ತುಮಕೂರು


ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕ್ರೀಯಾಶೀಲವಾದ ಆರೋಗ್ಯ ಜೀವನ ನಡೆಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಕರೆ ನೀಡಿದರು.
ಇವರು ಇಂದು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರಮೋದಿರವರ 72ನೇ ವರ್ಷದ ಹುಟ್ಟುಹಬ್ಬದ ಸೇವಾ ಪಾಕ್ಷಿಕ ಕಾರ್ಯಕ್ರಮ ಆಯೋಜಿಸಿದ ಸಂಧರ್ಭದಲ್ಲಿ ಪತ್ರಕರ್ತರು, ಪತ್ರಿಕಾ ವಿತರಕರು, ಕೇಬರ್ ಆಪರೇಟರ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾಗರೀಕ ಬಂಧುಗಳು ಮತ್ತು ವೃತ್ತಿಪರರು ತಮ್ಮ ದಿನನಿತ್ಯದಲ್ಲಿ ಆರೋಗ್ಯ, ಸುರಕ್ಷೆಗೆ ಆದ್ಯ ಗಮನ ಹರಿಸಿ ತಮ್ಮ ಕಾಯಕದಲ್ಲಿ ಕೀಯಾಶೀಲರಾಗಿ ಕಾರ್ಯನಿರ್ವಹಿಸಬೇಕೆಂದು ವಿನಂತಿಸಿದರು.
ಈ ಆರೋಗ್ಯ ಶಿಬಿರದಲ್ಲಿ ತುಮಕೂರಿನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋದನಾ ಆಸ್ಪತ್ರೆಯಿಂದ ತಜ್ಞ ವೈದ್ಯರ ತಂಡದಿಂದ ರಕ್ತ ಪರೀಕ್ಷೆ, ಸಿಬಿಸಿ ವಿಥ್ ಇಎಸ್‍ಆರ್, ರಕ್ತ ಗುಂಪಿನ ಪರೀಕ್ಷೆ, ಸೀರಮ್ ಕ್ರಿಯೇಟಿನೈನ್, ಲಿವರ್ ಫಂಕ್ಷನ್ ಪರೀಕ್ಷೆ, ಲಿಪಿಡ್ ಪ್ರೊಫೈಲ್, ಎಇಸಿ, ಹೆಚ್‍ಸಿಎ, ಮೂತ್ರ ಪರೀಕ್ಷೆ, ಕಣ್ಣಿನ ಸ್ಕ್ರೀನಿಂಗ್, ವೈದ್ಯರ ಸಮಾಲೋಚನೆ, ಸೀರಮ್ ಕ್ಯಾಲ್ಸಿಯಂ, ಟೈಫಾಯಿಡ್ ಲಸಿಕೆ, ಇಸಿಜಿ, ಆರ್‍ಸಿಬಿಸಿ ಬ್ಲಡ್ ಸಂಗ್ರಹ, ಜನರಲ್ ಸರ್ಜರಿ, ಜನರಲ್ ಮೆಡಿಸನ್, ಆರ್ಥೋಪೆಟಿಕ್ಸ್, ಆರ್ಥೋಮೊಲಜಿ ಸೌಲಭ್ಯ ಹಾಗೂ ಟಿ.ಹೆಚ್.ಎಸ್. ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ತಂಡದಿಂದ ರಕ್ತ ಪರೀಕ್ಷೆ, ಸಿಬಿಸಿ ವಿಥ್ ಇಎಸ್‍ಆರ್, ರಕ್ತ ಗುಂಪಿನ ಪರೀಕ್ಷೆ, ಜನರಲ್ ಸರ್ಜರಿ, ಆರ್ಥೋಪಿಡಿಯನ್, ಮೂತ್ರ ಪರೀಕ್ಷೆ, ಕಣ್ಣು, ಕಿವಿ, ಮೂಗು, ಗಂಟಲು ಪರೀಕ್ಷೆಗಳು ಮತ್ತು ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಿಂದ ತಜ್ಞ ವೈದ್ಯರು, ಸಿಬ್ಬಂದಿ ಪರೀಕ್ಷಿಸಿ, ಉಚಿತ ಆಯುರ್ವೇದ ಔಷಧಿಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ರೆಡ್ ಸರ್ಕಲ್ ರಕ್ತ ಕೇಂದ್ರದವರು ರಕ್ತದಾನ ಮಾಡುವ ದಾನಿಗಳಿಂದ ರಕ್ತವನ್ನು ಸಂಗ್ರಹಿಸಿದರು.
ಈ ಶಿಬಿರದಲ್ಲಿ ಪತ್ರಕರ್ತರು, ಪತ್ರಿಕಾ ವಿತರಕರು, ಕೇಬರ್ ಆಪರೇಟರ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರೊಂದಿಗೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಭೈರಪ್ಪ, ತುಮಕೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಜಿಲ್ಲಾ ಪತ್ರಕರ್ತ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಚಂದ್ರಮೌಳಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಿ.ಎಲ್.ಸೌಮ್ಯ, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ್ ಜೆ.ಜಗದೀಶ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಯಶಸ್.ಟಿ.ವೈ, ನಗರ ಅಧ್ಯಕ್ಷ ಹನುಮಂತರÁಜು.ಹೆಚ್.ಟಿ, ಕಾರ್ಯದರ್ಶಿ ಕೆ.ಎಸ್.ಕುಮಾರ್, ಯುವಮೋರ್ಚಾ ನಗರ ಅಧ್ಯಕ್ಷ ನಾಗೇಂದ್ರ ಚೆನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಶಿವದೇವ್, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ್
ಡಾ|| ಸುರೇಶ್‍ಬಾಬು, ಜಿಲ್ಲಾ ವಕ್ಫ್ ಬೋರ್ಡ್ ಸಮಿತಿ ಉಪಾಧ್ಯಕ್ಷ ಶಬೀರ್ ಆಹಮ್ಮದ್, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಹಸಂಚಾಲಕಿ ಶಕುಂತಲ ನಟರಾಜ್, ಕಾರ್ಯಾಲಯ ಕಾರ್ಯದರ್ಶಿ ಪ್ರವೀಣ್.ಎಸ್.ಹೊಸಹಳ್ಳಿ, ಫಲಾನುಭವಿ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕ್ ಜಿ.ಎಸ್.ಶ್ರೀಧರ್, ವೃತ್ತಿಪರ ಪ್ರಕೋಷ್ಠದ ಜಿಲ್ಲಾ ಸಂಚಾಲಕ್ ವಿಶ್ವನಾಥ್, ತುಮಕೂರು ನಗರ ಮಾಧ್ಯಮ ಪ್ರಕೋಷ್ಠದ ಸಹಸಂಚಾಲಕ ಮರಿತಿಮ್ಮಯ್ಯ, ಪ್ರಮುಖರಾದ ಕೊಪ್ಪಳ್ ನಾಗರಾಜ್, ವೆಂಕಟೇಶ್, ರಾಮಚಂದ್ರರಾವ್, ಗಂಗೇಶ್, ಪ್ರತಾಪ್ ಮಲ್ಲಣ್ಣ, ಚಂಗಾವಿ ರವಿ, ರವೀಶ್, ದರ್ಶನ್, ಕೇಶವಮೂರ್ತಿ, ಸಿದ್ದಲಿಂಗಪ್ಪ ಮುಂತಾದವರು ಭಾಗವಹಿಸಿದ್ದರು.

(Visited 1 times, 1 visits today)