ಚಿಕ್ಕನಾಯಕನಹಳ್ಳಿ: 
ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೂಡ ಕಲ್ಪಿಸಬೇಕು ಜೊತೆಗೆ ನಾವು ನಮ್ಮ ಭೂಮಿಯ ರಕ್ಷಣೆ ಕೂಡ ಮಾಡುವಂತೆ ಮಕ್ಕಳಲ್ಲಿ ಪ್ರೇರೇಪಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಟೇಶಪ್ಪ ವಿ ತಿಳಿಸಿದರು
ಅವರು ಇಂದು ಶ್ರೀರಾಮ ಫೌಂಡೇಶನ್ ವತಿಯಿಂದ ಭೂಮಿಯ ಸಂರಕ್ಷಣೆ ದಿನವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ನೆಹರು ವೃತ್ತದ ಹೊಯ್ಸಳ ಪಾರ್ಟಿ ಹಾಲ್ನ ಆರ್ ಆರ್ ಕಾಂಪ್ಲೆಕ್ಸ್ ಆಗಮಿಸುವ ಮೊದಮೊದಲು ನೆಹರು ವೃತ್ತದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಪಾರ್ಟಿ ಹಾಲ್ ನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪೆÇ್ರೀತ್ಸಾಹಧನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಭೂಮಿಯ ಸುರಕ್ಷತಾ ದಿನ ಅದರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದ್ದರು ಮಾನವನ ಸ್ವಾರ್ಥ ಸಾಧನೆಗಾಗಿ ಭೂಮಿಯಲ್ಲಿ ಸಿಗುವ ಖನಿಜ ಸಂಪತ್ತು ನಿಕ್ಷೇಪಗಳನ್ನು ಪಡೆಯುವ ಸಲುವಾಗಿ ಬ್ಲಾಸ್ಟ್ ಮಾಡಿ ಜಲ ಸಂಪತ್ತು ನೈಸರ್ಗಿಕ ಪ್ರಾಕೃತಿಕ ಸಂಪತ್ತು ಹೆಚ್ಚೆಚ್ಚು ಬಳಸಿಕೊಂಡು ಭೂಮಿಯ ಮರು ಪೂರ್ಣವಾಗದೆ ಹವಾಮಾನ ವೈಪರಿತ್ಯ ವ್ಯತ್ಯಯವಾಗುತ್ತಿದೆ ನಾವುಗಳು ಯುವ ಪೀಳಿಗೆಗೆ ಶಿಕ್ಷಣದ ಮೂಲಕ ಇವುಗಳ ರಕ್ಷಣೆ ಅವಶ್ಯಕ ಎಂದು ಶ್ರೀರಾಮ ಫೌಂಡೇಶನ್ ಮಕ್ಕಳಿಗೆ ಪೆÇ್ರೀತ್ಸಾಹಧನ ನೀಡುವ ಮೂಲಕ ಮಕ್ಕಳನ್ನು ಪ್ರೇರೇಪಿಸುತ್ತಿದೆ. ಇದು ಸಂತೋಷದ ವಿಷಯ ಇಷ್ಟಾದರೆ ಸಾಲದು ಮಕ್ಕಳಲ್ಲಿ ಗುರುಹಿರಿಯರಿಗೆ ಕಾನೂನಿಗೆ ಗೌರವ ನೀಡುವ ಪರಿಪಾಠವನ್ನು ಪೆÇೀಷಕರು ಸಂಸ್ಕಾರದ ಮೂಲಕ ಮಕ್ಕಳಲ್ಲಿ ಬೆಳೆಸಬೇಕು ಇದರಿಂದ ಆ ಮಕ್ಕಳಿಗೆ ನಾವು ಕೂಡ ಹೆಚ್ಚು ಗೌರವಕ್ಕೆ ಅರ್ಹ ರಾಗಬೇಕು ಎಂದು ನಡೆದುಕೊಳ್ಳುತ್ತಾರೆ ಎಂದರು
ವೃತ್ತ ನಿರೀಕ್ಷಣ ಅಧಿಕಾರಿ ನಿರ್ಮಲ ಮಾತನಾಡುತ್ತಾ ಭೂಮಿಯ ರಕ್ಷಣೆ ಹಾಗೂ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನ ಈ ಎರಡು ಅಂಶಗಳು ಅತ್ಯಂತ ಮಹತ್ವಪೂರ್ಣ ವಾಗಿದ್ದು ವಿದ್ಯಾರ್ಥಿ ಬದುಕು ಬಹಳಷ್ಟು ಮೌಲ್ಯಯುತವಾಗಿದೆ ಮಕ್ಕಳು ಕೇಳುವುದರ ಮೂಲಕ ತಾಳ್ಮೆ ಹೆಚ್ಚಿಸಿಕೊಳ್ಳಬೇಕು ಹಿಂದಿನ ವಿದ್ಯಾಭ್ಯಾಸ ಕೇಳಿಸಿಕೊಂಡು ಅರ್ಥೈಸಿಕೊಂಡರೆ ಮುಂದಿನ ದಿನಗಳಲ್ಲಿ ಬದುಕು ಉನ್ನತ ವಾಗಿರುತ್ತದೆ.
