ತುಮಕೂರು
ರಾಷ್ಟçದ ಭವಿಷ್ಯದ ಮತ್ತು ವಿದ್ಯಾರ್ಥಿಗಳ ಸರ್ವತೋಮುಖವಿಕಾಸಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟಿçÃಯ ಶಿಕ್ಷಣ ನೀತಿಯನ್ನು ರದ್ದುಮಾಡದೆ ರಾಜ್ಯಸರ್ಕಾರ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಮಾಧ್ಯಮಿಕ ಶಿಕ್ಷಣ ಸಂಘದ ಕಾರ್ಯಾಧ್ಯಕ್ಷರು ಆದ ಅರುಣ ಶಹಪುರವರು ಆಗ್ರಹಿಸಿದರು.
ಅವರು ಪೀಪಲ್ ಪೋರಂ ಫಾರ್ ಕರ್ನಾಟಕ ಎಜುಕೇಷನ್‌ನಿಂದ ತುಮಕೂರು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಶಿಕ್ಷಣ ತಜ್ಞರು. ಪೋಷಕರು, ವಿದ್ಯಾರ್ಥಿಗಳಿಗಾಗಿ ರಾಷ್ರಿöçÃಯ ಶಿಕ್ಷಣ ನೀತಿ ಪರಿಣಾಮಕಾರಿ ಅನುಷ್ಠಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಯಾವ ಕಾರಣಕ್ಕಾಗಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಈ ಶಿಕ್ಷಣ ನೀತಿಯನ್ನಯನ್ನು ರದ್ದುಗೊಳಿಸಲು ಕಾರಣ ಕೊಡಬೇಕು. ಅಂಗನವಾಡಿಯಿAದ ವಶ್ವವಿದ್ಯಾಲಯ ಮಟ್ಟದವೆರೆಗು ಶಿಕ್ಷಣದಲ್ಲಿ ಹೊಸ ಕಲಿಕಾ ವಿಧಾನ, ವ್ಯಕ್ತಿತ್ವ ವಿಕಾಸ ವಾಗುವಂತಹ ಅಂಶಗಳನ್ನ ಮಕ್ಕಳಿಗೆ ಕಲಿಸುವಂತಹ ಶಿಕ್ಷಕರಿಗೆ ಕಾಲ ಕಾಲಕ್ಕೆ ಉನ್ನತ ತರಭೇತಿ ನೀಡುವಂತಹ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದಂತಹ ಒಂದು ರಚನಾತ್ಮಕ ಚೌಕಟ್ಟನ್ನ ಅನೇಕ ಶಿಕ್ಷಣ ತಜ್ಞರು ರೂಪಿಸಿರುವಂತಹ ಈ ಶಿಕ್ಷಣ ನೀತಿಯನ್ನ ರದ್ದುಮಾಡವ ಉದ್ದೇಶವೇನು? ಎಂದು ಮಾತನಾಡಿದರು.
ಈ ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ರವರು ಮಾತನಾಡುತ್ತ ರಾಷ್ಟಿçÃಯ ಶಿಕ್ಷಣ ನೀತಿಯು ಸರ್ವರನ್ನು ಒಳಗೊಂಡಿರುವAತಹ ವಿದ್ಯಾರ್ಥಿಗಳ ಭವಿಷ್ಯವನ್ನ ರೂಪಿಸುವಂತಹ ನೀತಿಯಾಗಿದ್ದು. ಶಿಕ್ಷಣ ಕ್ಷೇತ್ರದ ಅಮೂಲಾಗ್ರ ವಿಕಾಸದ ಆಶಯವನ್ನ ಹೊಂದಿದ್ದು. ಇದನ್ನ ಯಾವುದೇ ವಿವೇಚನೆ ಇಲ್ಲದೆ ಕಾಂಗ್ರೆಸ್ ಸರ್ಕಾರ ತೆಗೆಯಲು ಹೊರಟಿರುವುದು ಖಂಡನೀಯ ಎಂದು ಹೇಳಿದರು.
ಈಸಭೆಯಲ್ಲಿ ಭಾಗವಹಿಸಿದ ಶಿಕ್ಷಣ ತಜ್ಞರು ನಿವೃತ್ತ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಶ್ರೀ ರಾಮ್ ರವರು. ಉತ್ತಮ ಚಿಂತನೆಗಳನ್ನ ಒಳಗೊಂಡಿದ್ದು ಇದನ್ನ ರಾಜಕಾರಣಗೊಳಿಸಬಾರದು ಇದರಿಂದ ವಿದ್ಯಾರ್ಥಿಗಳು ಪೋಷಕರು ಗೊಂದಲಕ್ಕೆ ಒಳಗಾಗುತ್ತಾರೆ ಎಂದು ಹೇಳಿದರು. ಸಭೆಯಲ್ಲಿ ಶಿಕ್ಷಣ ತಜ್ಞರು ಪೋಷಕರು ಮತ್ತು ವಿದ್ಯಾರ್ಥಿಗಳು ಅನೇಕ ಅರಿಶಗಳ ಬಗ್ಗೆ ಸಂವಾದ ನಡೆಸಿದರು. ನಿಕಟ ಪೂರ್ವ ಸಿಂಡಿಕೇಟ್ ಸದಸ್ಯರಾದ ಆಶ್. ಕೆ ಶ್ರೀ,ನಿವಾಸ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಭೆಯಲ್ಲಿ ಶಾಸಕರಾದ ಜಿ. ಬಿ. ಜ್ಯೋತಿಗಣೇಧ್ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹುಲಿನಾಯ್ಕರ್, ಮಾಜಿ ಜಿ. ಪಂ ಅಧ್ಯಕ್ಷರಾದ ಹುಚ್ಚಯ್ಯ , ಕ ಸಾ ಪ ಅಧ್ಯಕ್ಷರಾದ ಸಿದ್ದಲಿಂಗಪ್ಪ, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.