ತುಮಕೂರು:


ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಾದಿಯಲ್ಲಿ ಸ್ವಾತಂತ್ರ ರಕ್ಷಣೆ-ನಮ್ಮೆಲ್ಲರ ಹೊಣೆ ಸಂವಾದ ಕಾರ್ಯಕ್ರಮವನ್ನು ಭಾರತ ಕಮ್ಯೂನಿಷ್ಟ ಪಕ್ಷ ಜನಚಳವಳಿಯಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಹೆಚ್.ಎಸ್ ನಿರಂಜನರಾಧ್ಯ ಮಾತನಾಡುತ್ತಾ ಬ್ರಿಟಿಷರು 200 ವರ್ಷಗಲ ಕಾಲ ಆಡಳಿತ ನಡೆಸಿ ನಮ್ಮ ದೇಶದ ಆಸ್ತಿ, ಸಂಪತ್ತು ಮತ್ತು ನೈಸರ್ಗಿಕ ಸಂಪತ್ತುಗಳನ್ನು ಲೂಟಿ ಒಡೆದುಕೊಂಡು ಹೋದರು.
ಆದರೆ ಸ್ವಾತಂತ್ರ ಬಂದ 75 ವರ್ಷಗಳಲ್ಲಿ ನಾವು ಆರ್ಥಿಕವಾಗಿ ಸದೃಢವಾಗಲು ಕಾರಣವಾದುದ್ದು ನಮ್ಮ ದೇಶದ ಜನರ ತೆರಿಗೆಯಿಂದ ಕಟ್ಟಿದ ಸಾರ್ವಜನಿಕ ಉದ್ಯಮಗಳು ಅವುಗಳನ್ನು ಈ ಸರ್ಕಾರ ಬಿಕ್ಕಟಿಗೆ ದೂಡಿ ಕಾರ್ಪೋರೇಟ್ ಕಂಪನಿಗಳಿಗೆ ಕಡಿಮೆ ಬೆಲೆಗೆ ಕೇಂದ್ರ ಸರ್ಕಾರ ದಾರೆ ಎರೆಯುತ್ತಿವೆ ಎಂದರು.
ಅವರು ಮುಂದುವರೆದು ಮಾತನಾಡುತ್ತಾ ದೇಶದ ಸ್ವಾತಂತ್ರಕ್ಕಾಗಿ ನಿಜವಾಗಿ ಹೋರಾಡಿದವರು ಕಮ್ಯೂನಿಷ್ಟರ ನೇತೃತ್ವದಲ್ಲಿ ಕಾರ್ಮಿಕರು ಮತ್ತು ರೈತರು ಕಾಂಗ್ರೆಸ್ ಕೂಡ ಸ್ವಾತಂತ್ರ ಚಳವಳಿಯಲ್ಲಿ ಕೇವಲ ಡೊಮಿಯನ್ ಸ್ಟೇಟಸ್ ಗಾಗಿ ಬೇಡಿಕೆ ಸಲ್ಲಿಸಿದಾಗ ಮೊದಲಬಾರಿಗೆ ಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಮಂಡಿಸಿದ ಕೀರ್ತಿ ಕಮ್ಯುನಿಷ್ಟರಿಗೆ ಸಲ್ಲುತ್ತದೆ.
ಆದರೂ ನಮಗೆ ಸ್ವಾತಂತ್ರವೆನು ಸಿಕ್ಕಿ ನಮಗೆ ರಾಜಕೀಯ ಸ್ವಾತಂತ್ರ್ಯ ಬಂದಿದೆ. ಅದರೆ ಸಂಪೂರ್ಣವಾಗಿ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ ಜೊತೆಗೆ ದೇಶದ ಎಲ್ಲಾ ಜನತೆಗೆ ಬದುಕಲು ಆರ್ಯೋಗ, ಶಿಕ್ಷಣ, ಉದ್ಯೋಗ ಸಿಗುವಂತೆ ಮಾಡಬೇಕಾದ ಅಗತ್ಯವಿದೆ ಎಂದರು.
ಬಾ.ಹ. ರಮಾಕುಮಾರಿಯವರು ಮಾತನಾಡುತ್ತಾ ಈ 75ವರ್ಷಗಳ ಕಾಲ ಜಾಗತಿಕವಾಗಿ ದೃಢವಾಗಿ ಒಂದು ಪ್ರಜಾಪ್ರಭುತ್ವ ದೇಶವಾಗಿ ಉಳಿಯಲು ಕಾರಣ ನಮ್ಮ ಸಂವಿಧಾನ. ನಮ್ಮ ಸಂವಿಧಾನ ಕೂಡ ಮಾಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಸಮಾಜವಾದಿ ಗಣರಾಜ್ಯದ ಅಂಶಗಳು ಪ್ರಸ್ತುತ ಅಡಿಪಾಯಗಳಾಗಿವೆ.
