ಡಿ.ಕೆ.ಶಿವಕುಮಾರ್ ಬಂಧನ ವಿಚಾರದಲ್ಲಿ ಬಿಜೆಪಿಯ ಪಾತ್ರವಿಲ್ಲ – ಡಿಸಿಎಂ ಡಾ:ಅಶ್ವಥ್ಥನಾರಾಯಣ

ತುರುವೇಕೆರೆ:

      ಡಿ.ಕೆ.ಶಿವಕುಮಾರ್ ಭಂದನದ ವಿಚಾರದಲ್ಲಿ ತನಿಖೆ ಕಾನೂನು ಚೌಕಟ್ಟಿನಲ್ಲಿಯೇ ಸಾಗುತ್ತಿದ್ದು, ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ:ಅಶ್ವಥ್ಥನಾರಾಯಣ ತಿಳಿಸಿದರು.

      ತುರುವೇಕೆರೆ ಮಾರ್ಗವಾಗಿ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ನಿರ್ಮಿತವಾಗಿರುವ ಶ್ರೀ ಕಾಲಭೈರವೇಶ್ವರ ಸಮುದಾಯ ಭವನದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಎದುರು ಎಲ್ಲರೂ ಸಮಾನರು, ಕಾನೂನನ್ನು ಎಲ್ಲರೂ ಗೌರವಿಸಬೇಕು, ಡಿ.ಕೆ.ಶಿವಕುಮಾರ್ ತಪ್ಪು ಮಾಡಿಲ್ಲದಿದ್ದರೆ ಹೊರಬರುತ್ತಾರೆ, ಆದರೆ ಈ ವಿಚಾರಕ್ಕೆ ರಾಜಕೀಯ ಲೇಪನ ಹಚ್ಚುವ ಅವಶ್ಯಕತೆಯಿಲ್ಲ, ನಮ್ಮ ದೇಶದ ಕಾನೂನು ಸಾಮಾನ್ಯನಿಂದ ಹಿಡಿದು ಕೋಟ್ಯಾಧಿಪತಿಗೂ ಒಂದೇಯಿದೆ ಕಾನೂನನ್ನು ನಾವುಗಳು ಗೌರವಿಸಬೇಕು ಎಂದರು.

      ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು ಮುಂದಿನ ಎರಡು ತಿಂಗಳಲ್ಲಿ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂದರು.

      ಸ್ಥಳೀಯ ಶಾಸಕ ಮಸಾಲೆಜಯರಾಮ್, ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ಗಂಗಣ್ಣ, ವಿ.ಬಿ.ಸುರೇಶ್, ಕಾಳಂಜೀಹಳ್ಳಿ ಸೋಮಣ್ಣ, ವಿ.ಟಿ.ವೆಂಕಟರಾಮ್, ಮಿಥುನ್‍ಹನುಮಂತೇಗೌಡ ಇತರರು ಇದ್ದರು.
 

(Visited 7 times, 1 visits today)

Related posts

Leave a Comment