ತುಮಕೂರು


ಕುಂಚಿಟಿಗ ಜನಾಂಗವನ್ನು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಗೆ ಸೇರಿಸಲು ಗ್ರಾಮಾಂತರ ಮತ್ತು ಹೋಬಳಿ ಮಟ್ಟದಲ್ಲಿ ಹೋರಾಟ ಅನಿವಾರ್ಯ ಎಂದು ಎಲೆ ರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ.
ಮಧುಗಿರಿ ತಾಲೂಕು ಕುಂಚಿಟಿಗರ ಸಂಘದ ವಾರ್ಷಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಮೀಸಲಾತಿ ಪಡೆಯುವುದರ ಜೊತೆಗೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬಹುದು ಜಿಲ್ಲೆಯ ಕುಂಚಿಟಿಗ ಸಂಘಗಳಲ್ಲಿ ಮಧುಗಿರಿ ಸಂಘ ಪ್ರಥಮ ಸ್ಥಾನದಲ್ಲಿದೆ ಮುಂದಿನ ದಿನಗಳಲ್ಲಿ ತಾಲೂಕು ಸಂಘದಲ್ಲಿ ಕನಿಷ್ಠ ಮೂವತ್ತು ಸಾವಿರ ಸದಸ್ಯರನ್ನು ಹೊಂದಬೇಕಾಗಿದೆ ಅದೇ ರೀತಿ ರಾಜ್ಯದಲ್ಲಿ ಕನಿಷ್ಠ 10 ಮಂದಿ ಕುಂಚಟಿಗ ಶಾಸಕರನ್ನು ಆಯ್ಕೆ ಮಾಡಬೇಕಾಗಿದೆ ಕುಂಚಿಟಿಗ ಸಂಘದಲ್ಲಿ ಕೇವಲ ವಿಸಿಟಿಂಗ್ ಕಾರ್ಡ್ ಗೋಸ್ಕರ ನಿರ್ದರ್ಶಕರಾಗಬೇಡಿ ಜವಾಬ್ದಾರಿ ಮತ್ತು ಬದ್ಧತೆ ಅರಿತು ಕೆಲಸ ಮಾಡಿ ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮ ಕೊಡುಗೆ ಏನು ಎಂಬ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದರು.
ಕುಂಚಿಟಿಗರ ಸಂಘದ ಅಧ್ಯಕ್ಷ ಪಿ ಎನ್ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು ಚಿತ್ರದುರ್ಗ ಜಿಲ್ಲಾ ಭಾಜಪ ಯುವ ಮೋರ್ಚಾ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ. ಪುರಸಭಾ ಸದಸ್ಯರಾದ ಚಂದ್ರಶೇಖರ ಬಾಬು ಲಾಲಪೇಟೆ ಮಂಜುನಾಥ್ ಗುತ್ತಿಗೆದಾರರ ಮಹೇಶ್ ಕುಂಚಿಟಿಗರ ಸಂಘದ ಗೌರವಾಧ್ಯಕ್ಷ ಡಿ ಎಸ್ ಸಿದ್ದಪ್ಪ ಕಾರ್ಯದರ್ಶಿ ಸಿವಿ ಉಮೇಶ್ ಪದಾಧಿಕಾರಿಗಳಾದ ಜಯರಾಮಯ್ಯ ರಾಮಚಂದ್ರಯ್ಯ ನಿರ್ದೇಶಕರುಗಳಾದ ಚೆನ್ನಲಿಂಗಪ್ಪ. ಸುವರ್ಣಮ್ಮ. ದೇವರಾಜು. ಸಿ ಕುಮಾರ್. ಮೋಹನ್. ಹೆಚ್ ಬಿ ವೀರಣ್ಣ. ಎಂಎಲ್ ಗಂಗರಾಜು. ಕಾಳೇಗೌಡ. ಎಂ ರಘು. ಕರೆ ಗೌಡ. ಲಕ್ಷ್ಮಿ ಮಹಿಳಾ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳು ಒಕ್ಕಲಿಗ ನೌಕರರ ಸಂಘದ ಪದಾಧಿಕಾರಿಗಳು
ಮತ್ತಿತರರು ಹಾಜರಿದ್ದರು.

(Visited 4 times, 1 visits today)