ಮಧುಗಿರಿ:

      ತಾಲೂಕಿನ ಮೈದನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಲೈಂಗಿಕ ಕಿರುಕುಳ ಒಳಪಟ್ಟಿದ್ದ ಅಪ್ರಾಪ್ತ ಬಾಲಕಿಗೆ ಮನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಗುರುವಾರದಂದು ಮಗುವಿನ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು,

      ಕೊಡಿಗೇನಹಳ್ಳಿ ಹೋಬಳಿಯ ಮೈದನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಬಂಧಿಸಿದ್ದಾರೆ, ಆರೋಪಿಗೆ ನ್ಯಾಯಲಯದಲ್ಲಿ ತಕ್ಕ ಶಿಕ್ಷೆಯಾಗುವಂತೆ ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಕ್ರಮ ವಹಿಸುತ್ತಾರೆ. ರಾಜ್ಯದಲ್ಲಿ 1 ಸಾವಿರ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲೇ ಅನುದಾನ ದೊರೆಯಲಿದೆ ಎಂದರು.

      ಗ್ರಾಮಾಂತರ ಪ್ರದೇಶದಲ್ಲಿರುವ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಈಗಾಗಲೇ ಕ್ರಿಯಾ ಯೋಜನೆ ಸಿದ್ದವಾಗಿದ್ದು ಪಟ್ಟಣ ಪ್ರದೇಶಗಳಲ್ಲಿ ನಿವೇಶನಗಳ ಕೊರೆತೆಯಿಂದ ತಡವಾಗುತ್ತಿದೆ ಆದರೂ ಸ್ಥಳಿಯ ಸಂಸ್ಥೆಗಳಲ್ಲಿ ನಿವೇಶನಗಳನ್ನು ಓದಗಿಸಿಕೊಡುವಂತೆ ಆಯಾ ಕ್ಷೇತ್ರದ ಶಾಸಕರಿಗೆ ಪತ್ರದ ಮೂಲಕ ತಿಳಿಸಲಾಗಿದೆ ಎಂದರು.

      ಗಡಿಭಾಗಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲು ಸಿಡಿಪಿಓ ಇಲಾಖೆ ಹಾಗೂ ತಾಲೂಕು ಆಡಳಿತ ಸಾಕಷ್ಟು ಶ್ರಮವಹಿಸಿದ್ದು ಹಲವು ಪ್ರಕರಣಗಳನ್ನು ಸಹ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ, ಮಾತೃಪೂರ್ಣ ಯೋಜನೆಯಡಿ ಬಾಣಂತಿಯರು ಮತ್ತು ಗರ್ಭೀಣಿಯರಿಗೆ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ಕರೋನಾದಿಂದ ಅವರ ಮನೆ ಬಾಗಲಿಗೆ ತಲುಪಿಸಲಾಗುತ್ತಿದೆ ಮತ್ತು ಅಂಗನವಾಡಿ ಮಕ್ಕಳಿಗೂ ಸಹ ನೀಡಲಾಗುತ್ತಿದೆ ಎಂದರು.

      ಸಾಂತ್ವಾನ ಹೇಳದ ಶಾಸಕ: ಮಧುಗಿರಿ ತಾಲೂಕು ವ್ಯಾಪ್ತಿಯಲ್ಲಿ ಘಟನೆ ನಡೆದು ಒಮದು ವಾರ ಕಳೆದರೂ ಕನಿಷ್ಠ ಸೌಜನ್ಯಕ್ಕಾದರೂ ಶಾಸಕ ಎಂ.ವಿ ವೀರಭಧ್ರಯ್ಯ ಭೇಟಿ ನೀಡಿಲ್ಲಾ, ಕನಿಷ್ಠ ಸಂತ್ರಸ್ಥೆ ಕುಟುಂಬಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಲು ಸಮಯವಿಲ್ಲವೇ ಎಂದು ರಾಜ್ಯ ಸರಕಾರದ ಸಚಿವರು ಗಡಿಭಾಗದ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರೂ ಶಾಸಕರು ಮಾತ್ರ ಇತ್ತ ಸುಳಿದಿಲ್ಲವೆಂದು ಸಿಂಗನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮೈದನಹಳ್ಳಿ ಕಾಂತರಾಜು ಆರೋಪಿಸಿದರು.

     ಈ ಸಂದರ್ಭದಲ್ಲಿ ತಹಶಿಲ್ದಾರ್ ಡಾ ಜಿ ವಿಶ್ವನಾಥ್, ತಾಪಂ ಇಓ ದೊಡ್ಡಸಿದ್ದಪ್ಪ, ಸಿಡಿಪಿಓ ಅನಿತಾ, ಪಿಡಿಓ ವೆಂಕಟೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಸಿಪಿಐ ಎಂ.ಎಸ್.ಸರ್ದಾರ್, ಪಿಎಸೈ ಪಾಲಾಕ್ಷಪ್ರಭು, ಎಎಸೈ ಮೆಹಬೂಬ್ ಖಾನ್, ಸೂಪರ್‍ವೈಸರ್ ಮುಮ್ತಾಜ್, ಬಿಜೆಪಿ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ವಿಸ್ತಾರಕ ಲಕ್ಷ್ಮಿಪತಿ, ಎಸ್ಟಿ ಮೂರ್ಚಾ ಅಧ್ಯಕ್ಷ ಪ್ರಕಾಶ್, ರೈತ ಅಧ್ಯಕ್ಷ ಸುರೇಶ್ ರೆಡ್ಡಿ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಕಾರ್ಯದರ್ಶಿ ಕಲ್ಪನಾ ಗೋವಿಂದರಾಜು, ಹಿರಿಯ ಮುಖಂಡರಾದ ನಾಗರಾಜಪ್ಪ, ಲಂಬು ಮಂಜಾ, ವೆಂಕಟೇಶ್, ನಾಗೇಂದ್ರ ಹಾಜರಿದ್ದರು.

(Visited 9 times, 1 visits today)