ತುಮಕೂರು:

      ತುಮಕೂರು ನಗರದಲ್ಲಿ ಲೋಕೋಪಯೋಗಿ ಇಲಾಖೆಯ ಸುಮಾರು 4.50 ಕೋಟಿ ರೂಗಳಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಸಿಸಿ ರಸ್ತೆ, ಚರಂಡಿ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

      ನಗರದ 26ನೇ ವಾರ್ಡಿನ ಆಶೋಕ ನಗರದ 9ನೇ ಅಡ್ಡರಸ್ತೆಯಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಯನ್ನು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು,ನಗರದ ಸತ್ಯಮಂಗಲ, ಮಂಜುನಾಥ ನಗರ,ಗಿರಿನಗರ, ಅಶೋಕ ನಗರ,ಸರಸ್ವತಿಪುರಂಗಳಲ್ಲಿ ಸಿಸಿ ರಸ್ತೆ,ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಸರಸ್ವತಿಪುರಂ ಮತ್ತು ಅಶೋಕನಗರದ ಮುಖ್ಯ ರಸ್ತೆಗಳು ಚನ್ನಾಗಿದ್ದರೂ ಒಳಗಡೆ ಇರುವ ರಸ್ತೆಗಳು,ಅಲ್ಲಿರುವ ಜನರು ಇನ್ನೂ ಕೊಳಗೇರಿ ರೀತಿ ಯಲ್ಲಿಯೇ ವಾಸ ಮಾಡುತ್ತಿದ್ದಾರೆ.ಹಾಗಾಗಿ ಕೆಲವು ವಾರ್ಡುಗಳನ್ನು ಹೊರತು ಪಡಿಸಿ ಉಳಿದಂತೆ 35 ವಾರ್ಡು ಗಳಿಗೂ ಎಸ್ಸಿಪಿ ಹಣವನ್ನು ವಿನಿಯೋಗಿಸಲಾಗಿದೆ ಎಂದರು.

      ಕೇಂದ್ರ ಮತ್ತು ರಾಜ್ಯ ಸರಕಾರದ ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಪ್ರಮುಖ ರಸ್ತೆಗಳಾದ ಮಹಾತ್ಮಗಾಂಧಿ ರಸ್ತೆ,ಅಶೋಕ ರಸ್ತೆ,ಮಂಡಿಪೇಟೆ ರಸ್ತೆ,ಬಿ.ಹೆಚ್.ರಸ್ತೆಗಳ ಅಭಿವೃದ್ದಿಯ ಜೊತೆಗೆ,ಮಹಾತ್ಮಗಾಂಧಿ ಕ್ರೀಡಾಂಗಣ,ಬಸ್ ನಿಲ್ದಾಣ,ಸರಕಾರಿ ಜೂನಿಯರ್ ಕಾಲೇಜು,ಏಂಪ್ರೆಸ್ ಕಾಲೇಜು ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗಿದೆ.ಸ್ಮಾರ್ಟ್‍ಸಿಟಿ ಹಣವನ್ನು ಕೆಲವು ವಾರ್ಡುಗಳನ್ನು ಹೊರತು ಪಡಿಸಿ ಉಳಿದ ವಾರ್ಡುಗಳಿಗೆ ಕೇವಲ ಪಾರ್ಕುಗಳ ಅಭಿವೃದ್ದಿಗೆ ಮಾತ್ರ ಬಳಕೆ ಮಾಡಲಾಗಿದೆ.ಈ ರೀತಿಯ ಅಭಿವೃದ್ದಿ ಕಾರ್ಯಗಳು ಮುಖ್ಯಮಂತ್ರಿಗಳು ನೀಡಿದ 35 ಕೋಟಿ ವಿಶೇಷ ಅನುದಾನ ಹಾಗೂ ವಿವಿಧ ಇಲಾಖೆಗಳ ವಿಶೇಷ ಅನುದಾನದಲ್ಲಿ ಬಿಡುಗಡೆಯಾದ ಅನುದಾನವನ್ನು ಬಳಕೆ ಮಾಡಲಾಗಿದೆ.ಮುಖ್ಯರಸ್ತೆಗಳ ಜೊತೆಗೆ ಸಬ್ ರೋಡ್‍ಗಳ ಅಭಿವೃದ್ದಿಗೂ ಒತ್ತು ನೀಡಲಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.

      ಈ ವೇಳೆ 26ನೇ ವಾರ್ಡಿನ ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ,ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಮುಕ್ತಿಯಾರ್,ಸದಾನಂದ್, ತಿಮ್ಮಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 11 times, 1 visits today)