ನಾಳೆಯ ದಿನ ನೀವುಗಳೇ ವೇದಿಕೆ ಮೇಲೆ ಬರಲು ಸಾಧ್ಯವಾಗುತ್ತದೆ.
ಇವತ್ತಿನ ಯುವಕರಲ್ಲಿ ಮೊಬೈಲ್ ಹಿಡಿಯುವ ಮೂಲಕ ಅವರ ಆಲೋಚನಾ ಶಕ್ತಿ ಕುಂದುತ್ತದೆ ಇದರಿಂದ ಮುಂದಿನ ದಿನದಲ್ಲಿ ಅವರನ್ನು ತಲೆಎತ್ತಲು ಬಿಡುವುದಿಲ್ಲ ಇಂದು ತಲೆಬಗ್ಗಿಸಿ ಪುಸ್ತಕವನ್ನು ಅರ್ಥೈಸಿಕೊಂಡವರು ಎಂದೆಂದಿಗೂ ತಗ್ಗಿಸುವುದಿಲ್ಲ ಎಂದರು
ಶ್ರೀರಾಮ ಫೌಂಡೇಶನ್ ಸಂಸ್ಥೆಯ ಸ್ಟೇಟ್ ಡಿಪಾಸಿಟ್ ಹೆಡ್ ವಿಜಯ್ ಕುಮಾರ್ ಪಿ ಜಿ ಇವರು ಮಾತನಾಡುತ್ತಾ ದೇಶದಾದ್ಯಂತ ಸಾವಿರದ ಎಂಟುನೂರು ಬ್ರಾಂಚ್ ಗಳನ್ನು ಹೊಂದಿದ್ದು ಕಳೆದ ಒಂಬತ್ತು ವರ್ಷಗಳಿಂದ ಪ್ರತಿವರ್ಷದಲ್ಲಿ 25000 ಮಕ್ಕಳಿಗೆ ಪೆÇ್ರೀತ್ಸಾಹಧನ ನೀಡುವ ಮೂಲಕ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿಯನ್ನು ಕಾಣಲು ನಮ್ಮ ಸಂಸ್ಥೆ ಸನ್ನದ್ಧವಾಗಿದೆ ಇಂದು
ತಾಲೂಕಿನ 185 ಮಕ್ಕಳಿಗೆ ಈ ಸೌಲಭ್ಯ ಲಭ್ಯವಾಗಿದ್ದು ಹೆಚ್ಚು ಪ್ರತಿಭಾವಂತ ಮಕ್ಕಳು ಇದರ ಸೌಲಭ್ಯವನ್ನು ಇನ್ನೂ ಹೆಚ್ಚಿನದಾಗಿ ಪಡೆಯಬೇಕು ಉನ್ನತ ವಿದ್ಯಾಭ್ಯಾಸದ ಎಂಬಿಬಿಎಸ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು ಅವರಿಗೂ ಕೂಡ ಪೆÇ್ರೀತ್ಸಾಹಧನ ಹೆಚ್ಚಿನದಾಗಿ ದೊರೆಯಲಿದೆ. ಪ್ರತಿ ಮಕ್ಕಳು ಇದರ ಸೌಲಭ್ಯ ಕೂಡ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ವಕೀಲ ಸಂಘದ ಅಧ್ಯಕ್ಷ ಸಿ ರಾಜಶೇಖರ್ ಕಾರ್ಯದರ್ಶಿ ಎಸ್ ದಿಲೀಪ್ ಸರಕಾರಿ ಅಭಿಯೋಜಕರಾದ ರಂಗನಾಥಪ್ಪ ರೀಜಿನಲ್ ಬಿಸಿನೆಸ್ ಹೆಡ್ ಟಿ ಆರ್ ರಾಘವೇಂದ್ರ ಪುರಸಭಾ ಅಧ್ಯಕ್ಷೆ ಪುಷ್ಪಾ ಏ ವಿ ವಿಜಯ್ಕುಮಾರ್ ವೀರೇಂದ್ರ ಬಿ ಸಿ ಹುಸೇನಪ್ಪ ಶಿವಕುಮಾರ್ ಆರ್ ಸಹಾಯ ಅರಣ್ಯ ರಕ್ಷಕ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು ಸಮಾರಂಭಕ್ಕೂ ಮುನ್ನ ಪಟ್ಟಣದ ನೆಹರು ವೃತ್ತದಲ್ಲಿ ಸಸಿ ನೆಡುವ ಮೂಲಕ ಭೂಮಿಯ ರಕ್ಷಣೆಗೆ ಮುಂದಾದರು.

(Visited 14 times, 1 visits today)