ತುಮಕೂರು:
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಂಡು, ಜನತೆ ಶಾಂತಿ, ನೆಮ್ಮದಿಯಿಂದ ಬದುಕುವಂತೆ ಮಾಡುವುದು ನಮ್ಮ ಇಲಾಖೆಯ ಮೊದಲ ಆದ್ಯತೆಯಾಗಿದೆ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶೋಕ್.ಕೆ.ವಿ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೭ನೇ ಸಾಲಿನ ಐಪಿಎಸ್ ಬ್ಯಾಚ್ ಅಧಿಕಾರಿಯಾಗಿದ್ದು, ಮೊದಲು ಉತ್ತರ ಪ್ರದೇಶದ ಆಗ್ರಾ ಗ್ರಾಮಾಂತರ ಎಸ್.ಪಿ.ಆಗಿ ಕಾರ್ಯನಿರ್ವಹಿಸಿ, ನಂತರ ಲೋಕಾಯುಕ್ತ ಎಸ್.ಪಿ.ಯಾಗಿ ಕರ್ನಾಟಕಕ್ಕೆ ವರ್ಗಾವಣೆಗೊಂಡಿದ್ದು, ಇದೇ ಮೊದಲ ಬಾರಿ ಕಾನೂನು ಸುವ್ಯವಸ್ಥೆಯ ಎಸ್.ಪಿ.ಯಾಗಿ ತುಮಕೂರು ಜಿಲ್ಲೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಸಾಮಾಜದ ಸೇವೆಯಲ್ಲಿ ತೊಡಗಿರುವ ಮಾಧ್ಯಮ ಮತ್ತು ಪೊಲೀಸ್ ಪರಸ್ಪರ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಜನರನ್ನು ಕಾಡುವ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಒದಗಿಸಬಹುದು ಎಂದರು.
ತುಮಕೂರು ಜಿಲ್ಲೆ ೧೦ ತಾಲೂಕುಗಳನ್ನು ಒಳಗೊಂಡ ದೊಡ್ಡ ಜಿಲ್ಲೆಯಾಗಿದೆ.ಒಂದೊAದು ಬೌಗೊಳಿಕ ಪರಿಸರದಲ್ಲಿ ಒಂದೊAದು ಬಗೆಯ ಜನರಿದ್ದಾರೆ. ಹಾಗಾಗಿ ಆಯಾಯ ಭೌಗೋಳಿಕ ಪರಿಸರದ ಮೇಲೆ ಅಲ್ಲಿನ ಪ್ರಕರಣಗಳು ಇರುತ್ತೇವೆ. ಈ ನಿಟ್ಟಿನಲ್ಲಿ ಇಡೀ ಜಿಲ್ಲೆಯನ್ನು ಒಮ್ಮೆ ಸಂಪೂರ್ಣವಾಗಿ ಅವಲೋಕಿಸಿ, ತದನಂತರ ಕಾರ್ಯಾಚರಣೆಗೆ ಇಳಿಯುತ್ತೇನೆ. ಸಂಜೆ ಎಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದೇನೆ.ಅವರಿಂದ ಮಾಹಿತಿ ಪಡೆದು,ಒಂದೊAದೇ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತೇನೆ.ಜನರು ಸಮಸ್ಯೆಗಳನ್ನು ಹೊತ್ತು ನಮ್ಮ ಬಳಿ ಬರುವುದಕ್ಕಿಂತ ಮುಂಚೆಯೇ ಅವರು ಇರುವಲ್ಲಿಯೇ ಅದನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಎಸ್.ಪಿ., ಕೆ.ವಿ.ಅಶೋಕ್ ತಿಳಿಸಿದರು.
ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಅಂಧ್ರ ಪ್ರದೇಶದಿಂದ ಸುತ್ತುವರಿದಿದ್ದು, ಹತ್ತಾರು ಕಿ.ಮಿ.ಆಂಧ್ರದ ಭೂ ಭಾಗದಲ್ಲಿ ಹಾದು ಹೋಗುವ ಸಂದರ್ಭದಲ್ಲಿ ಯಲ್ಲೋ ಬೋರ್ಡ್ ವಾಹನಗಳಿಗೆ ಸಾಕಷ್ಟು ದಂಡ ಹಾಕುತ್ತಿರುವುದ. ಗಮನಕ್ಕೆ ಬಂದಿದೆ. ಈ ಬಗ್ಗೆ ಆನಂತಪುರ ಎಸ್.ಪಿ ಮತ್ತು ಅಂಧ್ರ ಆರ್.ಟಿ.ಓ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಆಗುತ್ತಿರುವ ತೊಂದರೆ ತಪ್ಪಿಸಲು ಪ್ರಯತ್ನಿಸುವುದಾಗಿ ನುಡಿದರು.
ತುಮಕೂರು ಜಿಲ್ಲೆಯ ಜನತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಮ್ಮ ಕೋರಿಕೆ ಏನೆಂದರೆ, ಮುಂದೆ ಸಾಲು ಸಾಲು ಹಬ್ಬಗಳಿವೆ,ಗೌರಿ ಗಣೇಶ್ ರದ್, ದಸರಾ ಆಚರಣೆಯ ವೇಳೆ ಬೇರೆಯವರಿಗೆ ತೊಂದರೆಯಾಗದ ರೀತಿ ನಿಮ್ಮ ಹಬ್ಬಗಳನ್ನು ಸಂತೋಷದಿAದ ಆಚರಿಸಿ, ಜಿಲ್ಲೆಯಲ್ಲಿ ಶಾಂತಿ ನೆಲೆಸಿದ್ದು ಅದನ್ನು ಹಾಳು ಮಾಡದೆ, ಪೊಲೀಸರೊಂದಿಗೆ ಸಹಕರಿಸಿ ಸಮಾಜದಲ್ಲಿರುವ ವಿಚಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕಲು ಪೊಲೀಸರ ತನಿಖೆಗೆ ಸಹಕರಿಸಿ ಎಂದರು.
ತುಮಕೂರು ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿದ್ದು, ಅಲ್ಲಿನ ಕಾರ್ಮಿಕರು ಉದ್ಯಮಿಗಳಿಗೆ ರಕ್ಷಣೆ ನೀಡುವುದರ ಜೊತೆಗೆ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಕಡೆಗೂ ಗಮನಹರಿಸ ಬೇಕಾಗಿದೆ.ಈ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆಯನ್ನು ಮನಃರಚಿಸುವ ಕೆಲಸ ಮಾಡಲಾಗುವುದು.ಸಾರ್ವಜನಿಕರು ನನ್ನನ್ನು ಭೇಟಿಯಾಗಲು ಯಾವುದೇ ನಿರ್ಭಂಧವಿಲ್ಲ. ಅದೇ ರೀತಿ ಇಲಾಖೆಯ ಸಿಬ್ಬಂದಿಗಳು ನನ್ನನ್ನು ಭೇಟಿಯಾಗಲು ಮುಕ್ತ ಅವಕಾಶವಿದೆ.ಆದರೆ ಕಾನೂನು ಮೀರಿ ಕೆಲಸ ಮಾಡಿದರೆ, ಎಲ್ ಕೇಸುಗಳಲ್ಲಿ ತಲೆ ತೂರಿಸಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಿವೆ.ಅಲ್ಲದೆ ಕ್ರೈಮ ಸಹ ಇದೆ. ಇವುಗಳ ನಿಯಂತ್ರಣಕ್ಕೆ ಇಡೀ ಪೊಲೀಸ್ ಇಲಾಖೆ ಒಂದು ತಂಡವಾಗಿ ಕೆಲಸ ಮಾಡಲಿದೆ. ಗಣೇಶ ಪ್ರತಿಷ್ಠಾಪನೆ ಮಾಡುವವರಿಗೆ ಅನುಮತಿ ನೀಡಲು ಏಕಗವಾಕ್ಷಿ ಯೋಜನೆ ರೂಪಿಸಲಾಗಿದೆ.ಎಲ್ಲಾ ಅನುಮತಿಗಳು ಒಂದೇ ಕಡೆ ದೊರೆಯಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎ.ಎಸ್.ಪಿ. ಮರಿಯಪ್ಪ ಉಪಸ್ಥಿತರಿದ್ದರು.



