ತುಮಕೂರು:


ವ್ಯಕ್ತಿ ಗಳಿಸುವ ರಾಜಕೀಯ ಸರಕಾರಿ ಹುದ್ದೆಯ ಸ್ಥಾನಮಾನಗಳು, ಆತ ಕಲಿತ ಶೈಕ್ಷಣಿಕ ಆರ್ಹತೆಯಿಂದ ಸಿಗುವಂತಹದ್ದೇ ಹೊರತು ಯಾರು ಕೊಡುವಂತಹದ್ದಲ್ಲ ಎಂದು ಆರ್.ಡಿ.ಪಿ.ಆರ್ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಬೂವನಹಳ್ಳಿ ನಾಗರಾಜು ಅಭಿಪ್ರಾಯಪಟ್ಟಿದ್ದಾರೆ.
ನಗರದ ಕುಂಚಟಿಗರ ಭವನದ ಕುಂಚಶ್ರೀ ಪ್ಯಾಲೇಸ್ ನಲ್ಲಿ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘ(ರಿ) ಆಯೋಜಿಸಿದ್ದ ಬಿ.ರಂಗಣ್ಣ ಸ್ಮಾರಕ ಬಾಲಕರ ಮತ್ತು ಶ್ರೀಮತಿ ಲಕ್ಷ್ಮಮ್ಮ ಮಾಲಿಮರಿಯಪ್ಪ ಬಾಲಕಿಯರ ವಿದ್ಯಾರ್ಥಿನಿಲಯಗಳ ಹಾಸ್ಟಲ್ ಡೇ ಮತ್ತು ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡುತಿದ್ದ ಅವರು,ನಮ್ಮ ಜಾತಿ, ಧರ್ಮಗಳ ಆಚೆಗು ನಾವು ಪಡೆಯುವ ಪದವಿಗಳು ಸರಕಾರಿ ಹುದ್ದೆಗಳಲ್ಲಿ ಮೇಲ್ಮುಖವಾಗಿ ತೆಗೆದುಕೊಂಡು ಹೋಗಬಲ್ಲವು ಎಂದರು.
ಶಿರಾ ತಾಲೂಕಿನ ಸಣ್ಣ ಹಳ್ಳಿಯಲ್ಲಿ ಹುಟ್ಟಿ, ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದ ನಾನು ಇಂದು ಸರಕಾರದ ವಿವಿಧ ಹುದ್ದೆಗಳ ಕೆಲಸ ಮಾಡಿ, ನಿವೃತ್ತಿಯ ನಂತರವೂ ಕೆಲವು ಇಲಾಖೆಗಳ ಮೇಲುಸ್ತುವಾರಿ ಅಧಿಕಾರಿಯಾಗಿ ಮುಂದುವರೆದಿದ್ದರೆ,ಬಡತನ, ನೋವು, ಅವಮಾನಗಳ ನಡುವೆ ನಾನು ಕಲಿತ ವಿದ್ಯೆ.ಹಾಗಾಗಿ ಹಳ್ಳಿಗಾಡಿನ ಮಕ್ಕಳಿಗೆ ನೋವು ಮತ್ತು ಅವಮಾನಗಳೇ ಆದರ್ಶವಾಗಬೇಕು.ಅಂಕಗಳ ಜೊತೆಗೆ,ಪ್ರಾಮಾಣಿಕತೆ,ಸಿಕ್ಕ ಅವಕಾಶದಲ್ಲಿ ನಾನು ಹುಟ್ಟಿ ಬೆಳೆದ ಸಮುದಾಯಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಡಾ.ನಾಗರಾಜು ಕಿವಿ ಮಾತು ಹೇಳಿದರು.
ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀಮತಿ ವಿಜಯಲಕ್ಷ್ಮಿ ಮಾತನಾಡಿ,ಪಿಯುಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿಯೇ ಮಹತ್ವದ ಘಟ್ಟ.ಬೇರೆ ಬೇರೆ ಸಾಮಾಜಿಕ ಮತ್ತು ಅರ್ಥಿಕ ಹಿನ್ನೇಲೆಯಿಂದ ಬಂದ ಒಂದೆಡೆ ಸೇರಿರುವ ಹಾಸ್ಟಲ್ ವಿದ್ಯಾರ್ಥಿಗಳು ಕೀಳಿರಿಮೆಯನ್ನು ಬಿಟ್ಟು, ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ.ಸಾಧಿಸುವ ಛಲವಿದ್ದರೆ ಬಡತನ ಎಂದಿಗೂ ಸಾಧನೆಗೆ ಅಡ್ಡಿಬಾರದು.ಒಳ್ಳೆಯ ಅಂಕದ ಜೊತೆಗೆ, ಗುಣ, ನೆಡತೆಯನ್ನು ಮೈಗೂಡಿಸಿಕೊಂಡರೆ ಒಳ್ಳೆಯದು.ಸೋಲಿಗೆ ನೆಪ ಹುಡುವ ಬದಲು ಗೆಲುವಿನ ದಾರಿ ಕಡೆಗೆ ಮುನ್ನುಗುವುದನ್ನು ರೂಢಿಸಿಕೊಂಡರೆ ಹೆಚ್ಚಿನದನ್ನು ಸಾಧಿಸಬಹುದೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ಮಾತನಾಡಿ,ಮನುಷ್ಯನಲ್ಲಿ ಸಾಧಿಸಬೇಕೆಂಬ ಹಠ, ಛಲವಿದ್ದರೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ,ಅಧಿಕಾರ ಸಿಕ್ಕಾಗ ನಾನು, ನನ್ನ ಕುಟುಂಬ ಎಂದು ಚೌಕಟ್ಟು ಹಾಕಿಕೊಳ್ಳದೆ ನನ್ನ ಬೆಳೆವಣಿಗೆಗೆ ಸಹಕಾರಿಯಾದ ಸಮುದಾಯದ ಖುಣ ತೀರಿಸುವ ಪ್ರಯತ್ನ ಮಾಡಿ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಎಲೆರಾಂಪುರದ ಶ್ರೀಕ್ಷೇತ್ರ ಕುಂಚಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀಶ್ರೀ ಹನುಮಂತನಾಥಸ್ವಾಮೀಜಿ ಆಶೀರ್ವಚನ ನೀಡುತ್ತಾ,ಸುಮಾರು 48 ಉಪಪಂಗಡಗಳನ್ನು ಒಳಗೊಂಡಿರುವ ಕುಂಚಿಟಿಗ ಸಮುದಾಯದ ರಾಜ್ಯದಲ್ಲಿ 27 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.ನೆರೆಯ ತೆಮಿಳುನಾಡು, ಕೇರಳ, ಮಹಾರಾಷ್ಟ್ರ,ಆಂಧ್ರ ಪ್ರದೇಶಗಳಲ್ಲಿ ಕುಂಚಟಿಗರಿದ್ದಾರೆ.ಹಿಂದುಳಿದಿರುವ ಈ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಯಿಂದ ತೆಗೆದು ಹಾಕಿ ನಮ್ಮನ್ನು ಅವಕಾಶ ವಂಚಿತರನ್ನಾಗಿ ಮಾಡಿದ್ದಾರೆ.ವಿದ್ಯಾವಂತರಿಗೆ ಎಲ್ಲಡೆಯೂ ಗೌರವ ದೊರೆಯುತ್ತದೆ. ಹಾಗಾಗಿ ಎಲ್ಲರೂ ಉನ್ನತ ವ್ಯಾಸಾಂಗದತ್ತ ಗಮನಹರಿಸಿ,ವಿಶ್ವ ಕುಂಚಟಿಗರ ಮಹಾಸಂಸ್ಥಾನ ಮಠದ ವತಿಯಿಂದ ಒಂದು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಗುರಿ ಇದೆ. ಅದು ಈಡೇರಿದರೆ ನಾವು ಮೆಡಿಕಲ್ ಸೀಟಿಗಾಗಿ ಇನ್ನೊಬ್ಬರ ಬಳಿ ಬೇಡುವುದು ತಪ್ಪಲಿದೆ.ಕುಂಚಶ್ರೀ ಎಂಬುದು ನಮ್ಮ ಐಡೆಂಟಿಟಿ.ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಅಧ್ಯಾತ್ಮಿಕವಾಗಿ ಬೆಳೆಯಲು ಇದನ್ನು ಬಳಸೋಣ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಕುಂಚಟಿಗ ಒಕ್ಕಲಿಗ ವಿದ್ಯಾಭಿವೃದ್ದಿ ಸಂಘದ ಪದಾಧಿಕಾರಿಗಳಾದ ಎಂ.ರಾಜಕುಮಾರ್,ಕೆ.ಮಂಜುನಾಥ್, ವಿನಯಕುಮಾರ್,ಬಸವರಾಜು, ವೆಂಕಟೇಶ್,ದಾಸಪ್ಪ, ಶಿವರಾಜು, ಎಸ್.ಕೆ.ನಾಗರಾಜು, ಹನುಮಂತರಾಯಪ್ಪ, ಶ್ರೀಮತಿ ಕಾಂತರತ್ನ, ಶಶಿಕಲಾ, ಉದಯ್, ಚನ್ನಲಿಂಗಣ್ಣ, ಚೌಡಪ್ಪ, ಸುನಂದ.ಪಿ, ರಾಜಣ್ಣ, ಕೃಷ್ಣಯ್ಯ, ಲಿಂಗಣ್ಣ ಉಪಸ್ಥಿತರಿದ್ದರು.

(Visited 2 times, 1 visits today)