BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ
  • ಮತದಾರರ ಗಣಕೀಯ ನಮೂನೆ ಶೇ.೧೦೦ರಷ್ಟು ಪ್ರಗತಿ
  • ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ
  • ವೇತನ, ಪಿಎಫ್ ಬಾಕಿ: ಹೊರಗುತ್ತಿಗೆದಾರರ ಶಾಂತಿಯುತ ಪ್ರತಿಭಟನೆ
  • ವಿಪತ್ತು ನಿರ್ವಹಣೆ ತಾಲೂಕು ಮಟ್ಟದ ಅಧಿಕಾರಿಗಳೇ ಹೊಣೆ
  • ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಅರ್ಜಿ ಆಹ್ವಾನ
  • ಕೇವಲ ಅಂಕ ಗಳಿಕೆಯಷ್ಟೇ ಶಿಕ್ಷಣದ ಉದ್ದೇಶವಲ್ಲ
  • ಶಿಕ್ಷಣ ಮಂತ್ರಿಯನ್ನು ಸಂಪುಟದಿ0ದ ವಜಾಗೊಳಿಸಲು ರಾಷ್ಟçಪತಿಗೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸುಳ್ಳು ಭರವಸೆ ಮೂಲಕ ಬಿಜೆಪಿಯಿಂದ ಜನರಿಗೆ ಮೋಸ-ಶೇಷಾದ್ರಿ
ತುಮಕೂರು ಜಿಲ್ಲಾ ಸುದ್ಧಿಗಳು

ಸುಳ್ಳು ಭರವಸೆ ಮೂಲಕ ಬಿಜೆಪಿಯಿಂದ ಜನರಿಗೆ ಮೋಸ-ಶೇಷಾದ್ರಿ

By News Desk BenkiyabaleUpdated:April 05, 2019 6:03 pm

 ತುಮಕೂರು:

      ದೇಶದಲ್ಲಿ ಸುಳ್ಳುಹೇಳುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಬಡಜನರನ್ನು, ಕಾರ್ಮಿಕ ವರ್ಗದವರನ್ನು ಮೋಸ ಮಾಡಿದ್ದಾರೆ ಎಂದು ಸಿಪಿಐನ ಜಿಲ್ಲಾ ಉಸ್ತುವಾರಿ ಶೇಷಾದ್ರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

      ಸಿಪಿಐ ಪಕ್ಷದ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಡಜನರಿಗೆ ವಿವಿಧ ಆಶ್ವಾಸನೆಗಳನ್ನು ನೀಡಿತ್ತು.ಅದರಲ್ಲಿ ಇಲ್ಲಿಯವರೆಗೆ ಯಾವೊಂದು ಭರವಸೆಯೂ ಈಡೇರಿಲ್ಲ. ಬದಲಿಗೆ ನೋಟು ಅಮಾನಿಕರಣ, ಜಿಎಸ್‍ಟಿ ಜಾರಿಯಂತಹ ಯೋಜನೆಗಳಿಂದ ಬಡವರಿಗೆ ಸಮಸ್ಯೆಯನ್ನುಂಟು ಮಾಡಿದೆ ಎಂದರು.

