ತುಮಕೂರು


ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಅಗ್ನಿಶಾಮಕ ದಳದ ವತಿಯಿಂದ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಬೆಂಕಿ ನಂದಿಸುವ ಪ್ರಾತ್ಯಕ್ಷತೆಯನ್ನು ವೈದ್ಯಕೀಯ ಕಾಲೇಜಿನ ಕ್ಯಾಂಪಸ್‍ನಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ಧಾರ್ಥ ವೈದ್ಯಕೀಯ ಸಿಬ್ಬಂದಿಗೆ ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡಗಳ ನಿಯಂತ್ರಣದ ಬಗ್ಗೆ ಅನೇಕ ಪ್ರಮುಖ ಮಾಹಿತಿಗಳನ್ನು ಪ್ರಾತ್ಯಕ್ಷತೆ ನಡೆಸುವ ಮೂಲಕ ತಿಳಿಸಿಕೊಡಲಾಯಿತು. ಅಗ್ನಿಶಾಮಕ ದಳವನ್ನು ಹೇಗೆ ಸಂಪರ್ಕಿಸಬೇಕು. ಬೆಂಕಿಯಂತಹ ಅವಘಡಗಳು ನಡೆದ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಬಳಸುವ ವಿವಿಧ ವಿಧಾನಗಳನ್ನು ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಪ್ರಾತ್ಯಕ್ಷತೆಯನ್ನು ಮಾಡುವುದರ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ನಿಶಾಮಕದ ದಳದ ಅಧಿಕಾರಿ ಮಹಾಲಿಂಗಪ್ಪ ಲಂಗೋಟಿ ಮಾತನಾಡಿ, ಆಸ್ಪತ್ರೆಗಳಲ್ಲಿ ಬೆಂಕಿ ಅವಘಡ ಉಂಟಾದಾಗ ಹಲವು ರೀತಿಯ ರಕ್ಷಣಾ ವಿಧಾನಗಳು ಇವೆ. ಆಸ್ಪತ್ರೆಗಳಲ್ಲಿ ಬೆಂಕಿ ಅವಘಡಗಳು ನಡೆದಾಗ ಅಗ್ನಿಶಾಮಕ ನಿಯಂತ್ರಣದ ಉಪಕರಣಗಳನ್ನು ಬಳಸಿಕೊಂಡು ಹೇಗೆ ಬೆಂಕಿ ಅವಘಡಗಳು ನಿಯಂತ್ರಿಸಬಹುದು ಎಂಬುದನ್ನು ಸಿಬ್ಬಂದಿ ವರ್ಗದವರ ಕೈಯಲ್ಲಿಯೇ ಅಣುಕು ಪ್ರದರ್ಶನ ಮಾಡಿಸಿದರು.
1 ನಿಮಿಷ ದಿಂದ 2 ನಿಮಿಷದೊಳಗೆ ಬೆಂಕಿಯನ್ನು ನಂದಿಸುವುದರಿಂದ ದೊಡ್ಡ ಪ್ರಮಾಣದ ಅವಘಡಗಳನ್ನು ತಪ್ಪಿಸಬಹುದು. ಇದರಲ್ಲಿ 4 ರೀತಿಯ ವಿಧಾನಗಳಿವೆ, ಬೆಂಕಿ ಹಾರಿಸಲು ನೀರು ಹಾಕಿದರು ಸಹ ಬೆಂಕಿ ನಂದುತ್ತದೆ. ಬೆಂಕಿ ಹಾರಿಸಲು ನೀರಿನ ಸಾಂದ್ರತೆ ಹೆಚ್ಚು ಬೇಕಾಗುತ್ತದೆ, ಆಯಿಲ್ ಫೈಯರ್ ಹಾರಿಸಲು ನೊರೆಯನ್ನು ಉಪಯೋಗಿಸುತ್ತೆವೆ. ಎಲ್‍ಪಿಜಿ, ಸಿಎನ್‍ಜಿ ಗ್ಯಾಸ್‍ಗಳು ಹಾಗೂ ವಿದ್ಯುತ್ ಅವಘಡ ಸಂದರ್ಭದಲ್ಲಿ ನೀರು ಮತ್ತು ನೊರೆ ಎರಡು ಮಿಶ್ರಿತ ಕಾರ್ಬನ್ ಡೈ ಆಕ್ಸಿಡ್ ಮೂಲಕ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತದೆ, ಕಾರ್ಖಾನೆಗಳಲ್ಲಿ ಬೆಂಕಿ ಅವಘಡ ಉಂಟಾದಾಗ ಮಾತ್ರ ಅಲ್ಲದೇ ಎಲ್ಲಾ ಸಂದರ್ಭಗಳಲ್ಲೂ ಡ್ರೈ ಕೆಮಿಕಲ್ ಪೌಡರ್ ಬಳಕೆ ಮಾಡಬಹುದು. ಅದರಲ್ಲಿಯೂ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡಬಹುದು ಎಂದು ತಿಳಿಸಿದರು.
ಅಗ್ನಿ ದುರಂತ, ತುರ್ತು ಸೇವೆಗಳಿಗೆ ಹೇಗೆ ಸನ್ನದ್ಧರಾಗಬೇಕು ಎಂದು ವೈದ್ಯಕೀಯ ಕಾಲೇಜಿನ ಮತ್ತು ಆಸ್ಪತ್ರೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಪ್ರಾತ್ಯಕ್ಷತೆಯಲ್ಲಿ ತಿಳಿಸಿಕೊಟ್ಟರು.
ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್ ಸಿ ಮಹಾಪಾತ್ರಾ, ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ, ಉಪ ಪ್ರಾಂಶುಪಾಲರು ಡಾ.ಎನ್.ಜಿ.ಪ್ರಭಾಕರ್, ಡಾ.ಮಂಜುನಾಥ್, ಡಾ.ಪವನ್, ಡಾ. ತಮೀಮ್ ಅಹಮದ್, ವೈದ್ಯಕೀಯ ಅಧೀಕ್ಷಕರಾದ ಡಾ.ವೆಂಕಟೇಶ್ ಭಾಗವಹಿಸಿದ್ದರು.

(Visited 1 times, 1 visits today)