ತುಮಕೂರು:


ಭಾರತದ ಸ್ವಾತಂತ್ರ್ಯ ಹೋರಾಟ ಇಲ್ಲಿನ ಜನತೆಗೆ ಹೊಸ ರೀತಿಯ ಆಲೋಚನಾ ಕ್ರಮವಲ್ಲದೆ ಹೊಸ ಸಾಮಾಜಿಕ ಸಂಬಂಧಗಳನ್ನು ಸೃಷ್ಟಿಸಿತು. ಪೂರ್ವ ಮತ್ತು ಪಶ್ಚಿಮದ ಚಿಂತನಾ ಕ್ರಮಗಳು ಸಾಂಸ್ಕøತಿಕ ವೈರುಧ್ಯಗಳು ವ್ಯೆವಸ್ಥೆಯನ್ನುಕಟ್ಟುವ ತತ್ವಗಳು ಹೊಸ ನಿಷ್ಕರ್ಷೆಗೆ ಒಳಗಾದವು ಎಂದು ಸಂಶೋಧಕರಾದ ಡಾ.ಡಿ.ಎಸ್.ಯೋಗೀಶ್ವರಪ್ಪ ಅಭಿಪ್ರಾಯಪಟ್ಟರು.
ಅವರು ನಗರದಶ್ರೀ ಸಿದ್ಧಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನಲ್ಲಿ ಏರ್ಪಡಿಸಿದ್ದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳುವಳಿಯ ಸಂಸ್ಮರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತವಾದ ಕ್ವಿಟ್‍ಇಂಡಿಯಾ ಚಳುವಳಿಯಲ್ಲಿ ನೇತಾರರೆಲ್ಲಾ ಜೈಲು ಸೇರಿದ್ದರಿಂದ ನಾಯಕತ್ವವೇ ಇಲ್ಲವಾಗಿದ್ದರಿಂದ ದಿಕ್ಕು ತಪ್ಪಿದರೂ ತುಮಕೂರಿನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿತು ಎಂದ ಅವರು ಇಂದಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ, ನಗರದ ಚರ್ಚ್ ವೃತ್ತ ಮುಖ್ಯ ಕೇಂದ್ರಗಳಾಗಿದ್ದು ತಿಪಟೂರಿನಲ್ಲಿ ವಿದ್ಯಾರ್ಥಿ ಸಮುದಾಯದ ಮೇಲೆ ಪೋಲಿಸರು ಲಾಟಿಚಾರ್ಚ್ ಮಾಡಿದಾಗ ರೊಚ್ಚಿಗೆದ್ದ ಅವರು ಅಲ್ಲಿನ ರೈಲ್ವೆ ಸ್ಟೇಷನ್‍ಗೆ ಬೆಂಕಿ ಹಚ್ಚಿ ತಮ್ಮ ಕೋಪವನ್ನು ತೀರಿಸಿಕೊಂಡಿದ್ದು ಸ್ಮರಣೀಯವಾಗಿದೆಎಂದರು.
ಆಗಸ್ಟ್ 15, 1947 ರಲ್ಲಿದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಮೈಸೂರು ಸಂಸ್ಥಾನಿಕರಿಗೆ ಆ ಭಾಗ್ಯ ದೊರೆಯಲಿಲ್ಲ ಅದನ್ನು ಪಡೆಯಲು ತುಮಕೂರು ಜಿಲ್ಲೆಯಾದ್ಯಂತ ತ್ರಿವರ್ಣಧ್ವಜ ಹಾರಿಸಲು ಕಾರ್ಯಕ್ರಮ ರೂಪಿಸಲಾಯಿತು.
