ತುಮಕೂರು


ಇಂದಿನ ಮಕ್ಕಳು ಗುರು-ಹಿರಿಯರನ್ನು ಗೌರವದಿಂದ ಕಾಣುವಂತಾಗಬೇಕು. ಬದಲಾಗುತ್ತಿರುವ ಜಗತ್ತಿನಲ್ಲಿ ಹಿರಿಯರ ಮಹತ್ವವನ್ನು ನಾವುಗಳು ಅರಿತು ಬದುಕಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸಾ ಅವರು ತಿಳಿಸಿದರು.
ನಗರದ ಬಾಲಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಹಿರಿಯ ನಾಗರಿಕರ ದಿನಾಚರಣೆ-2022’ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬದಲ್ಲಿ ಹಿರಿಯರಿಗೆ ವಯಸ್ಸಾಗುತ್ತಿದ್ದಂತೆ ಅವರಿಗೆ ಗೌರವ ಕಡಿಮೆ ಆಗುತ್ತಿದೆ. ಹಿರಿಯ ನಾಗರಿಕರ ದಿನಾಚರಣೆಯ ಮೂಲ ಉದ್ದೇಶ, ಹಿರಿಯ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸಿ ಒಳ್ಳೆಯ ಜೀವನ ಕಟ್ಟಿಕೊಡುವುದಾಗಿದೆ. ಇಂದಿನ ಸಮಾಜದಲ್ಲಿ ಆರ್ಥಿಕವಾಗಿ ನಾವೆಲ್ಲರೂ ಶ್ರೀಮಂತರಾಗಿದ್ದು, ಕೇವಲ ತೋರಿಕೆಗಾಗಿ ಬದುಕಿ, ನಮ್ಮ ಮಕ್ಕಳನ್ನು ಅನಾಗರೀಕತೆಯ ಕಡೆ ತಳ್ಳುತ್ತಿದ್ದೇವೆ. ಮಕ್ಕಳಿಗೆ ನೀಡುವ ಸಂಸ್ಕಾರದ ಕೊರತೆಯಿಂದ ಜಿಲ್ಲೆಯಲ್ಲಿ ದಿನೇದಿನೇ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.
ಹಿರಿಯ ನಾಗರಿಕರಿಗೆಂದೇ ಕಾನೂನು ಕಾಯ್ದೆಗಳು ತಿದ್ದುಪಡಿಯಾಗಿವೆ. ಹಿರಿಯ ನಾಗರಿಕರು ತಾವು ಜೀವಂತ ಇರುವಾಗಲೇ ತಮ್ಮ ಮಕ್ಕಳಿಗೆ ಆಸ್ತಿಯನ್ನು ಪರಾಭಾರೆ ಮಾಡಿದ ನಂತರ, ಮಕ್ಕಳಿಂದ ಮಾನಸಿಕವಾಗಿ ಕಿರುಕುಳ ಅನುಭವಿಸಿದರೆ, ಅಂತಹ ನಾಗರಿಕರು ಎಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ ಪರಭಾರೆ ಮಾಡಿದ ಆಸ್ತಿಯನ್ನು ಪುನಃ ಅವರಿಂದ ಪಡೆಯಬಹುದಾಗಿದ್ದು, ಜೀವಂತ ಇರುವವರೆಗೆ ತಮ್ಮ ಮಕ್ಕಳಿಂದ ಜೀವನಾಂಶ ಪಡೆದುಕೊಳ್ಳುವ ಅವಕಾಶವಿದೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಜೀವನ ಸುಧಾರಿಸಿಕೊಳ್ಳಿ ಎಂದು ಹಿರಿಯ ನಾಗರೀಕ ಹಕ್ಕುಗಳ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.
ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಅಂಚಿನ ಪಥದತ್ತ ಸಾಗುತ್ತಿರುವುದು ವಿμÁಧನೀಯ ಸಂಗತಿಯಾಗಿದ್ದು, ಇಂದು ಅದೆμÉೂ್ಟೀ ಯುವಕ ಯುವತಿಯರು ಅರಿವಿಲ್ಲದೆ ತಪ್ಪುಗಳನ್ನು ಮಾಡಿ ಸರ್ಕಾರದಿಂದ ನಿರ್ಮಾಣವಾದ ಆಶ್ರಯ ತಾಣಗಳಲ್ಲಿ(ಜ್ಯುವೆನಲ್ ಹೋಂ) ಆಶ್ರಯ ಪಡೆಯುತ್ತಿದ್ದಾರೆ. ಉದ್ಯೋಗ ಅರಸಿ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದು, ಹಳ್ಳಿಗಳಲ್ಲಿ ಯುವಕ ಯುವತಿಯರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳಾಗಿದ್ದು, ಇಲ್ಲಿ ಇಲಾಖಾ ಯೋಜನೆಗಳು ಬಹಳಷ್ಟು ಪರಿಣಾಮ ಕಾರಿಯಾಗಿ ಜರುಗುತ್ತಿವೆ ಎಂದರಲ್ಲದೆ, ತಾವು ಯಾವುದೇ ಜಿಲ್ಲೆಗೆ ಹೋದಾಗ ಅಲ್ಲಿಯ ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ಅವರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇನೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಸ್ವಚ್ಚ್ಛತೆಯ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿ ಡಾ|| ಎಂ.ರಮೇಶ್, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

(Visited 5 times, 1 visits today)