ತುಮಕೂರು:

ಸಮಾರೋಪ ಸಮಾರಂಭ ಈ ಕಾರ್ಯಕ್ರಮದ ಮುಖ್ಯ ಭಾಷಣ ಮಾಡಿದ ಗೌರವಾನ್ವಿತ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಎನ್.ಎಸ್. ಸಂಜಯ್ ಗೌಡ ರವರು ವಿದ್ಯಾರ್ಥಿಗಳಿಗೆ ಹಿತ ವಚನ ನೀಡುತ್ತಾ ನಿಮ್ಮ ನಿಜ ಜೀವನ ಇನ್ನು ಮುಂದೆ ಪ್ರಾರಂಭವಾಗುತ್ತದೆ. ಜಾಗೃತರಾಗಿ ಕಕ್ಷಿದಾರರನ್ನು ಗೌರವಿಸಿ, ಅವರಿಗೆ ನ್ಯಾಯ ನೀಡುವಂತೆ, ಅಧ್ಯಯನ ಮಾಡಿ ಸಮರ್ಥವಾಗಿ ವಾದ ಮಂಡಿಸಿ, ನ್ಯಾಯ ಒದಗಿಸಿಕೊಡಿರಿ ಎಂದು ಕರೆ ನೀಡಿದರು. ಆತ್ಮ ತೃಪ್ತಿಯಿಂದ ಕೆಲಸ ಮಾಡಿರಿ ನಿಮಗೂ ಈ ಮೂಲಕ ಸಂತೋಷ ಉಂಟಾಗುತ್ತದೆ. ಹಣ ಬರುತ್ತದೆ ಹೋಗುತ್ತದೆ ಹಣದ ಹಿಂದೆ ಹೋಗಬೇಡಿ ಕಕ್ಷಿದಾರರ ಅಥವಾ ನೀವು ಕೆಲಸ ಮಾಡುವಾಗ ನ್ಯಾಯ ಒದಗಿಸಿಕೊಡುವ ಎಲ್ಲಾ ಸಂದರ್ಭಗಳನ್ನು ಸಂತೋಷವಾಗಿ ಅನುಭವಿಸಿ ಜೀವನ ಸಾರ್ಥಕಗೊಳಿಸಿ ಎಂದು ಹೇಳಿದರು. ಇದನ್ನೇ ವೃತ್ತಿಯಲ್ಲಿ ಬದ್ದತೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹೊಮ್ಮಿಸುವ ‘ಅರಿವು’ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಈ ಸಂಚಿಕೆಯನ್ನು ಇತ್ತೀಚೆಗೆ ಕೀರ್ತೀಶೇಷರಾದ ಶ್ರೀ ಹೆಚ್.ಎಸ್.ಶೇಷಾದ್ರಿಯವರಿಗೆ ಸಮರ್ಪಣೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್‍ನ ಸದಸ್ಯರಾದ ಶ್ರೀ ಎಂ.ಎನ್.ಮಧುಸೂಧನ್ ರವರು ನಾನು ಈ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿಗೆ ತೆರಳಿ ತುಂಬಾ ಶ್ರಮಬಿದ್ದು ಈ ಮಟ್ಟಕ್ಕೆ ಬರಲು ನನಗೆ ಈ ಕಾಲೇಜು ಹಾಕಿಕೊಟ್ಟ ಪಾಠ ಹಾಗೂ ಹಿರಿಯರಾದ ಶ್ರೀ ಹೆಚ್.ಎಸ್.ಶೇಷಾದ್ರಿಯವರ ಮಾರ್ಗದರ್ಶನ ಸಹಾಯ ಮಾಡಿದೆ ಎಂದು ಸ್ಮರಿಸಿದರು. ವಿದ್ಯಾರ್ಥೀಗಳು ನನ್ನಂತೆ ತಾವು ಬೆಳೆಯಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೊ.ಕೆ.ಚಂದ್ರಣ್ಣನವರು ಅಧ್ಯಕ್ಷೀಯ ಭಾಷಣದಲ್ಲಿ ನೀವು ವರ್ಷಪೂರ್ತಿ ತರಗತಿಯ ಕೊಠಡಿಯಯೊಳಗೆ ಪ್ರಾಧ್ಯಾಫಕರಿಂದ ಕಲಿತದ್ದು, ಅನಂತರ ನಿಮ್ಮೊಳಗೆ ಇರುವ ಪ್ರತಿಭೆಯನ್ನು ಹೊರಹೊಮ್ಮಿಸುವಂತೆ ಇಂದಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿರುತ್ತೀರ, ಒಳಗಿರುವ ಪ್ರತಿಭೆ ಮತ್ತು ನೀವು ಗಳಿಸಿದ ಜ್ಞಾನರ್ಜನೆಯನ್ನು ನಿಮ್ಮ ಸಂಪತ್ತು ಎಂದು ಭಾವಿಸಿ ಈ ಸಂಪತ್ತನ್ನು ಸದ್ವಿನಿಯೋಗ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿರಿ ಎಂದು ಮತ್ತು ಈ ವರ್ಷದ ಕಾರ್ಯಕ್ರಮ ನಮ್ಮ ಗುರುಗಳಾದ ಕೀರ್ತಿಶೇಷರಾದ ಪ್ರೊ.ಹೆಚ್.ಎಸ್.ಶೇಷಾದ್ರಿರವರು ನಮ್ಮ ಮುಂದೆ ಇಲ್ಲ ಆದರೆ ಅವರ ಆತ್ಮ ಇದನ್ನು ಗಮನಿಸಿ ಸಂತೋಷ ಪಡುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ನಾರಾಯಣಸ್ವಾಮಿರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು ಆಡಳಿತ ಮತ್ತು ಶೈಕ್ಷಣಿಕ ನಿರ್ದೇಶಕರಾದ ಶ್ರೀ ಹೆಚ್.ಎಸ್.ರಾಜುರವರು ಬಹುಮಾನ ವಿತರಣೆ ಮಾಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಕಿರಣ್ ಎಂ.ಪಿ. ಸ್ವಾಗತ ಮಾಡಿದರು. ಶ್ರೀ ಮನೊಹರ್ ವಂದನಾರ್ಪಣೆ ಮಾಡಿದರು.
ಪವನ್ ಕುಮಾರ್ ಮತ್ತು ಮೋನಿಕರವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಶಶಿಕಲಾರವರು ಪ್ರಾರ್ಥನೆ ಸಲ್ಲಿಸಿದರು. ಕ್ರೀಡಾ ನಿರ್ದೇಶಕರಾದ ಡಾ.ಕಿಶೋರ್ ವಿ ಮತ್ತು ಸಾಂಸ್ಕøತಿಕ ಸಮಿತಿ ಶ್ರೀಮತಿ ರಶ್ಮಿ ಎ.ಹೆಚ್. ಮತ್ತು ಶ್ರೀಮತಿ ಪುಷ್ಪರವರು ಬಹುಮಾನ ವಿತರಣೆ ಮಾಡಲು ಸಹಕರಿಸಿದರು. ಡಾ.ಮುದ್ದುರಾಜುರವರು ವಿದ್ಯಾರ್ಥಿಗಳಿಗೆ ಟ್ಯಾಬ್‍ಗಳನ್ನು ವಿತರಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು.

(Visited 5 times, 1 visits today)