡಾವಣೆಯ ನಾಗರಿಕರು ಒಡಾಡಲು ತೊಂದರೆಯಾಗುತ್ತಿದೆ.ಈ ಬಗ್ಗೆ ಹಲವರು ಪೋನ್ ಮೂಲಕ ದೂರು ನೀಡಿದ್ದರು,ಅಲ್ಲದೆ ಎಸ್.ಎಸ್.ಪುರ ಮೊದಲನೇ ಕ್ರಾಸ್‍ನ ಬಾಲಾಜಿ ನರ್ಸೀಂಗ ಹೋಂ ಬಳಿ ಗುಂಡಿ ತೆಗೆದು ವಾರಗಳೇ ಕಳೆದಿದ್ದರೂ ಮುಚ್ಚಿಲ್ಲ. ಇದರಿಂದ ಆ ಭಾಗದಲ್ಲಿ ಅಂಬುಲೇನ್ಸ್‍ಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದು ಖುದ್ದ ವೈದ್ಯರೇ ಆಯುಕ್ತರಲ್ಲಿ ದೂರಿದರು.
ಸಾರ್ವಜನಿಕರ ಮನವಿಯನ್ನು ಆಲಿಸಿದ ಆಯುಕ್ತರು ಸ್ಥಳಕ್ಕೆ ಸ್ಮಾರ್ಟ್ ಸಿಟಿ ಎಇಇ ಅವರನ್ನು ಕರೆಯಿಸಿ ಮುಂದಿನ 15 ದಿನಗಳಲ್ಲಿ ಕೆಲಸ ಪೂರ್ಣಗೊಳ್ಳದಿದ್ದರೆ ನಿಮ್ಮ ವಿರುದ್ದ ಸರಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.ಮುಂದಿನ ಶುಕ್ರವಾರ ಸ್ಮಾರ್ಟಸಿಟಿ ಕಾಮಗಾರಿಗಳ ಕುರಿತಂತೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆ ವೇಳೆಯೂ ಜನರಿಗೆ ಆಗುತ್ತಿರುವ ತೊಂದರೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಲಾಗುವುದು ಎಂದು ಆಯುಕ್ತರು ನಾಗರಿಕರಿಗೆ ಭರವಸೆ ನೀಡಿದರು.
15ನೇ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಗರದ ವಿವಿಧೆಡೆ ಸ್ಮಾರ್ಟಸಿಟಿ ಕಾಮಗಾರಿಗಳು ನಡೆಯುತ್ತಿವೆ.ಆದರೆ ಇದುವರೆಗೂ ಪೂರ್ಣಗೊಂಡಿಲ್ಲ.ಜನರು ಇನ್ನಿಲ್ಲದ ತೊಂದರೆ ಅನುಭವಿ ಸುತಿದ್ದಾರೆ.ಈ ಬಗ್ಗೆ ಹಲವು ಬಾರಿ ಸ್ಮಾರ್ಟ ಸಿಟಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ನಮ್ಮ ಮಾತಿಗೆ ಬೆಲೆ ನೀಡುವುದಿಲ್ಲ. ಹಾಗಾಗಿ ಆಯುಕ್ತರನ್ನು ವಾರ್ಡು ಭೇಟಿ ನೀಡುವಂತೆ ಕೇಳಿಕೊಳ್ಳಲಾಯಿತು. ಅವರು ಭೇಟಿ ನೀಡಿ ವಾಸ್ತಾವಾಂಶ ಅರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ಈ ವೇಳೆ ಪಾಲಿಕೆಯ ಉಪಮೇಯರ್ ಶಶಿಕಲ ಗಂಗಹನುಮಯ್ಯ, ಪಾಲಿಕೆಯ ಇಂಜಿನಿಯರ್ ನೇತ್ರಾವತಿ, ವಾರ್ಡಿನ ಮುಖಂಡರಾದ ಜಿ.ಕೆ.ಶ್ರೀನಿವಾಸ್, ಸ್ಮಾರ್ಟಸಿಟಿ ಅಧಿಕಾರಿಗಳು ಮತ್ತಿತರರು ಜೊತೆಗಿದ್ದರು.





