ತುಮಕೂರು :

      ನಗರದಲ್ಲಿಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ, ದಂತ ವೈದ್ಯಕೀಯ ಕಾಲೇಜು ತುಮಕೂರು ಇವರ ಸಂಯುಕ್ತ ಆಶ್ರದಲ್ಲಿ ರಾಷ್ಟ್ರೀಯ ಪ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ನಾಗಾರ್ಜುನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

      ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕುಲಪತಿಗಳಾದ ಡಾ.ಜಿ.ಪರಮೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ಲೋರೋಸಿಸ್ ನಿಂದ ಆಗುವ ತೊಂದರೆಗಳನ್ನ ತಡೆಗಟ್ಟವಲ್ಲಿ ಮತ್ತು ನೀಡಲಾಗುವ ಚಿಕಿತ್ಸೆಯ ಜೊತೆಯಲ್ಲಿ ಇನ್ನಿತರ ದುಷ್ಪರಿಣಾಮಗಳ ಕುರಿತಾದ ಸಂಶೋಧನೆಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು.

      ದಂತ ಪ್ಲೋರೋಸಿಸ್ ಕುರಿತಾಗಿ ಡಾ.ಭರತೇಶ್, ಮೂಳೆಗಳ ಪೆÇ್ಲೀರೋಸಿಸ್ ಕುರಿತಾಗಿ ಡಾ.ರವಿಕುಮಾರ್, ಪ್ಲೋರೋಸಿಸ್ ನಿಯಂತ್ರಣದ ಕ್ರಮಗಳ ಕುರಿತಾಗಿ ಡಾ.ಚೇಲುವೆಗೌಡ, ರಾಷ್ಟ್ರೀಯ ಪ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿನ ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಮಾಹಿತಿಯನ್ನು ಡಾ.ಕೇಶವರಾಜು ಅವರು ತಿಳಿಸಿದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಜಿ.ನಾಗೇಂದ್ರಪ್ಪ,ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕರು, ಉಪ ಕುಲಪತಿಗಳು, ದಂತ ವೈದ್ಯಕೀಯ, ಸಮುದಾಯ ವೈದ್ಯಕೀಯ, ಕೀಲು ಮೂಳೆ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಇತರರು ಕಾರ್ಯಕ್ರಮ ದಲ್ಲಿ ಉಪಸ್ಥಿತಿ ಇದ್ದರು.

(Visited 12 times, 1 visits today)