      ಇಂದು ಕೇಂದ್ರದಲ್ಲಿ ಬಿಜೆಪಿ ಪಕ್ಷ ಇಲ್ಲ.ಮೋದಿ ಪಕ್ಷ ಮಾತ್ರ ಇದೆ. ಮೋದಿಯವರು ಸರ್ವಾಧಿಕಾರ ಧೋರಣೆಯನ್ನು ತೋರುತ್ತಿದ್ದಾರೆ. ಅದಕ್ಕಾಗಿಯೇ ವಿವಿಧ ಪಕ್ಷಗಳು ಬಿಜೆಪಿಯೊಂದಿಗಿನ ಮೈತ್ರಿ ತ್ಯಜಿಸಿ ಬೇರೆಯಾಗಿದ್ದಾರೆ. ಕೇಂದ್ರ ಸರ್ಕಾರವು ರೈತರ ಹಾಗೂ ಕಾರ್ಮಿಕರ ವಿರೋಧಿಯಾಗಿದೆ.ಚುನಾವಣೆ ಮುಂಚೆ ಸದಾಶಿವ ಆಯೋಗದ ವರದಿ ಜಾರಿ ಮಾಡಲಾಗು ತ್ತದೆ ಎಂದು ಹೇಳಿತ್ತು.ಇಂದು ಸದಾಶಿವ ಆಯೋಗ ವರದಿ ಜಾರಿಮಾಡಲು ಆಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಪತ್ರ ಸಲ್ಲಿಸಿದ್ದಾರೆ.ಇದೀಗ ಚುನಾವಣೆ ಬಂದಾಗ ರೈತ ಕುಟುಂಬಗಳಿಗೆ ಒಂದು ವರ್ಷದಲ್ಲಿ 6 ಸಾವಿರ ರೂ ನೀಡಲಾಗುತ್ತೆ ಎಂದು ಘೋಷಣೆ ಮಾಡಿರುವುದು ವಿಪರ್ಯಾಸ ಎಂದರು.

      ಪ್ರಧಾನಿ ಅದವರು ಪ್ರಧಾನ ಸೇವಕ ಎಂದು ಬಿಂಬಿಸಿದ್ದರು. ಆದರೆ ಇಂದು ಯಾರಿಗೆ ಸೇವಕರಾಗಿದ್ದಾರೆ ಎಂಬುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ.ಬೆರಳಣಿಕೆಯ ಶ್ರೀಮಂತರಿಗೆ ಮಾತ್ರ ಸೇವಕರಾಗಿದ್ದಾರೆ. ದೇಶದಲ್ಲಿ 10 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದಿದ್ದ ಮೋದಿಯವರು ಸೃಷ್ಠಿ ಮಾಡಿದ್ದು ಕೇವಲ 27 ಲಕ್ಷ ಮಾತ್ರ. ಈ ನಿಟ್ಟಿನಲ್ಲಿ ಅನೇಕ ವಿದ್ಯಾವಂತರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ.ತುಮಕೂರು ಜಿಲ್ಲೆಯಲ್ಲಿನ ಫುಡ್ ಪಾರ್ಕ್‍ನಲ್ಲಿ ಉದ್ಯೋಗ ಸೃಷ್ಠಿಯಾಗಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಲಭಿಸುತ್ತಿಲ್ಲ.ಅಲ್ಲದೆ ಇವರ ಕಾರ್ಮಿಕ ವಿರೋಧಿ ನೀತಿಗಳಿಂದ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದರಲ್ಲದೆ, ಅಚ್ಚೆ ದಿನ್ ಎಂದು ಬೊಬ್ಬೆ ಹೊಡೆಯುವ ಮೋದಿಯವರಿಂದ ಕೇವಲ ಅಂಬಾನಿ, ಅದಾನಿ, ನೀರವ್‍ಮೋದಿ, ವಿಜಯ್ ಮಲ್ಯ ಅಂತಹವರಿಗೆ ಮಾತ್ರ ಅಚ್ಚೆದಿನ್ ಬಂದಿದೆ ಹೊರತು ಬಡಜನರಿಗಲ್ಲ ಎಂದು ಆರೋಪಿಸಿದರು.

      ಮೋದಿಯವರು ಸ್ವಚ್ಛಭಾರತ್ ಎಂಬ ಘೋಷಣೆ ಮಾಡಿ ಕೇವಲ ಒಂದೆರಡು ಕಡೆ ಪೊರಕೆ ಇಟ್ಟುಕೊಂಡು ಫೋಟೋಗಳಿಗೆ ಫೋಸ್ ನೀಡಿದ್ದಾರೆ ಹೊರತು ಸ್ವಚ್ಛಭಾರತ್ ಸಮರ್ಪಕವಾಗಿ ಜಾರಿಯಾಗಿಲ್ಲ.ಈ ಯೊಜನೆ ಅಡಿಯಲ್ಲಿ ಪ್ರತಿ ಮನೆಮನೆಗೆ ಶೌಚಾಲಯಗಳನ್ನು ನಿರ್ಮಿಸಿದರು. ಇದು ಒಳ್ಳೆಯ ಕೆಲಸವಾದರೂ ಈ ಶೌಚಾಲಯಗಳಿಗೆ ನೀರು ಇಲ್ಲದೆ ಹಿಂದಿನ ಸ್ಥಿತಿಯೇ ಮುಂದುವರೆದಿದೆ ಎಂದು ಶೇಷಾದ್ರಿ ದೂರಿದರು.

