ಚಿಕ್ಕನಾಯಕನಹಳ್ಳಿ:


ಪ್ರಕೃತಿ ಕೊಟ್ಟ ಸಾಲವನ್ನು ಹೊತ್ತುಕೊಂಡು ಜೀವನ ಮಾಡುತ್ತಿದ್ದೇವೆ ಆ ಋಣ ತೀರಿಸಬೇಕಾದ ರೆ ಕನಿಷ್ಠಪಕ್ಷ ಪ್ರತಿಯೊಬ್ಬರು ಅರಣ್ಯವನ್ನು ಬೆಳೆಸಬೇಕು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು
ಅವರು ಪ್ರಾದೇಶಿಕ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆಯು ತಾಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದ ಹೊರವಲಯದ ನಿರ್ಮಾಣಗೊಂಡಿರುವ ಅಂಬೇಡ್ಕರ್ ವಸತಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು
ನಾವೆಲ್ಲಾ ಪ್ರಕೃತಿಯ ಕೂಸುಗಳು ಪ್ರಕೃತಿಯ ನೀಡಿದ ಋಣ ಹೊತ್ತುಕೊಂಡು ಹುಟ್ಟಿದ್ದೇವೆ ಹಾಗೆ ಸಾಯುತ್ತೇವೆ ಪ್ರಕೃತಿ ನಮಗೆ ಕೊಟ್ಟ ಸಾಲವನ್ನು ಋಣ ತೀರಿಸುವ ಕೆಲಸ ಮಾಡಬೇಕಾದರೆ ಅದರ ಸದ್ಬಳಕೆ ಬಳಸಿಕೊಂಡು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು
ಪ್ರಕೃತಿ ಸಮತೋಲನ ಹೇಗೆ ಮಾಡಬಹುದು ಅನ್ನೋದನ್ನ ಯಾರು ಹೇಳಿ ಕೊಡಬೇಕಾದ ಅವಶ್ಯಕತೆ ಇಲ್ಲ
ವಿಜ್ಞಾನಿ ಆರ್ಕಿಟಿಕ್ ಇಂಜಿನಿಯರ್ ಡಾಕ್ಟರು ಇವ್ಯಾವುದಕ್ಕೂ ನಿಲುಕದ ಶಕ್ತಿಯೇ ಪ್ರಕೃತಿ ನಾವು ಬಿಟ್ಟ ಇಂಗಾಲದ ಆಮ್ಲವನ್ನು ಪ್ರಕೃತಿ ಬಳಸಿಕೊಂಡು ಅದು ನಮಗೆ ಆಮ್ಲಜನಕ ಬಿಟ್ಟಾಗ ಮಾತ್ರ ನಾವು ಅದನ್ನು ಸೇವಿಸಿ ಉಸಿರಾಡಿಕೊಂಡು ಬದುಕಲಿಕ್ಕೆ ಸಾಧ್ಯವಾಗಿದೆ. ಆಹಾರ ಇಲ್ಲದಿದ್ದರೂ 32 ದಿನ ಬದುಕಬಹುದು ನೀರು ಇಲ್ಲದಿದ್ದರೂ ಕೆಲವು ಗಂಟೆಗಳ ಕಾಲ ಬದುಕಬಹುದು ವಾಯು ಇಲ್ಲದಿದ್ದರೆ ಮನುಷ್ಯ ಎರಡು ನಿಮಿಷ ಕೂಡ ಬದುಕಲು ಸಾಧ್ಯವಿಲ್ಲ
ಅಂತಹ ವಾಯುವನ್ನು ಕೊಟ್ಟಿರುವುದು ನಮ್ಮಲ್ಲಿರುವ ಗಿಡಮರಗಳು ಆ ಋಣ ತೀರಿಸಬೇಕಾದ ಪ್ರತಿಯೊಬ್ಬರೂ ಗಿಡ ಬೆಳೆಸುವ ಮೂಲಕ ನಮ್ಮ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು
ಮಳೆಯಿಂದ ಹಸಿರು ಹೆಚ್ಚಾಗಿ ಆಕ್ಸಿಜನ್ ಉತ್ಪತ್ತಿಯಾಗುತ್ತದೆ ನೆರಳಿಗೆ ಮರದ ಕೆಳಗೆ ಆಶ್ರಯ ನಾವುಗಳು ಪಡೆಯುತ್ತೇವೆ ನಮಗೆ ನೆರಳು ಕೊಡುತ್ತಿರುವ ಮರಗಳು ಅವರ ಆಶ್ರಯದಲ್ಲಿ ನಾವೆಲ್ಲಾ ಬಾಳುತ್ತಿದ್ದೇವೆ ಎಂದು ಅರಿತು ಗಿಡಗಳ ರಕ್ಷಣೆ ನಮ್ಮಗಳ ಜವಾಬ್ದಾರಿಯಾಗಿದೆ
