ತುಮಕೂರು

ವಿಜ್ಞಾನ ಮನೆಯಿಂದಲೇ ಆರಂಭವಾಗುತ್ತದೆ .ದಿನನಿತ್ಯ ಜೀವನದಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ವಿಜ್ಞಾನದ ಅನ್ವಯವಾಗುತ್ತಿದ್ದು ಅವುಗಳನ್ನು ವಿಶ್ಲೇಷಣೆ ಮಾಡುವುದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಶೋಧನಾತ್ಮಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸುದ್ಧಿ ಬಿಂಬ ಪತ್ರಿಕೆ ಸಂಪಾದಕರಾದ ಸತೀಶ್ ಹೇಳಿದರು .

ತುಮಕೂರು ನಗರದ ಆರ್ಯನ್ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಜಿಲ್ಲಾ ಸಮಿತಿ ತುಮಕೂರು ಹಾಗೂ ಶಾಲಾ ,ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರುಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸರ್ ಸಿ ವಿ ರಾಮನ್ ರಸಪ್ರಶ್ನೆ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾಕ್ಟರ್ ಸಂಜಯ್ ನಾಯಕ್ ಮಾತನಾಡಿ ವಿಜ್ಞಾನವು ಒಂದು ಅದ್ಭುತವಾದ ವಿಷಯವಾಗಿದೆ ಪ್ರಚಲಿತ ವಿದ್ಯಮಾನಗಳಿಗೆ ವಿಜ್ಞಾನದ ಕೊಡುಗೇ ಅಪಾರವಾಗಿದೆ.ಯಾವುದೇ ಒಂದು ವಿಷಯವನ್ನು ಕುರಿತು ಆವಿಷ್ಕಾರ ಮಾಡಿದಾಗ ಅದರಿಂದ ಜನರಿಗೆ ಅನುಕೂಲವಾದರೆ ಅತಿ ಸಂತೋಷವಾಗುತ್ತದೆ ಯಂದು ತಿಳಿಸಿದರು . ಪ್ರಥಮ ಬಹುಮಾನ ಶ್ರೀ ಚೈತನ್ಯ ಟೆಕ್ನೋ ಶಾಲೇಯ ಹರಿಪ್ರಸಾದ್ ಹಾಗು ಅಟಲ್ ಹರ್ಷಿತ್ ವಿಜೇತರಾದರೆ. ದ್ವೀತಿಯ ಬಹುಮಾನವನ್ನು ಶ್ರೀ ಚೈತನ್ಯವಿದ್ಯಾ ಮಂದಿರ ಹೊರಪೇಟೆ ತುಮಕೂರಿನ ಈಶ್ವರ್ ಹಾಗು ಶ್ರೇಯಸ್ ರವರೆಗೆ ಲಭಿಸಿದೆ . ಕಾರ್ಯಕ್ರಮದಲ್ಲಿ ಶ್ರೀ ಮಹೇಶ್ ಎಸ್ ಹಾಗು ಮೊಹಮ್ಮದ್ ಉಸೈನ್ ಪೀರ್ ಡಯಟ್ ನ ಉಪನ್ಯಾಸಕರು ಹಾಗು ಆರ್ಯನ್ ಪ್ರೌಢ ಶಾಲೆಯ ಮುಕ್ಯೋಪಾದ್ಯಾಯರದ್ದ ಶ್ರೀ ಗೋಪಾಲ್ ಹಾಗು ಕೆ ಅರ್ ವಿ ಪಿ ಕಾರ್ಯದಶಿ ನಾಗೇಶ್ ಹಾಗು ಜಿಲ್ಲಾ ಸಂಯೋಜಕ ವಿಶ್ವನಾಥ್ ಉಪಸ್ಥಿತರಿದ್ದರು.

(Visited 7 times, 1 visits today)