ತುಮಕೂರು:


ನಗರದ ವಿವೇಕಾನಂದ ಸ್ಟೋಟ್ರ್ಸ ಮತ್ತು ಕಲ್ಚರಲ್ ಅಸೋಸಿಯೇಷನ್(ರಿ), ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಗಸ್ಟ್ 12 ರಿಂದ 15ರವರೆಗೆ ರಾಷ್ಟ್ರಮಟ್ಟದ ಮುಕ್ತ ಆಹ್ವಾನಿತ 10 ಮೀಟರ್ ರೈಫಲ್ ಚಾಂಪಿಯನ್ ಶಿಫ್ ಪಂದ್ಯಾವಳಿಯನ್ನು ಆಯೋಜಿಸಿ ರುವುದಾಗಿ ವಿವೇಕಾನಂದ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್‍ನ ಕಾರ್ಯದರ್ಶಿ ಅನಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದ ಮುಕ್ತ ಅಹ್ವಾನಿತ ಈ ಪಂದ್ಯಾವಳಿಯಲ್ಲಿ ಒಲಂಪಿಕ್ ಪದಕ ವಿಜೇತ ಪ್ರಕಾಶ್ ನಂಜಪ್ಪ ಸೇರಿದಂತೆ 450ಕ್ಕು ಹೆಚ್ಚು ಜನ ಶೂಟರ್ಸ್‍ಗಳು ಭಾಗವಹಿಸುತಿದ್ದು, ಸಬ್ ಜೂನಿಯರ್, ಜೂನಿಯರ್, 14 ವರ್ಷದೊಳಗಿನ ಹಾಗೂ ಸಿವಿಲ್ ಈ ನಾಲ್ಕು ವರ್ಗಗಳಲ್ಲಿ,ಓಪನ್ ಸೈಟ್, ಪಿಫ್‍ಸೈಟ್ ಹಾಗೂ ಪಿಸ್ತೂಲ್ ವಿಭಾಗಗಳಲ್ಲಿ ಶೂಟಿಂಗ್ ಸ್ಪರ್ಧೆ ನಡೆಯಲಿದೆ.ಪದಕ ವಿಜೇತರಿಗೆ ಗರಿಷ್ಠ 30 ಸಾವಿರದಂತೆ ಒಟ್ಟು 5.12 ಲಕ್ಷ ರೂಗಳ ನಗದು ಬಹುಮಾನ ಹಾಗೂ ಮೆಡಲ್‍ಗಳನ್ನು ನೀಡಲಾಗುತ್ತಿದೆ. ಇದುವರೆಗು ಸುಮಾರು 450 ಜನರು ಪ್ರವೇಶ ಶುಲ್ಕ 900 ರೂ ಪಾವತಿಸಿ ತಮ್ಮ ಹೆಸರು ನೊಂದಾಯಿಸಿದ್ದಾರೆ.ತುಮಕೂರು ಪ್ರೆಸ್ ಕ್ಲಬ್,ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕ್,ಬೈಯೋ ನೀಡ್ಸ್ ಮತ್ತು ಎಸ್.ಎಲ್.ವಿ. ಸಂಸ್ಥೆಗಳು ಈ ಕ್ರೀಡಾಕೂಟಕ್ಕೆ ಸಹಕಾರ ನೀಡಿವೆ ಎಂದರು.
ರಾಷ್ಟ್ರೀಯ ಮುಕ್ತ ಶೂಟಿಂಗ್ ಚಾಂಪಿಯನ್ ಶಿಫ್‍ನಲ್ಲಿ ಭಾಗವಹಿಸಲು ಆಗಮಿಸುವ ಕ್ರೀಡಾಪಟುಗಳಿಗೆ ಸಿದ್ದಗಂಗಾ ಮಠ ಹಾಗೂ ನಗರದ ವಿವಿಧ ಲಾಡ್ಜ್‍ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.ಮೂರು ಹೊತ್ತಿನ ಊಟದ ವ್ಯವಸ್ಥೆಯನ್ನು ಕುವೆಂಪು ನಗರದ ನಾಗರಕಟ್ಟೆ ಬಳಿ ಮಾಡಲಾಗಿದೆ.ತುಮಕೂರಿನ ವಿವೇಕಾನಂದ ಸ್ಟೋಟ್ರ್ಸ್ ಮತ್ತು ಕಲ್ಚರಲ್ ಆಸೋಸಿಯೇಷನಲ್ಲಿ ಸುಮಾರು 60 ಶೂಟಿಂಗ್ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದು,ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯವರೆಗು ಹೋಗಿ ದ್ದಾರೆ.ಅದರಲ್ಲಿ 10 ಜನರನ್ನು ದತ್ತು ಪಡೆದು,ಅವರಿಗೆ ಬೇಕಾದ ಎಲ್ಲಾ ರೀತಿಯ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದು ಅನಿಲ್‍ಕುಮಾರ್ ತಿಳಿಸಿದರು.
