ತುಮಕೂರು :

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್   3ನೇ ಸಮ್ಮೇಳನ, ಸ್ಪೆ. 22, 2022. ಸೋಮವಾರ, ಪಾವಗಡ ಎ.ಪಿ.ಎಂ.ಸಿ. ಯಾರ್ಡ ಆವರಣದಲ್ಲಿ ಸಂಘಟನೆಯಲ್ಲಿ ದುಡಿದು ನಿಧನರಾದ ಅಂಗನವಾಡಿ ನೌಕರರ ಸಂಘದ ಕಾಂ.ಹೆಚ್.ಸುಬ್ಬಮ್ಮ ಗ್ರಾಮ ಪಂಚಾಯಿತಿ ನೌಕರರ ಸಂಘದ ಕಾಂ. ಸುಬ್ರಾಯಪ್ಪ, ಸಭಾಂಗಣ, ಬಿಸಿಯೂಟ ನೌಕರರ ಸಂಘದ ಮುಖಂಡರಾದ ಕಾಂ. ಸುನಂದ ವೇದಿಕೆ ನೆನಪಲ್ಲಿ ನಡೆಯಿತು. ಸಮ್ಮೇಳನವು ಹಿರಿಯ ಸಂಗಾತಿ ಹಮಾಲಿ ಸಂಘದ ಸುಬ್ರಾಯಪ್ಪನವರ ಧ್ವಜಾರೋಣ ಮಾಡಿ ಸಂಘಟನೆಯಲ್ಲಿ ಉತ್ತಾತ್ಮರಾದ ಹಾಗು ಸಮಾಜಕ್ಕೆ ದುಡಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉದ್ಘಾಟನೆ ಮಾಡಿದ ಹಮಾಲಿ ಕಾರ್ಮಿಕ ಸಂWದ ಕಾರ್ಯದರ್ಶಿ ನಾಗರಾಜು ಮಾತನಾಡಿ ಪಾವಗಡ ತಾಲ್ಲೂಕು ಹಿಂದುಳಿದಿದ್ದು ಜನರು ಸಂಕಷ್ಠದಲ್ಲಿದ್ದು ಅವರ ಬದುಕು ಉತ್ತಮವಾಗಬೇಕೆಂದರೆ ಸರ್ಕಾರ ತಾಲ್ಲೂಕನ್ನು ಸಮಗ್ರ ಅಬಿವೃದ್ಧಿ ಒಳಪಡಿಸಬೇಕೆಂದರು. ಮುಖ್ಯ ಅತಿಥಿ ಸಿ.ಐ.ಟಿ.ಯು. ಜಲ್ಲಾ ಉಪಾಧ್ಯಕ್ಷ ಬಿ. ಉಮೇಶ ಮಾತನಾಡಿ ಸಂಘದ ಮುಖಂಡರು ಶೋಷಿತ, ಆಶಕ್ತ ಮತ್ತು ಧ್ವನಿ ಇಲ್ಲದ ಜನರ ಕಷ್ಠಕ್ಕೆ ಹಾಗೂ ಸರ್ಕಾರದ ರೈತ-ಕಾರ್ಮಿಕ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಳನ ಕಟ್ಟಬೇಕೆಂದರು. ಕಟ್ಟಡ ಕಾರ್ಮಿಕ ಸಂಘದ ರಾಮಾಂಜಿನಪ್ಪ, ಅಂಗನವಾಡಿ ಸಂಘದ ಭೂಲಕ್ಷ್ಮಮ್ಮ, ಹಮಾಲಿ ಸಂಘದ ಮದ್ದಲೇಟಪ್ಪ, ಗ್ರಾಮ ಪಂಚಾಯ್ತಿ ಸುಬ್ರಾಯಪ್ಪ, ಅಕ್ಷರ ದಾಸೋಹದ ಕೆಂಚಮ್ಮ, ಅದ್ಯಕ್ಷಮಂಡಲಿಯಲ್ಲಿದ್ದರು. ಅತಿಥಿಗಳಾಗಿ ಜಿ. ಅಂಜಯ್ಯ, ನಾಗರತ್ನ, ಭೂಲಕ್ಷ್ಮಮ್ಮ, ಶ್ರೀನಿವಾಸ್, ಮಾತನಾಡಿದರು. ಸ್ವಾಗತ ಮತ್ತು ನಿರೂಪಣೆಯನ್ನು ಶಿವಗಂಗಮ್ಮ ಮಾಡಿದರು. ಸಮ್ಮೇಳದಲ್ಲಿ ಕೇಂದ್ರ ಸರ್ಕಾರ ಬೆಲೆ ಇಳಿಸಬೇಕು, ಕನಿಷ್ಠ ವೇತನ ಜಾರಿಮಾಡುವಂತೆ, ಹಮಾಲಿ ಸೇದಂತೆ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಾನೂನು ತರಬೇಕು, ಖಾಯಂಯಾತಿ, ಹೊಸ ಉದ್ಯೋಗ ಸೃಷ್ಠಿ, ಸೇರಿದಂತೆ ಸಂವಿಧಾನ ರಕ್ಷಣೆ ಮಾಡಿ ದೇಶದಲ್ಲಿ ಕೋಮು-ಸೌಹಾರ್ಧತೆ ಕಾಪಾಡುವಂತೆ ನಿರ್ಣಯಿಸಲಾಯಿತು. 15 ಜನರ ಸಿ.ಐ.ಟಿ.ಯು. ಪಾವಗಡ ತಾಲ್ಲೂಕು ಸಂಘಟನಾ ಸಮಿತಿಯನ್ನು ಆಯ್ಕೆಮಾಡಲಾಯಿತು.

(Visited 4 times, 1 visits today)