      ಸಿಪಿಐ(ಎಂ)ಪಕ್ಷದ ಬಿ.ಉಮೇಶ್ ಮಾತನಾಡಿ, ಮೋದಿಯವರು ನೀಡಿದ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ ಹೊರತು ಅವು ಈಡೇರಿಲ್ಲ. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ತೈಲ ಬೆಲೆ ಹೆಚ್ಚು ಮಾಡಿದ್ದಾರೆ. ಕೇವಲ 400 ರಿಂದ 500 ಇದ್ದ ಗ್ಯಾಸ್ ಬೆಲೆ ಇಂದು 800ಕ್ಕೇರಿದೆ. ಈ ಮುಂಚೆ 23000 ಸಾವಿರ ಇದ್ದ ಆರ್‍ಎಸ್‍ಎಸ್ ಶಾಖೆಗಳು ಇಂದು 85 ಸಾವಿರವರೆಗೆ ಬೆಳೆದಿವೆ. ಇವರು ಕೇವಲ ಇವರ ಸಂಘ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಲುತ್ತಿದ್ದಾರೆ ಹೊರತು ಜನ ಸಮಾನ್ಯರ ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ ಎಂದರು.

      ಈ ಹಿಂದೆ ಎಡಪಕ್ಷಗಳು ರಾಷ್ಟ್ರೀಯ ಪಕ್ಷಗಳು ಮಾಡುತ್ತಿದ್ದ ವಿರೋಧ ಧೊರಣೆ ಬಗ್ಗೆ ಮಾತನಾಡಿದರೆ ನಮ್ಮ ಮೇಲೆ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಈಗ ಎಡಪಕ್ಷಗಳು ಮುಂದಾಲೋಚನೆ ಮಾಡಿವೆ. ಅವರಿಗೆ ಬೆಂಬಲ ನೀಡಬೇಕು ಎಂಬ ಭಾವನೆ ಮತದಾರರಲ್ಲಿ ಬಂದಿದೆ. ಈ ನಿಟ್ಟಿನಲ್ಲಿ ಅತ್ಯಧಿಕ ಮತಗಳಿಂದ ಸಿಪಿಐ ಅಭ್ಯರ್ಥಿ ಶಿವಣ್ಣ ಅವರು ಗೆಲ್ಲಲಿದ್ದಾರೆ ಎಂದು ತಿಳಿಸಿದರು.

      ಸಿಪಿಐನ ರಾಜ್ಯ ಕಾರ್ಯದರ್ಶಿ ಕೆ.ಎಸ್.ಜನಾರ್ಧನ್ ಮಾತನಾಡಿ, ಬಿಜೆಪಿ ಪಕ್ಷದವರು ಸಭೆಗಳಿಗೆ ಜನರಿಗೆ ಹಣ ನೀಡಿ ಕರೆಯಿಸಿ ಅವರಿಂದ ಮೋದಿ ಮೋದಿ ಎಂದು ಜೈಕಾರ ಕೂಗಿಸಿ ಮೋದಿ ಅಲೆ ಇದೆ ಎಂದು ಬಿಂಬಿಸುತ್ತಿದ್ದಾರೆ. ಜನಸಾಮಾನ್ಯರಿಗೆ ಉಪಯೋಗವಾಗುವ ಯೋಜನೆಗಳನ್ನು ಒಂದೂ ತಂದಿಲ್ಲ. ಕೇವಲ ಭರವಸೆ ಕೊಡು ಮುಖ ತಿರುಚುವ ಬಿಜೆಪಿಯನ್ನು ತಿರಸ್ಕರಿಸಿ ಎಂದು ತಿಳಿಸಿದರು.

