ತುಮಕೂರು :

ದೇಶದ ಪ್ರಧಾನಿ ನರೇಂದ್ರ ಮೋದಿರವರು ಹಿಂದುಳಿದ
ವರ್ಗದ ಹಾಗೂ ಬಡ ವರ್ಗದವರು ಮತ್ತು ಎಲ್ಲರೂ ಪ್ರಶಂಶಿಸುವ ವ್ಯಕ್ತಿ ಆಗಿದ್ದು,
ದೇಶದ ಆರ್ಥಿಕತೆ, ಭದ್ರತೆ, ಸುರಕ್ಷತೆಗೆ ಕಟಿಬದ್ಧರಾಗಿದ್ದಾರೆಂದು ಶ್ರೀ ಶೆಟ್ಟಿಹಳ್ಳಿ
ಟೀ ಸ್ಟಾಲ್‍ನ ಮಾಲೀಕ ಬಿ.ಉಮೇಶ್ ಕುಮಾರ್ (ಶೆಟ್ಟಿಹಳ್ಳಿ) ಮತ್ತು ಬಾಯರ್ಸ್ ಕಾಫೀ
ಸ್ಟಾಲ್‍ನ ಮಾಲೀಕ ಪಿ.ಕೃಷ್ಣಮೂರ್ತಿರವರುಗಳು ಜಂಟಿಯಾಗಿ ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ. ಇವರು ಇಂದು ತುಮಕೂರಿನ ಶ್ರೀ ಬಾಲಗಂಗಾಧರ
ಸ್ವಾಮೀಜಿರವರುಗಳ (ಟೌನ್ ಹಾಲ್) ವೃತ್ತದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರಧಾನಿ
ನರೇಂದ್ರ ಮೋದಿರವರ ಜನ್ಮ ದಿನದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ
ಶುಕ್ರವಾರ (ಇಂದು) ನಡೆದ ಮೋದಿರವರ ಜೀವನ ಚರಿತ್ರೆಯ ಪ್ರದರ್ಶಿನಿ
ಕಾರ್ಯಕ್ರಮದ ಉದ್ಘಾಟನೆ ಮಾಡಿ ಸನ್ಮಾನಿಸಿದ ನಂತರ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿರವರು ಬಾಲ್ಯದಲ್ಲಿ ನಮ್ಮ ಹಾಗೆ ಟೀ ಅಂಗಡಿ
ನಡೆಸುತ್ತಾ, ಸಾಮಾಜಿಕ ಸೇವಾ ಚಟುವಟಿಕೆ ಮೂಲಕ ಹಂತ-ಹಂತವಾಗಿ ರಾಜಕೀಯದಲ್ಲಿ
ಮೆಟ್ಟಲೇರುತ್ತಾ ಬಿಜೆಪಿ ಕಾರ್ಯಕರ್ತರಾಗಿ, ಮುಖ್ಯಮಂತ್ರಿ, ಪ್ರಧಾನ
ಮಂತ್ರಿಗಳಾಗಿ ಬಡವರು ಹಿಂದುಳಿದವರಿಗೆ ಹಲವಾರು ಯೋಜನೆಗಳಾದ ಉಜ್ವಲ,
ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಗರೀಬ್ ಕಲ್ಯಾಣ್ ಅನ್ನ
ಯೋಜನೆ, ಜನ್ ಧನ್ ಯೋಜನೆ, ಜಲ್ ಜೀವನ್ ಮೀಷನ್ ಮುಂತಾದ ಯಶಸ್ವಿ
ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನಪ್ರೀಯರಾಗಿದ್ದಾರೆಂದು ಶ್ರೀ ಶೆಟ್ಟಿಹಳ್ಳಿ ಟೀ
ಸ್ಟಾಲ್‍ನ ಮಾಲೀಕ ಬಿ.ಉಮೇಶ್ ಕುಮಾರ್ (ಶೆಟ್ಟಿಹಳ್ಳಿ) ಅಭಿಪ್ರಾಯ ವ್ಯಕ್ತ ಪಡಿಸಿದರು.
