ತುಮಕೂರು:


ಇಂದಿನ ದಿನಗಳಲ್ಲಿ ವಿಚಾರಕ್ಕಿಂತ ಆಚಾರ ಮುಖ್ಯ. ವಿಕೇಂದ್ರಿಕರಣ ಇಂದಿನ ಜಾಗತಿಕ ಅಗತ್ಯ ಸ್ಥಳೀಕರಣ ಮತ್ತು ವಿಕೇಂದ್ರಿಕರಣಕ್ಕೆ ಇಂದು ಜನಾಂದೋಲನದ ಅಗತ್ಯವಿದೆ ಎಂದು ಗ್ರಾಮ ಸೇವಾ ಸಂಘದ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.
ಕೃಷಿ ಗ್ರಾಮೀಣಾಭಿವೃದ್ಧಿಯ ಹೃದಯ. ಅದು ಇಂದು ಭೂ ಹಿಡುವಳಿ ವಿಶಿಷ್ಟವಾಗಬೇಕು. ಹಾಗಾದರೆ ಮಾತ್ರ ಕೃಷಿ ವಾಯುಗುಣ ವೈಪರಿತ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೆಂದು ಸಹಜ ಬೇಸಾಯ ಶಾಲೆಯ ಕೃಷಿ ತಜ್ಞಾ ಡಾ|| ಹೆಚ್ ಮಂಜುನಾಥ ಹೇಳಿದರು. ಇಂದಿನ ಪರಿಸರ ಅಸಮತೋಲನ ಹಾಗೂ ವಿನಾಶಗಳ ದುಶ್ಪರಿಣಾಮಗಳನ್ನು ಎದುರಿಸಲು ವಿಕೇಂದ್ರಿಕರಣ ಅತ್ಯಗತ್ಯ ಎಂದು ಸಿ. ಯತಿರಾಜ ಹೇಳಿದರು.
ಸುಮನವನದ ಸಂಜೀವಕುಲಕರ್ಣಿ ಮಾತನಾಡಿ ಗಾಂಧೀ ತೊರಿದ ವಿಕೇಂದ್ರಿಕರಣದ ಹಾದಿಯಲ್ಲಿ ನಾವಿಂದು ಸಾಗಬೇಕಾದ ಅನಿವಾಂiÀರ್iತೆ ಇದೆ ಎಂದರು. ವಿಕೇಂದ್ರೀಕರಣ ಜನಾಂದೋಲನದಲ್ಲಿ ಜಿ.ಹೆಚ್. ಪಟೇಲ್ ಟ್ರಸ್ಟ್ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಉದ್ದರಿಸಲು ವಿಕೇಂದ್ರಕರಣದಿಂದ ಮಾತ್ರ ಸಾಧ್ಯ ಶಿಕ್ಷಣ, ಅರೋಗ್ಯ ಸೌಲಭ್ಯಗಳನ್ನು ಬಡಜನರಿಗೆ ನೀಡಲು ಗ್ರಾಮ ಪಂಚಾಯಿತಿ ವ್ಯವಸ್ತೆ ಮುಂದಾಗಬೇಕೆಂದು ವಿನಯಚಂದ್ರ ಹೇಳಿದರು.
ವಿದ್ಯಾರ್ಥಿ ಮತು ಯುವಜನರು ಗಾಂಧೀ ಆದರ್ಶಗಳಡಗೆ ಆಕರ್ಷಿಸಿ ತರಬೇತಿಗೊಳಿಸಬೇಕೆಂದು ಗಾಂಧೀ ಭವನದ ಪ್ರೋ. ಶಿವರಾಜ್ ಮತ್ತು ಅಬೀದಾ ಬೇಗಾಂ ಹೇಳಿದರು. ಕೃಷಿ ಲಾಭದಾಯಕ ಕಸುಬಾದರೆ ಮಾತ್ರ ಜನಕೃಷಿ ಮಾಡಲು ಮುಂದಾಗುತ್ತಾರೆ. ಇಲ್ಲಿದಿದ್ದಲ್ಲಿ ಯುವಕರು ಕೃಷಿಯನ್ನ ತೊರೆಯುತ್ತಾರೆ ಎಂದು ಎನ್.ಎಸ್. ಪಂಡಿತ್ ಜವಹರ್ ಹೇಳಿದರು. ನೈಸರ್ಗಿಕ ಸಂಪನ್ಮೂಲಗಳ ಸಮರ್ಥ ನಿರ್ವಹಣ ಸ್ಥಳಿಯವರಿಂದ ಮಾತ್ರ ಸಾಧ್ಯವೆಂದು ಈ ಎಸ್.ಜಿ.ಯ. ಲಿಯೋ ಸಲ್ಡಾನ್, ಭಾರ್ಗವಿ, ಎಸ್ ರಾವ್ ಹೇಳಿದರು.
ರಾಜ್ಯದ ವಿವಿಧ ಬಾಗಗಳಿಂದ ಆಗಮಿಸಿದ ಗಾಂಧೀ ಅನುಷ್ಟಾನಕಾರರು, ಪರಿಸರ ತಜ್ಞಾರು, ಜಲ ಪರಿಸರಿ ಸಂರಕ್ಷಕರು ಸಹಜ ಬೇಸಾಯಗಾರರು ಮತ್ತು ಸಹಜ ಬೇಸಾಯ ಶಾಲೆಯ ಕಾರ್ಯಕರ್ತರು ಚರ್ಚೆಯಲ್ಲಿ ಪಾಲ್ಗೊಂಡರು.
ಮುಂದಿನ ದಿನಗಳಲ್ಲಿ ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲೂ ವಿಕೇಂದ್ರಿಕರಣ ಮತ್ತು ಸ್ಥಳೀಕರಣದ ಜನಾಂದೋಲನವನ್ನು ರೂಪಿಸಲು ಜನರ ಉಪಸಮತಿಯನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ರವೀಶ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಮತ್ತು ರಷ್ಮೀ ವಂದಿಸಿದರು.

(Visited 3 times, 1 visits today)