ತುಮಕೂರು:


ಸ್ವಾತಂತ್ರ ಚಳವಳಿಯಲ್ಲಿ ಕಾಂಗ್ರೆಸ್ ಪಕ್ಷ ವಹಿಸಿದ್ದ ಪಾತ್ರವನ್ನು ಇಂದಿನ ಯುವಜನರಿಗೆ ತಿಳಿಸುವ ನಿಟ್ಟಿನಲ್ಲಿ ಎಐಸಿಸಿ ಮತ್ತು ಕೆಪಿಸಿಸಿಯ ನಿರ್ದೇಶನದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀಡಂ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.
ನಗರದ ಬೋರೇಗೌಡನ ಪಾಳ್ಯ ಸರ್ಕಲ್ (ಬಿ.ಜಿ.ಪಾಳ್ಯ ಸರ್ಕಲ್)ನಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರನ್ನು ಭಾರತದಿಂದ ತೊಲಗಿಸಬೇಕು ಎಂಬ ಉದ್ದೇಶದಿಂದ 1885ರಲ್ಲಿ ಉದಯಿಸಿದ ಕಾಂಗ್ರೆಸ್ ಪಕ್ಷ, 1947ರವರೆಗೆ ನಿರಂತರವಾಗಿ ಹಲವಾರು ಹೋರಾಟ, ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಪರಿಣಾಮ ದೇಶ ಬ್ರಿಟಿಷರ ಕಪಿ ಮುಷ್ಠಿಯಿಂದ ಹೊರಬರಲು ಸಾಧ್ಯವಾಯಿತು.
ಈ ವಿಚಾರ ಇಂದಿನ ಯುವಜನತೆಗೆ ಅಷ್ಟಾಗಿ ತಿಳಿದಿಲ್ಲ.ಹಾಗಾಗಿ ಬಿಜೆಪಿ ಪಕ್ಷದ ಸುಳ್ಳು ಭರವಸೆಗಳ ಮತ ನೀಡಿ ಪರಿತಪಿಸುತ್ತಿರುವ ಯುವಜನತೆಗೆ ಸ್ವಾತಂತ್ರ ಹೋರಾಟದ ವಿವಿಧ ಮಜುಲುಗಳನ್ನು ಪರಿಚಯಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಜನರ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಈ ಪಾದಯಾತ್ರೆ ಮಹತ್ವ ಪಡೆದುಕೊಂಡಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ, ಮಾಜಿ ಶಾಸಕ ಎಸ್.ಷಪಿ ಅಹಮದ್ ಚಾಲನೆ ನೀಡಿರುವ ಈ ಪ್ರೀಡಂ ಮಾರ್ಚ್ ಬಿ.ಜಿ.ಪಾಳ್ಯ ವೃತ್ತದಿಂದ ಹೊರಟು, ಜಯಪುರ, ಪೂರ್‍ಹೌಸ್ ಕಾಲೋನಿ, ಟಿಪ್ಪು ನಗರ, ಕುರಿಪಾಳ್ಯ, ಅಜಾದ್ ನಗರ, ನಜರಾಬಾದ್ ಮೂಲಕ ಧಾನಂಪಾಲೇಸ್ ಬಳಿ ಕೊನೆಗೊಳ್ಳಲಿದೆ.
ಇದರಲ್ಲಿ ನಗರಪಾಲಿಕೆಯ ವಿರೋಧಪಕ್ಷದ ನಾಯಕರು ಸೇರಿದಂತೆ ಪಾಲಿಕೆಯ ಎಲ್ಲಾ ಸದಸ್ಯರು, ಮಾಜಿ ಮೇಯರ್‍ಗಳು ಸಹ ಪಾಲ್ಗೊಂಡಿದ್ದಾರೆ. ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಸಹ ಈ ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.ಇದರ ಜೊತೆಗೆ ಸಾರ್ವಜನಿಕರ ಸಹ ಕೈಜೋಡಿಸಿರುವುದು ಕಾಂಗ್ರೆಸ್ ಪಕ್ಷದ ಬಗ್ಗೆ ಜನರಿಗೆ ಇರುವ ಒಲವನ್ನು ತೋರಿಸುತ್ತದೆ ಎಂದು ಡಾ.ರಫೀಕ್ ಅಹಮದ್ ತಿಳಿಸಿದರು.