ಮೋದಿರವರು ಬಡತನ ಕುಟುಂಬದಿಂದ ಬಂದವರಾಗಿ ಬಡವರ ಕಷ್ಟದ ಬಗ್ಗೆ
ಹರಿವಿದ್ದು, ರೈತರು, ಮಹಿಳೆಯರು, ಶ್ರಮ ಜೀವಿಗಳು, ಕೃಷಿ ಕಾರ್ಮಿಕರು,
ಪರಿಶಿಷ್ಟ ಜಾತಿ/ವರ್ಗ ಮತ್ತು ಎಲ್ಲಾ ಸಮೂದಾಯದವರಿಗೂ ಅನುಕೂಲವಾಗುವ ಉಚಿತ
ಕಾರೋನಾ ಲಸಿಕೆ, ಕಿಸಾನ್ ಸಮ್ಮಾನ್ ನಿಧಿ, ಸೌಭಾಗ್ಯ ಯೋಜನೆ, ಬೇಟಿ ಬಚಾವೋ, ಬೇಟಿ
ಪಢಾವೋ, ಸ್ವಚ್ಛ್ ಭಾರತ್ ಅಭಿಯಾನ, ಕಾರ್ಮಿಕತ ಕಲ್ಯಾಣ, ಅಂತ್ಯೋದಯ
ಯೋಜನೆಗಳು, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಪಾರದರ್ಶಕ
ಆಡಳಿತದ ಮೂಲಕ ಜನ ಮನ್ನಣೆ ಪಡೆದಿದ್ದಾರೆಂದು ಬಾಯರ್ಸ್ ಕಾಫೀ ಸ್ಟಾಲ್‍ನ
ಮಾಲೀಕ ಪಿ.ಕೃಷ್ಣಮೂರ್ತಿರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಜಿಲ್ಲಾಧ್ಯಕ್ಷ
ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ, ರಾಜ್ಯ
ಪ್ರಕಾಶನ ಪ್ರಕೋಷ್ಠದ ಸಮಿತಿ ಸದಸ್ಯರಾದ ಪ್ರತಾಪ್ ಸಿಂಗ್, ಜಿಲ್ಲಾ ವಕ್ತಾರ
ಕೆ.ಪಿ.ಮಹೇಶ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಯಶಸ್.ಟಿ.ವೈ, ಉಪಾಧ್ಯಕ್ಷ
ಗುರುಪ್ರಸಾದ್ ಮತ್ತು ವಿನಯ್ ಜೈನ್, ತುಮಕೂರು ನಗರ ಮಂಡಲ
ಅಧ್ಯಕ್ಷ ಹೆಚ್.ಟಿ.ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ಗಣೇಶ್.ಜಿ.ಪ್ರಸಾದ್,
ಉಪಾಧ್ಯಕ್ಷ ಕೆ.ಎಸ್.ಕುಮಾರ್, ಮಹಾನಗರ ಪಾಲಿಕೆ ಸದಸ್ಯ ಸಿ.ಎನ್.ರಮೇಶ್,
ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಣ್ಣೇ ತೋಟ ಶ್ರೀನಿವಾಸ್, ಪ್ರಮುಖರಾದ ಕೊಪ್ಪಾಳ್
ನಾಗರಾಜ್, ಹನುಮಂತರಾಯಪ್ಪ, ನಂಜುಂಡಸ್ವಾಮಿ(ದಾಸ್) ಮುಂತಾದ ನೂರಾರು
ಸಾರ್ವಜನಿಕರು, ಹಿರಿಯರು, ಅಭಿಮಾನಿಗಳು ಈ ಪ್ರದರ್ಶಿನಿಯನ್ನು ವೀಕ್ಷಿಸಿದರು.

(Visited 3 times, 1 visits today)