ತುಮಕೂರಿನ ತಹಶಿಲ್ದಾರ್ ಕಛೇರಿ ಮೇಲೆ ತ್ರಿವರ್ಣಧ್ವಜ ಹಾರಿಸಲು 1947 ಸೆಪ್ಟೆಂಬರ್ 14 ರಂದು ಪ್ರಯತ್ನಿಸಿದಾಗ ಇಂದಿನ ಚರ್ಚ್ ವೃತ್ತದಲ್ಲಿ ಸಾಗುತ್ತಿದ್ದ ಮೆರವಣಿಗೆ ಮೇಲೆ ಪೋಲಿಸರು ಗುಂಡು ಹಾರಿಸಿ ಮೂರು ಜನರನ್ನು ಬಲಿ ಪಡೆದಿದ್ದು ಅದೊಂದು ಮರೆಯಲಾಗದ ಘಟನೆಯಾಗಿದೆ ಎಂದರು.
ನಮ್ಮ ಪೂರ್ವಿಕರತ್ಯಾಗ, ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಇಂದಿನ ಜನಾಂಗದೇಶದ ಹಿತಕ್ಕಾಗಿ ಬಳಸದೆ ಎಲ್ಲವನ್ನು ಸ್ವಾರ್ಥಕ್ಕಾಗಿ ಬಳಸುತ್ತಿದೆ. ಪ್ರಜಾಪ್ರಭುತ್ವ ಸರ್ಕಾರವನ್ನು ಸರ್ಕಾರವಿದ್ದರೂ ವಂಶಾಡಳಿತ ಪ್ರಭುತ್ವವೇ ವಿಜೃಂಭಿಸುತ್ತಿದೆ ಎಂದ ಅವರು ಸರ್ಕಾರಿ ಕಛೇರಿಗಳು ಭ್ರಷ್ಟಚಾರದ ಕೂಪಗಳಾಗಿವೆ ಇಂದು ಮತ್ತೊಮ್ಮೆ ನಾವು ಭ್ರಷ್ಟಾಚಾರಿಗಳೇ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರಯ್ಯ ಬಿ.ಆರ್ ಮಾತನಾಡಿ ಮೈಸೂರು ಅರಸರ ಆಡಳಿತದಲ್ಲಿದ್ದ ನಮಗೆ ಅಷ್ಟಾಗಿ ಸ್ವಾತಂತ್ರ್ಯದ ಬಿಸಿ ತಟ್ಟಲಿಲ್ಲ ಆದರೆ ತುಮಕೂರಿಗೆ ಗಾಂಧಿಜೀ ಬಂದು ಹೋದ ನಂತರ ಜನತೆ ಸ್ವಯಂ ಪ್ರೇರಿತರಾಗಿ ಚಳುವಳಿಯಲ್ಲಿ ಭಾಗವಹಿಸಿದರು.
ಈ ಜಿಲ್ಲೆಯ ಯಲಿಯೂರು ಅರಣ್ಯ ಸತ್ಯಾಗ್ರಹದ ಕೇಂದ್ರವಾಗಿತ್ತು. ಆ ಊರಿನಲ್ಲಿ ಪ್ರತಿ ಮನೆಯೂ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿತ್ತು ಇಂತಹ ಹೋರಾಟದ ಘಟನೆಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸುವುದು ಅವಶ್ಯಕಎಂದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಬಿ.ಬಸವೇಶ್ ಅಧ್ಯಕ್ಷತೆವಹಿಸಿದ್ದರು. ಐ.ಕ್ಯೂ.ಎ.ಸಿ ಸಂಚಾಲಕರಾದ ಸಿ.ಸೋಮಶೇಖರ್ ವೇದಿಕೆಯಲ್ಲಿದ್ದರು. ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ಅನಿತಾ ವಂದಿಸಿದರು. ತೃತೀಯ ಬಿ.ಎ. ವಿದ್ಯಾರ್ಥಿನಿ ಮೇಘನಾ ನಿರೂಪಣೆ ಮಾಡಿದರು ಮತ್ತು ತೃತೀಯ ಬಿ.ಎ. ವಿದ್ಯಾರ್ಥಿಜಯರಾಮು ಪ್ರಾರ್ಥಿಸಿದರು.

(Visited 1 times, 1 visits today)