ತುಮಕೂರು


ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 153ನೇ ಜನ್ಮ ಜಯಂತಿ ಅಂಗವಾಗಿ ತುಮಕೂರಿನ 15ನೇ ವಾರ್ಡಿನ ಕಾರ್ಪೋರೇಟರ್ ಗಿರಿಜಾ ಧನಿಯಕುಮಾರ್ ಅವರ ನೇತೃತ್ವದಲ್ಲಿ ರೌಂಡ್ ಟೇಬಲ್ ಟಿ.ಆರ್.ಟಿ 173 ಮತ್ತು ಜೆಡಿ ಸ್ಕೂಲ್ ಅಫ್ ಆಟ್ರ್ಸ್ ಇವರ ಸಹಕಾರದೊಂದಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಮಹಾತ್ಮಗಾಂಧಿ ಸ್ಮಾರಕದ ಬಳಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯನ್ನು ತುಮಕೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಪ್ರಭಾವತಿ ಅವರು, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮೇಯರ್ ಪ್ರಭಾವತಿ ಸುಧೀಶ್ವರ್,ಭಾರತದ ಸ್ವಾತಂತ್ರ ಹೋರಾಟದಲ್ಲಿ ಗಾಂಧೀಜಿ ಯವರ ಪ್ರವೇಶ ಒಂದು ಸುವರ್ಣ ಯುಗವಾಗಿದೆ.ಗಾಂಧೀಜಿ ಅವರ ಪ್ರವೇಶಕ್ಕು ಮುನ್ನ ಕುಂಟುತ್ತಾ ಸಾಗಿದ್ದ ಸ್ವಾತಂತ್ರ ಹೋರಾಟ ವೇಗ ಪಡೆದುಕೊಂಡಿತ್ತು.ಇದಕ್ಕೆ ಮೂಲ ಕಾರಣವಾದವುಗಳು,ಅವರ ನಡೆ,ನುಡಿ ಹಾಗೂ ಅಹಿಂಸೆ, ಸತ್ಯಾಗ್ರಹವೆಂಬ ಆಸ್ತ್ರಗಳು.ಹಲವಾರು ಹಂತದ ಹೋರಾಟಗಳ ಮೂಲಕ ಇಡೀ ದೇಶವೇ ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಗಾಂಧಿಜೀಯವರ ಜೀವನವೇ ಒಂದು ಸಂದೇಶವಾಗಿದೆ ಎಂದರು.
15ನೇ ವಾರ್ಡಿನ ಕಾರ್ಪೋರೇಟರ್ ಗಿರಿಜಾ ಧನಿಯಕುಮಾರ್ ಮಾತನಾಡಿ,ಇಂಗ್ಲೆಡ್ ನಲ್ಲಿ ಬ್ಯಾರಿಸ್ಟರ್ ಆಗಿದ್ದ ಮಹಾತ್ಮಗಾಂಧಿಜೀ ಅವರು, ಸ್ವದೇಶಕ್ಕೆ ಮರಳಿ ಸ್ವಾತಂತ್ರ ಚಳವಳಿಯ ನೇತೃತ್ವ ವಹಿಸಿಕೊಂಡ ಪರಿಣಾಮ, ಅಬಾಲ ವೃದ್ದರೆಲ್ಲರೂ ಈ ಹೋರಾಟಕ್ಕೆ ದುಮುಕುವಂತಾಯಿತು ಸುಮಾರು 50ಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು.
ರೌಂಡ್ ಟೇಬಲ್ ಟಿ.ಆರ್.ಟಿ 173ರ ಅಧ್ಯಕ್ಷ ಅಕಾಶ್ ಮಾತನಾಡಿದರು.
ಈ ವೇಳೆ ಉದ್ಯಮಿ ಜಿ.ವಿ.ರಾಮಮೂರ್ತಿ, ಉಪಮೇಯರ್ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ನಯಾಜ್, ನರಸಿಂಹರಾಜು,ಮನು, ರೂಪಶ್ರೀಶೆಟ್ಟಾಳಯ್ಯ,ಧರಣೇಂದ್ರಕುಮಾರ್,ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕ,ಸಿದ್ದಗಂಗಾ ಡಿಪ್ಲಮೋ ಕಾಲೇಜು ಪ್ರಾಂಶುಪಾಲರಾದ ಸುನಿಲಕುಮಾರ್,ಭಾರತೀಶ್,ಕನ್ನಡ ಸೇನೆಯ ಧನಿಯಕುಮಾರ್,ಜೆಡಿ ಸ್ಕೂಲ್ ಅಫ್ ಆರ್ಟ್‍ನ ಸಿಸಿಲಿಯ ಮತ್ತಿತರರು ಉಪಸ್ಥಿತರಿದ್ದರು.

(Visited 3 times, 1 visits today)