ತುಮಕೂರು : 

      ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ರೋಗಿಗಳಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ರೋಗಿಯ ಶ್ವಾಸಕೋಶಕ್ಕೆ ವೈರಾಣು ದಾಳಿಮಾಡಿ ಉಸಿರಾಟದ ಗಾಳಿಯಲ್ಲಿರುವ ಆಕ್ಸಿಜನ್ ಹೀರಿ ಕೊಳ್ಳುವ ಶಕ್ತಿಯನ್ನು ಕುಂದಿಸುತ್ತದೆ.

      ಇದೇ ಕಾರಣಕ್ಕೆ ಅತೀ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇತಂಹ ರೋಗಿಗಳಿಗೆ ಕೃತಕ ಆ್ಯಕ್ಸಿಜನ್‍ನ್ನು ಒದಗಿಸುವುದರಿಂದ ಅದೆಷ್ಟೊ ಪ್ರಾಣಗಳನ್ನು ಉಳಿಸಬಹುದಾಗಿದೆ. ಇರದಲ್ಲೂ ಎರಡು ಪ್ರಕಾರದ ಕೃತಕ ಆ್ಯಕ್ಸಿಜನ್ ನ್ನು ರೋಗಿಗಳಿಗೆ ನೀಡಬಹುದು. ಒಂದು ಮೆಡಿಕಲ್ ಆ್ಯಕ್ಸಿಜನ್ ಸಿಲಿಂಡರ್‍ಗಳ ಮುಖಾಂತರ ರೋಗಿಗಳಿಗೆ ಒದಗಿಸುವುದು. ಇನ್ನೊಂದು ಆ್ಯಕ್ಸಿಜನ್ ಕಾಂಟೈಟ್ರೆಟರ್, ಇವುಗಳನ್ನು ತುಂಬಾ ಸುಲಭವಾಗಿ ರೋಗಿಗಳು ಇರುವ ವಾರ್ಡ್, ಮನೆ ಮುಂತಾದ ಕಡೆಗಳಲ್ಲಿ ಬಳಸಬಹುದಾಗಿದೆ. ಇವುಗಳು ಕೃತಕ ಆಮ್ಲಜನಕವನ್ನು ಪೂರೈಸಿ ರೋಗಿಯು ಚಿಕಿತ್ಸೆಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ಆ್ಯಕ್ಸಿಜನ್ ಪೂರೈಕೆ ತುಂಬಾ ಸಹಾಯಕಾರಿಯಾಗಿದೆ ಇಂತಹ ಸಂಜೀವಿನಿ ಆ್ಯಕ್ಸಿಜನ್ ಕಾಂಟೈಟ್ರೆಟರ್‍ಗಳನ್ನು ರೋಗಿಗಳು ಸದುಪಯೋಗಕ್ಕಾಗಿ ಡೋನೆಟ್ ಮಾಡಿರುವ ರೋಟರಿ ಬೆಂಗಳೂರು ಪಶ್ಚಿಮ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್‍ರವರು ತಿಳಿಸಿದರು.

(Visited 4 times, 1 visits today)