ಕೊರಟಗೆರೆ :


ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಪ್ಪನಹಳ್ಳಿಯ ಸುವರ್ಣಮುಖಿ ನದಿಯಲ್ಲಿ 2 ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ಆಂಧ್ರ ಮೂಲದ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಕೊರಟಗೆರೆ ಪೆÇಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅನೇಕ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲಾ ಕೆರೆ, ಕಟ್ಟೆ, ನದಿಗಳು ತುಂಬಿ ಕೋಡಿ ಬಿದ್ದಿವೆ.
ಇನ್ನೂ ಆಂಧ್ರದಿ0ದ ತುಮಕೂರಿಗೆ ಅಕ್ಕಿ ಮೂಟೆಗಳನ್ನು ತುಂಬಿಕೊ0ಡು ಬರುತ್ತಿದ್ದ ಟಾಟಾ ಏಸ್ ಒಂದು ಮಲಪನಹಳ್ಳಿ ಸೇತುವೆ ಬಳಿ ಬಂದು ಚಾಲಕನ ನಿಯಂತ್ರಣ ತಪ್ಪಿ, ನೋಡು ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋಗಿತ್ತು. ಚಾಲಕನ ಹುಡುಕಾಟವನ್ನು ಅಧಿಕಾರಿಗಳು ನಡೆಸುತ್ತಲೆ ಇದ್ದರೂ.
ಮಲಪನಹಳ್ಳಿಯಿಂದ ಸುವರ್ಣಮುಖಿ ನದಿಯಲ್ಲಿನ 6 ಕಿ.ಮೀ ಅಂತರದಲ್ಲಿ ಚಾಲಕ ದೇಹ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಎಎಸ್‍ಐ ಮಂಜುನಾಥ್, ಎಎಸ್‍ಐ ಯೋಗೀಶ್, ಸಿಬ್ಬಂದಿ ಬಾಲನಾಯಕ್ ಭೇಟಿ ನೀಡಿ ಮೃತದೇಹವನ್ನು ನದಿಗೆ ಇಳಿದು ಹೊರತೆಗೆದಿದ್ದಾರೆ.
ಇತಿಹಾಸದಲ್ಲಿ ಹಿಂದೆ0ದೂ ಕಂಡರಿಯದ ಮಳೆಯನ್ನು ಈ ಬಾರಿ ಕೊರಟಗೆರೆ ತಾಲ್ಲೂಕು ಸೇರಿದಂತೆ ಈಡೀ ಜಿಲ್ಲೆಯ ಜನರು ನೋಡುತ್ತಿದ್ದು, ಅಬ್ಬರದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಪಾತ್ರದ ಜನರು ಎಚ್ಚರದಿಂದ ಇರಲು ಅಧಿಕಾರಿಗಳು ಸೂಚಿಸಿತ್ತಾ ಬಂದಿದ್ದರು ಕೆಲವು ಕಡೆ ಪ್ರಾಣ ಹಾನಿ ಸಂಭವಿಸಿದ್ದು ದುರಂತವೇ ಸರಿ.
ಗರುಡಾಚಲ ಜಯಮಂಗಲಿ ಸುವರ್ಣಮುಖಿ ನದಿ ಸೇರಿದಂತೆ ತಾಲ್ಲೂಕಿನ ಎಲ್ಲ ಕೆರೆ ಕಟ್ಟೆಗಳು ತುಂಬಿ ಉಕ್ಕಿ ಹರಿಯುತ್ತಿವೆ. ತಾಲ್ಲೂಕಿನ ವಿಧಾನಸಭಾ ಕ್ಷೇತ್ರದಲ್ಲಿ 45ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿದ್ದು, ಜನರಲ್ಲಿ ಒಂದು ಕಡೆ ಸಂತಸದ ವಾತಾವರಣ ಮನೆ ಮಾಡಿದರೆ ಮತ್ತೊಂದು ಕಡೆ ಜನರ ಜೀವಹಾನಿಯಾಗುತ್ತಿರುವುದು ಮತ್ತು ರೈತರು ಬೆಳೆದ ಬೆಳೆಗಳೆಲ್ಲಾ ಕಣ್ಣ ಮುಂದೆ ಕೊಚ್ಚಿ ಹೋಗುತ್ತಿವೆ. ಬೃಹತ್ ಗಾತ್ರದ ತೆಂಗು ಸೇರಿದಂತೆ ಅನೇಕ ಮರಗಳು ಧರೆಗೆ ಉರುಳುತ್ತಿರುವುದನ್ನು ನೋಡಿ ಜನರು ಕಂಗಾಲಾಗಿದ್ದಾರೆ. ಅಲ್ಲದೇ ಕೆಲವು ಕುಟುಂಬಗಳು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ.