ದೇಶಕ್ಕೆ ಸ್ವಾತಂತ್ರ ಕೊಟ್ಟ ಪಕ್ಷ ಕಾಂಗ್ರೆಸ್.ಇದರ ಲಾಭವನ್ನು ಇಂದು ಬಿಜೆಪಿ ಹರ್ ಘರ್ ಮೇ ತಿರಂಗ ಎಂದು ಪಡೆದುಕೊಳ್ಳುತ್ತಿದೆ.ಯಾವಾಗ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಕೈಗೊಂಡಿತ್ತೋ,ಆವಾಗ ಬಿಜೆಪಿ ಪಕ್ಷದ ಮುಖಂಡರುಗಳಿಗೆ ನಡುಕು ಹುಟ್ಟಿದೆ.ನಿನ್ನೆ ಮೊನ್ನೆಯವರೆಗೆ ಬಿಜೆಪಿ ಮೂಲವಾದ ಆರ್.ಎಸ್.ಎಸ್. ಭಾರತದ ತ್ರಿವರ್ಣ ಧ್ವಜವನ್ನು ತನ್ನ ಕಚೇರಿಯ ಮೇಲೆ ಹಾರಿಸಲು ಒಪ್ಪಿಲ್ಲ.ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಆರ್.ಎಸ್.ಎಸ್. ಮುಖಂಡರಿಗೆ ಭಾರತದ ದ್ವಜ ನೀಡಲು ಹೋದಾಗ ಆರಂಭದಲ್ಲಿ ಧ್ವಜ ಪಡೆಯಲು ಒಪ್ಪದ ನಾಯಕರು, ಎಲ್ಲಿ ನಾವು ದೇಶದ ಜನರ ಮುಂದೆ ಕುಬ್ಜರಾಗುತ್ತೆವೆಯೋ ಎಂದು ಹೆದರಿ, ಧ್ವಜ ಪಡೆದುಕೊಂಡಿದೆ.ಇಂತಹ ಬಿಜೆಪಿ ಪಕ್ಷದಿಂದ ದೇಶದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಡಾ.ರಫೀಕ್ ಅಹಮದ್ ನುಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ಸುಳ್ಳು ಎಂಬುದು ಬಿಜೆಪಿಯ ಪಕ್ಷದ ಮೈ, ಮನಸ್ಸುಗಳಲ್ಲಿ ಹಾಸು ಹೊಕ್ಕಾಗಿದೆ. ಹಾಗಾಗಿಯೇ ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸಲು ಹೊರಟಿದೆ.
ಪಠ್ಯಪುಸ್ತಕಗಳನ್ನು ಕೇಸರಿಕರಣ ಮಾಡಲು ಹೋಗಿ, ಸಾರ್ವಜನಿಕರಿಂದ ಮುಖಭಂಗಕ್ಕೆ ಒಳಗಾಗಿರುವ ಬಿಜೆಪಿಯಿಂದ ಕೋಮು ದ್ವೇಷವಲ್ಲದೆ ಮತ್ತೇನನ್ನು ಬಿತ್ತಲು ಸಾಧ್ಯ ಎಂದು ಪ್ರಶ್ನಿಸಿದರು.
ಪಾದಯಾತ್ರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆಟೋ ರಾಜು,ಮೆಹಬೂಬ್ ಪಾಷ,ತುಮಕೂರು ನಗರ ಉಸ್ತುವಾರಿ ಕೇಶವಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾರುದ್ರೇಶ್, ಮಾಜಿ ಮೇಯರ್ ಶ್ರೀಮತಿ ಫರೀಧಾಬೇಗಂ, ವೈದ್ಯಕೀಯ ವಿಭಾಗದ ಡಾ.ಫ್ಹರಾನಾ, ಪಾಲಿಕೆ ವಿರೋಧಪಕ್ಷದ ನಾಯಕ ಜೆ.ಕುಮಾರ್, ಸದಸ್ಯರಾದ ನಯಾಜ್ ಅಹಮದ್, ಜೀಯಾ, ಮಹೇಶ್, ಸುಜಾತ, ನಟರಾಜ ಶೆಟ್ಟಿ, ಸಂಜೀವಕುಮಾರ್, ಮಹಿಳಾ ಘಟಕದ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

(Visited 1 times, 1 visits today)