ತುಮಕೂರು:

      ತುಮಕೂರು ನಗರವನ್ನು ಪರಿಸರ ಸ್ನೇಹಿ, ಉತ್ತಮ, ಸುಂದರ ನಗರ ಮಾಡಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮಹಾನಗರ ಪಾಲಿಕೆಗಳು ಜಂಟಿಯಾಗಿ ಕೈಗೊಂಡಿರುವ ಗೋಡೆಗಳ ಮೇಲೆ ವರ್ಣರಂಜಿತ 3ಡಿ ಚಿತ್ರಗಳನ್ನು ಬಿಡಿಸುತ್ತಿರುವ ಈ ಕಾರ್ಯ ನಗರಕ್ಕೆ ಹೊಸ ಮೆರಗು ತರಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.

      ನಗರವನ್ನು ಸುಂದರವಾಗಿಸುವ ಉದ್ದೇಶದಿಂದ ನಗರದ ಪ್ರವೇಶ ದ್ವಾರ ಬಟವಾಡಿ ಪ್ರದೇಶದಲ್ಲಿ ಏರ್ಪಡಿಸಿದ್ದ ಗೋಡೆಗಳ ಮೇಲೆ ವರ್ಣರಂಜಿತ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಹಲವಾರು ಯೋಜನೆಗಳನ್ನು ಈಗಾಗಲೇ ಹಮ್ಮಿಕೊಂಡಿದ್ದು, ನಗರದ ಗೋಡೆಯ ಮೇಲೆ ಚಿತ್ರವನ್ನು ಬಿಡಿಸುವ ಕಾರ್ಯಕ್ರಮದ ಮೂಲಕ ನಗರ ಇನ್ನಷ್ಟು ಸುಂದರ ಕಾಣಲಿದೆ. ಇಂತಹ ಕಾರ್ಯಕ್ರಮಗಳಿಂದ ದೃಶ್ಯ ಕಲೆಗಳಿಗೆ ಮಹತ್ವ ಕೊಟ್ಟಂತಾಗುತ್ತದೆ.

      ತೋಟಗಾರಿಕೆ ಇಲಾಖೆಯು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದು, ಖ್ಯಾತ ವರ್ಣರಂಜಿತ ಕಲಾಕಾರರ ಸಂಸ್ಥೆಯಾದ “Uಉಐಙ IಓಆIಂಓS” ಚಿತ್ರಕಾರರು ನಗರದ ಬಟವಾಡಿ ಫ್ಲೈಓವರ್ ಗೋಡೆಯ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಿದರು.

      ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಲಲಿತ ರವೀಶ್, ಪಾಲಿಕೆ ಆಯುಕ್ತ ಟಿ.ಭೂಬಾಲನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು, ಸ್ಮಾರ್ಟ್‍ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್, ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ವಿ.ವಿ.ಪಿ.ರಾವ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

(Visited 36 times, 1 visits today)