ಬಹುತೇಕ ಗ್ರಾಮೀಣ ಭಾಗಕ್ಕೆ ಸಂಪರ್ಕಿಸುವ ರಸ್ತೆಗಳು ಜಲಾವೃತಗೊಂಡಿದ್ದು, ರಣಚಂಡಿ ಮಳೆಯ ಅಬ್ಬರಕ್ಕೆ ಮನೆಯೊಳಗೆ ನುಗ್ಗಿದ ನೀರು ಜನಜೀವನಕ್ಕೆ ಅಪಾರ ಹಾನಿಯನ್ನುಂಟು ಮಾಡಿದೆ. ಸಾವಿರಾರು ಎಕರೆ ಜಮೀನು ಮಳಯಿಂದ ಆವೃತವಾಗಿದ್ದು, ನೀರಿನ ರಭಸಕ್ಕೆ ಅಡಿಕೆ, ತೆಂಗಿನ ಮರಗಳು ಬುಡ ಸಮೇತ ಕೊಚ್ಚಿ ಹೋಗುತ್ತಿವೆ.
ರೈತ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನ ಹನುಮಂತಯ್ಯನಪಾಳ್ಯ ಗ್ರಾಮದ ನಮ್ಮ ಜಮೀನಿನಲ್ಲಿ 150 ಕ್ಕೂ ಹೆಚ್ಚು ಅಡಕೆ ಮರಗಳು 30 ಕ್ಕೂ ಹೆಚ್ಚು ತೆಂಗಿನ ಮರಗಳು ಸೇರಿದಂತೆ ಬಹುತೇಕ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿದ ನೀರು ಮಳೆಯಿಂದಾಗಿ ಹಾನಿಗೊಳಗಾಗಿವೆ. ಜಯಮಂಗಲ ನದಿಯು ಅಧಿಕ ಮಳೆಯಿಂದ ತನ್ನ ಹರಿವಿನ ದಿಕ್ಕನ್ನು ಬದಲಿಸಿದೆ. ಆದ್ದರಿಂದ ದಯಮಾಡಿ ಅಧಿಕಾರಿಗಳು ಇತ್ತ ಗಮನಿಸಿ ಪರಿಹಾರ ಒದಗಿಸಿಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ.
ಗ್ರಾಮ ಪಂಚಾಯಿತಿ ಸದಸ್ಯ ವೀರಕ್ಯಾತಯ್ಯ ಮಾತನಾಡಿ, ನಮ್ಮ ವಡ್ಡಗೆರೆ ಗ್ರಾಮ ಪಂಚಾಯಿತಿಯ ಮಲ್ಲಪ್ಪನಹಳ್ಳಿ ಗ್ರಾಮದ ಬಳಿ ಸೇತುವೆ ಮುಳುಗಡೆಯಾಗಿದೆ. ವಡ್ಡಗೆರೆ ಮಾರ್ಗವಾಗಿ ಮಲಪನಹಳ್ಳಿಗೆ ಹೋಗಲು ಇದ್ದ ಸೇತುವೆ ಜಯಮಂಗಲಿ ನದಿ ನೀರಿನ ರಭಸಕ್ಕೆ ಮುಳುಗಡೆಗೊಂಡಿದ್ದು ಇಲ್ಲಿ ಮೇಲ್ಸೆತುವೆ ಅವಶ್ಯಕತೆಯಿದ್ದು ದಯಮಾಡಿ ಸಂಬ0ಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಬ್ರಿಡ್ಜ್ ಮಾಡಿಕೊಡಲು ಗ್ರಾಮದ ಪರವಾಗಿ ಒತ್ತಾಯಿಸುತ್ತೇನೆ.
ರಣಚಂಡಿ ಮಳೆಗೆ ನೆಲಸಮಗೊಂಡ ಮನೆಗಳು, ಕೋಟ್ಯಾಂತರ ಎಕರೆ ಬೆಳೆ ನಾಶ, ನದಿಪಾತ್ರದ ಮನೆಗಳಿಗೆ ನುಗ್ಗಿದ ನೀರು ದವಸ ಧಾನ್ಯ ಸೇರಿದಂತೆ ಮನೆಯಲ್ಲಿದ್ದ ದಾಖಲೆಗಳನ್ನು ನಾಶ ಮಾಡಿದೆ. ರಾತ್ರಿ ಯಿಡೀ ಜಾಗರಣೆ ಮಾಡಿದ ಜನರು ನಿದ್ದೆ ಇಲ್ಲದೇ, ಊಟ ಇಲ್ಲದೇ ಬಳಲುತ್ತಿದ್ದಾರೆ.

(Visited 1 times, 1 visits today)