       ಸಿಪಿಐನ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ,ಅಭ್ಯರ್ಥಿ ಪರವಾಗಿ ಈಗಾಗಲೇ ವಿವಿಧ ತಾಲೂಕುಗಳಲ್ಲಿ ಪ್ರಚಾರ ಕಾರ್ಯ ಮುಕ್ತಾಯಗೊಂಡಿದೆ. ಉಳಿದ ತಾಲೂಕುಗಳಲ್ಲಿಯೂ ಪ್ರಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

 

(Visited 124 times, 1 visits today)
Previous Articleಯಾವುದೇ ಆಮಿಷಕ್ಕೊಳಗಾಗದೆ ಮತದಾನ ಮಾಡಿ-ಸಿಇಓ ಕರೆ
Next Article ಕ್ಷೇತ್ರವನ್ನು ಜೆಡಿಎಸ್‍ನವರು ಪಡೆದುಕೊಂಡಿರುವುದು ಮೈತ್ರಿ ಧರ್ಮಕ್ಕೆ ವಿರುದ್ದ : ಕೆ.ಎನ್. ರಾಜಣ್ಣ
News Desk Benkiyabale

Related Posts

ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ

July 24, 2026 4:03 pm news

ಮತದಾರರ ಗಣಕೀಯ ನಮೂನೆ ಶೇ.೧೦೦ರಷ್ಟು ಪ್ರಗತಿ

July 24, 2026 4:01 pm news

ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ

July 24, 2026 4:00 pm news
ತಾಜಾ ಸುದ್ಧಿಗಳು
news

ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ

July 24, 2026 4:03 pm
news

ಮತದಾರರ ಗಣಕೀಯ ನಮೂನೆ ಶೇ.೧೦೦ರಷ್ಟು ಪ್ರಗತಿ

July 24, 2026 4:01 pm
news

ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ

July 24, 2026 4:00 pm
news

ವೇತನ, ಪಿಎಫ್ ಬಾಕಿ: ಹೊರಗುತ್ತಿಗೆದಾರರ ಶಾಂತಿಯುತ ಪ್ರತಿಭಟನೆ

July 24, 2026 3:58 pm
news

ವಿಪತ್ತು ನಿರ್ವಹಣೆ ತಾಲೂಕು ಮಟ್ಟದ ಅಧಿಕಾರಿಗಳೇ ಹೊಣೆ

July 24, 2026 3:55 pm
news

ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಅರ್ಜಿ ಆಹ್ವಾನ

July 23, 2026 4:58 pm
Our Youtube Channel
Our Picks

ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ

July 24, 2026 4:03 pm

ಮತದಾರರ ಗಣಕೀಯ ನಮೂನೆ ಶೇ.೧೦೦ರಷ್ಟು ಪ್ರಗತಿ

July 24, 2026 4:01 pm

ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ

July 24, 2026 4:00 pm

ವೇತನ, ಪಿಎಫ್ ಬಾಕಿ: ಹೊರಗುತ್ತಿಗೆದಾರರ ಶಾಂತಿಯುತ ಪ್ರತಿಭಟನೆ

July 24, 2026 3:58 pm

ವಿಪತ್ತು ನಿರ್ವಹಣೆ ತಾಲೂಕು ಮಟ್ಟದ ಅಧಿಕಾರಿಗಳೇ ಹೊಣೆ

July 24, 2026 3:55 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ

By News Desk BenkiyabaleJuly 24, 2026 4:03 pm

ತುಮಕೂರು: ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ-೨೦೨೬ ಪ್ರಕ್ರಿಯೆ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಶೇ.೧೦೦ರಷ್ಟು ಶುದ್ಧ ಮತದಾರರ ಪಟ್ಟಿಗಾಗಿ ರಾಜಕೀಯ…

ಮತದಾರರ ಗಣಕೀಯ ನಮೂನೆ ಶೇ.೧೦೦ರಷ್ಟು ಪ್ರಗತಿ

July 24, 2026 4:01 pm

ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ

July 24, 2026 4:00 pm

ವೇತನ, ಪಿಎಫ್ ಬಾಕಿ: ಹೊರಗುತ್ತಿಗೆದಾರರ ಶಾಂತಿಯುತ ಪ್ರತಿಭಟನೆ

July 24, 2026 3:58 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.