ಈ ಎಲ್ಲಾ ಪ್ರಕೃತಿಯ ವಿಕೋಪಗಳಿಗೆ ಕಾರಣ ಪ್ರಪಂಚದಲ್ಲಿ ಶೇಕಡಾ 33ರಷ್ಟು ಪ್ರದೇಶವನ್ನು ಅರಣ್ಯಕ್ಕೆ ಮೀಸಲಿರಿಸದೆ ಇರುವುದು ಪ್ರಕೃತಿಯ ವಿಕೋಪಕ್ಕೆ ಕಾರಣವಾಗಿದೆ ಸರಾಸರಿ 33 ರಷ್ಟು ಭೂಪ್ರದೇಶವನ್ನು ಅರಣ್ಯಕ್ಕೆ ಮೀಸಲಿಟ್ಟರೆ ಮಾತ್ರ ವಾತಾವರಣ ತಂಪಾಗಿ ಕಾಲಕಾಲಕ್ಕೆ ಮಳೆಯಾಗುತ್ತದೆ ಹಾಗೆ ಬೆಳೆ ಕೂಡ ಬರುತ್ತದೆ ಋತುಮಾನಗಳಿಗೆ ಅರ್ಥ ಬರುತ್ತದೆ ಪ್ರತಿಯೊಬ್ಬರೂ ಗಿಡ ಬೆಳೆಸುವ ನಿಟ್ಟಿನಲ್ಲಿ ಪ್ರಕೃತಿಯನ್ನು ಪ್ರೀತಿಸುವಂತೆ ಮಕ್ಕಳಿಗೂ ಮತ್ತು ಸಾರ್ವಜನಿಕರಿಗೂ ನೀತಿಪಾಠವನ್ನು ಬೋಧಿಸಿದರು
ಸಾಮಾಜಿಕವಲಯ ಅರಣ್ಯಾಧಿಕಾರಿ ಹಂಸ ಮಾತನಾಡುತ್ತಾ ಕುಟುಂಬದ ಸದಸ್ಯರು ಅವರವರ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವಲ್ಲಿ ತೋರುವ ಕಾಳಜಿ ರೀತಿಯಲ್ಲಿ ಅವರವರ ಹುಟ್ಟುಹಬ್ಬದ ದಿನದಂದು ಪ್ರತಿಯೊಬ್ಬರು ಶಾಲಾ ಆವರಣದಲ್ಲಿ ಸರ್ಕಾರ ಜಾಗವಾಗಲಿ ಗಿಡ ನೆಟ್ಟು ಪೆÇೀಷಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರಕೃತಿಯ ಸಂಪತ್ತನ್ನು ಬಿಟ್ಟುಹೋಗುವ ಕೆಲಸ ಮಾಡಬೇಕು ಅದಕ್ಕಾಗಿಯೇ ವಿಶ್ವ ಭೂ ಆಚರಣೆ ವಿಶ್ವಪರಿಸರ ಆಚರಣೆ ಬಂದಿರುವುದು ಎಂದರು
ಕ್ಷೇತ್ರಶಿಕ್ಷಣಾಧಿಕಾರಿ ಮನಮೋಹನ್ ಮಾತನಾಡುತ್ತಾ ಅಂಬೇಡ್ಕರ್ ವಸತಿ ಶಾಲೆಯಲ್ಲಿ 200 ಮಕ್ಕಳು ಇದ್ದಾರೆ ಇವರು ನಾಲ್ಕು ವರ್ಷಗಳ ಕಾಲ ಇಲ್ಲಿ ವ್ಯಾಸಂಗ ಮಾಡುತ್ತೀರಿ ಈ ಅವಧಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಎರಡು ಗಿಡಗಳನ್ನು ನೆಡುವ ಮೂಲಕ ಅವುಗಳನ್ನು ಪೆÇೀಷಿಸಿ ಆರೈಕೆ ಮಾಡಿದರೆ ಇಲ್ಲಿನ ಪರಿಸರ ಕೂಡ ಆರೋಗ್ಯ ಯುಕ್ತವಾಗಿ ವಾತಾವರಣ ಸೃಷ್ಟಿಯಾಗಲು ಸಾಧ್ಯ ವಾಗುತ್ತದೆ ಜೊತೆಗೆ ವಿದ್ಯಾರ್ಥಿಗಳಲ್ಲಿ ಗಿಡದ ನೆನಪು ಸದಾ ನಿಮ್ಮೊಂದಿಗೆ ಇರುವಂತೆ ಪ್ರಕೃತಿ ಮಾಡುತ್ತದೆ ಎಂದರು
ಸಮಾರಂಭದಲ್ಲಿ ವಲಯ ಅರಣ್ಯಾಧಿಕಾರಿ ಸುನಿಲ್ ಕುಮಾರ್ ಎ ಬುಕ್ಕಾಪತ್ನ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ರಾಕೇಶ್ ಸಹಾಯಕ ಅರಣ್ಯಾಧಿಕಾರಿ ಮಂಜುನಾಥ್ ಅರಣ್ಯ ರಕ್ಷಕ ಶೇಖರ್ ಪ್ರಾಂಶುಪಾಲ ಮಂಜುನಾಥ್ ಗ್ರಾಪಂ ಅಧ್ಯಕ್ಷೆ ಶಿವಗಂಗಮ್ಮ ಮುಖಂಡರಾದ ದಿನೇಶ್ ಹೊನ್ನಮ್ಮ ಸುಧಾಕರ್ ರವಿಶಂಕರ್ ಮಂಜುಳಮ್ಮ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

(Visited 4 times, 1 visits today)