ಆದರೆ ಕಳೆದ 8-10 ವರ್ಷಗಳಿಂದ ಆಡಳಿತದಲ್ಲಿರುವ ಸರ್ಕಾರ ಜಾರಿಗೂಳಿಸುತ್ತಿರುವ ನೀತಿಗಳು ನಮ್ಮ ಸಂವಿಧಾನದ ಬುಡವನ್ನೆ ಅಲುಗಾಡಿಸುವಂತಿವೆ ಎಂದರು. ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರ್ತಿ ಭಾಗಿರತಮ್ಮನವರು ಪ್ರಥಮ ಹಾಗೂ ಕೂನೆಯ ಶಾಸಕರಾಗಿ ಚುನಾಯಿತರಾಗಿದ್ದರು.ಅದರೆ ನಂತರ ಮಹಿಳೆಯರಿಗೆ ಸ್ಪರ್ಧಿಸಲು ಸಹ ರಾಜಕೀಯ ಪಕ್ಷಗಳು ಅವಾಕಾಶ ಮಾಡಿಕೊಟ್ಟಿಲ್ಲವೆಂದರು. ಜಿಲ್ಲೆಯಲ್ಲಿ ಸಹ ನಮ್ಮ ಹಿರಿಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಆರ್ಯಾಧ, ಭಾಗಿರತಮ್ಮ, ಹನುಮಂತರಾವ್, ಟಿ.ಕೆ ಗೋಂವಿದರಾಜು, ಜೀವತಂವಾಗಿರುವ ಟಿ.ಆರ್ ರೇವಣ್ಣ, ಕೊಡುಗೆಗಳನ್ನು ನೆನಪಿಸಿಕೊಂಡರು. ಸಿ.ಪಿ.ಐ.ಎಂ ಪಕ್ಷದ ಕಾರ್ಯದರ್ಶಿ ಎನ್.ಕೆ ಸುಬ್ರಮಣ್ಯ ಮಾತನಾಡಿ ಈ 75 ವರ್ಷಗಳಲ್ಲಿ ಗಳಿಸಿದ ಸ್ವಾತಂತ್ರ್ಯವನ್ನು ಈ ಸರ್ಕಾರ ಏಕ ಸಂಸ್ಕøತಿ, ಏಕಭಾಷೆ, ಏಕ ತೆರಿಗೆ, ಏಕ ಧರ್ಮವನ್ನು ದೇಶದ ಜನರ ಮೇಲೆ ಹೇರುವ ಹುನ್ನಾರ ನಡೆಸಿದೆ ಇದನ್ನು ಪ್ರಶ್ನಿಸಿದವರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಕಳಿಸುತ್ತದೆ. ಆದ್ದರಿಂದ ನಾವು ಗಳಿಸಿದ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವ ಹೂಣೆಗಾರಿಕೆ ನಮ್ಮ ಮೇಲೆ ಇದೆ ಹಾಗಾಗಿ ನಿರಂತರವಾಗಿ ಹೋರಾಟಗಳನ್ನು ಜನಚಳವಳಿಯಾಗಿ ಮಾಡಬೇಕೆಂರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೈಯದ್ ಮುಜೀಬ್ ರವರು ಸ್ವಾತಂತ್ರ್ಯ ಬಂದ ಮೇಲೆ ಗಳಿಸಿದ ಕಾನೂನುಗಳನ್ನು ತೆಗೆದು ಹಾಕಲಾಗುತ್ತಿದ್ದು ಇವುಗಳ ಕಾರ್ಮಿಕ ವಿರೋಧಿಗಳಾಗಿವೆ. ಹಾಗಾಗಿ ದುಡಿಯುವ ವರ್ಗ ದೇಶಧ ಸ್ವಾತಂತ್ರ್ಯ ಸಾರ್ವಭೌಮತ್ವ, ಜಾತ್ಯಾತಿತೆ ರಕ್ಷಣೆಗಾಗಿ ಹಾಗೂ ರೈತ ಕಾರ್ಮಿಕರು ಸೇರಿ ದುಡಿಯುವ ಜನರ ಹಕ್ಕುಗಳ ಉಳಿವಿಗಾಗಿ ನಡೆಸುತ್ತಿರುವ ಹೋರಾಟಗಳನ್ನು ಜನಸಾಮಾನ್ಯರ ನಡುವೆ ಪ್ರಚುರಪಡಿಸುವುದು ತೀರ ಅಗತ್ಯವಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ನಡೆಸಬೇಕಾದ ಹೋರಾಟದ ಅಗತ್ಯವನ್ನು ಪ್ರಜ್ಞಾಪೂರ್ವಕವಾಗಿ ಮುನ್ನಡೆಯೋಣವೆಂದರು.ವೇದಿಕೆಯಲ್ಲಿ ನಗರ ಕಾರ್ಯದರ್ಶಿ ಲೋಕೇಶ್ ಉಪಸ್ಥಿತರಿದ್ದರು. ರಂಗಧಾಮಯ್ಯ ಸ್ವಾಗತಿಸಿ ಷಣ್ಮು ಖಪ್ಪ ವಂದಿಸಿದರು.

(Visited 2 times, 1 visits today)