ಆಗಸ್ಟ್ 12 ರಂದು ಕ್ರೀಡಾಕೂಟ ಆರಂಭವಾಗಲಿದ್ದು, ವಿಧಾನಪರಿಷತ್ ಸದಸ್ಯ ಹಾಗು ತುಮಕೂರು ಜಿಲ್ಲಾ ರೈಫಲ್ ಮತ್ತು ಪಿಸ್ತೂಲ್ ಅಸೋಸಿಯೇಷನ್ ಅಧ್ಯಕ್ಷ ಆರ್.ರಾಜೇಂದ್ರ ಚಾಂಪಿಯನ್‍ಶಿಫ್‍ಗೆ ಚಾಲನೆ ನೀಡುವರು.ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್, ಮುಖ್ಯ ಅತಿಥಿಗಳಾಗಿ ತುಮಕೂರು ವಿವಿ ಉಪಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಡಾ.ಎಸ್.ಎನ್.ವಿನಯಬಾಬು,ಹೆಚ್.ನಾಗರಾಜು,ಉಪವಿಭಾಗಾಧಿಕಾರಿ ವಿ.ಅಜಯ್, ಎಸ್.ಪಿ.ರಾಹುಲ್‍ಕುಮಾರ್ ಶಹಪೂರ್ ವಾಡ್, ಎನ್.ಸಿ.ಸಿ.ಕಮಾಂಡರ್ ಮನೋಜ್ ಗುಪ್ತ,ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕ,ಪಿಸ್ತೂಲ್ ಶೂಟರ್‍ಗಳಾದ ಮಂಜುನಾಥ್ ಪಟಗಾರ್, ಪಾರಸ್‍ಮಲ್‍ಪೋರ್‍ವಾಲ್ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.
ನಾಲ್ಕು ದಿನಗಳ ರಾಷ್ಟ್ರೀಯ ಮುಕ್ತ ಶೂಟಿಂಗ್ ಚಾಂಪಿಯನ್ ಶಿಫ್‍ನ ಮುಕ್ತಾಯ ಸಮಾರಂಭ ಆಗಸ್ಟ್ 15 ರಂದು ನಡೆಯಲಿದೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಾಮಕೃಷ್ಣ- ವಿವೇಕಾನಂದ ಆಶ್ರಮದ ಡಾ.ಶ್ರೀವೀರೇಶಾನಂದಸರಸ್ವತಿ ಸ್ವಾಮೀಜಿ ವಹಿಸಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಅರಗಜ್ಞಾನೇಂದ್ರ,ಶಾಸಕ ಜಿ.ಬಿ.ಜೋತಿಗಣೇಶ್ ಅವರುಗಳು ಅಧ್ಯಕ್ಷತೆ ವಹಿಸುವರು.ವಿಜೇತರಿಗೆ ಅರ್ಜುನ ಪ್ರಶಸ್ತಿ ಪುರಸ್ಕøತ ಶೂಟರ್ ಪ್ರಕಾಶ್ ನಂಜಪ್ಪ ಬಹುಮಾನ ವಿತರಿಸುವರು. ಜಿಲ್ಲಾಧಿಕಾರಿಗಳು,ಪಾಲಿಕೆ ಮೇಯರ್, ಹೆಚ್ಚುವರಿ ಜಿಲ್ಲಾಧಿಕಾರಿ,ಹೌಸಿಂಗ್ ಬೋರ್ಡ್ ನಿರ್ದೇಶಕ ಬ್ಯಾಟರಂಗೇಗೌಡ, ಡಿಎಆರ್ ಡಿವೈಎಸ್ಪಿ ಪರಮೇಶ್.ಕೆ.ಎನ್., ರಾಜ್ಯ ರೈಫಲ್ ಅಸೋಸಿಯೇಷನ್ ಕಾರ್ಯದರ್ಶಿ ಜಿ.ಸುಶೀಲ್ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದರು. ಸುದ್ದಿಗೋಷ್ಠಿಯಲ್ಲಿ ನೇತಾಜಿ ಶ್ರೀಧರ್, ಕನ್ನಡ ಸೇನೆಯ ಧನಿಯಕುಮಾರ್, ಶ್ರೀನಿವಾಸ್, ವಿಶ್ವನಾಥ್, ಮುರುಳೀಧರ್ ಉಪಸ್ಥಿತರಿದ್ದರು.

(Visited 4 times, 1 visits today)