ತುಮಕೂರು


ರೋಟರಿ ತುಮಕೂರು ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವೈದ್ಯರು, ಕ್ರೀಡಾಪಟುಗಳು ಹಾಗೂ ಶಿಕ್ಷಣ ತಜ್ಞರು ಆದ ಡಾ.ಜಯರಾಮರಾವ್ ಹಾಗೂ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ಬಿ.ಹೆಚ್.ರಸ್ತೆಯ ಸಿದ್ದಗಂಗಾ ಶಾಲಾ ಆವರಣದಲ್ಲಿರುವ ರೋಟರಿ ಬಾಲಭವನದಲ್ಲಿ ನಡೆದ ದಸರಾ ಸಂಭ್ರಮ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ 95 ವರ್ಷ ವಯೋಮಾನದ ಡಾ.ಜಯರಾಮರಾವ್ ಅವರನ್ನು ಸನ್ಮಾನಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ ಅವರು, ಸೇವೆಯನ್ನೇ ತತ್ವವಾಗಿಸಿಕೊಂಡಿರುವ ರೋಟರಿ ಸಂಸ್ಥೆ, ಸಮಾಜಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ,ಅವರನ್ನು ಸನ್ಮಾನಿಸುವ ಮೂಲಕ ಇತರರು ಅವರ ದಾರಿಯಲ್ಲಿ ನಡೆಯುವಂತೆ ಪ್ರೇರೆಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ವೈದ್ಯರಾಗಿ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ.ಜಯರಾಮರಾವ್,ಕ್ರೀಡಾಪಟುಗಳಾಗಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ.ಹಾಗೆಯೇ ವಿದ್ಯಾನೀಕೇತನ ಎಂಬ ಶಿಕ್ಷಣ ಸಂಸ್ಥೆಯನ್ನು ತೆರೆದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ,ಅವರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ. ನೇರ ಮತ್ತು ನಿಷ್ಠೂರ ನುಡಿಯ ವ್ಯಕ್ತಿತ್ವ ಹೊಂದಿರುವ ಶ್ರೀಯುತರು ಎಂದಿಗೂ ಜೀವನದಲ್ಲಾಗಲಿ,ವೃತ್ತಿಯಲ್ಲಾಗಲಿ ರಾಜೀ ಮಾಡಿಕೊಂಡ ವರಲ್ಲ.ಇಂತಹ ಮೇರು ವ್ಯಕ್ತಿತ್ವವನ್ನು ರೋಟರಿ ಸಂಸ್ಥೆ ಸನ್ಮಾನಿಸುವ ಮೂಲಕ ಸಾರ್ಥಕತೆ ಮೆರೆದಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕಿರಿಯರಲ್ಲಿ ಕಿರಿಯರಾಗಿ,ಎಲ್ಲರೊಂದಿಗೆ ಬೇರತು ಸ್ನೇಹಮಯಿ ಜೀವನ ನಡೆಸುತ್ತಿರುವ ಡಾ.ಜಯರಾಮರಾವ್ ವೈದ್ಯರಾಗಿ,ಕ್ರೀಡಾಪಟುವಾಗಿ,ಕ್ರೀಡಾಭಿಮಾನಿಯಾಗಿ,ಶಿಕ್ಷಣ ತಜ್ಞರಾಗಿ ಅದ್ವಿತೀಯ ಸಾಧನೆ ಮಾಡಿದ್ದಾರೆ.ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ಸದಸ್ಯರಾಗಿ ಕ್ರಿಕೆಟ್ ಕ್ಷೇತ್ರಕ್ಕೆ ನೂರಾರು ಕ್ರೀಡಾಪಟು ಗಳನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಇಂತಹ ಸಾಧಕರನ್ನು ಗುರುತಿಸಿ ರೋಟರಿ ಸಂಸ್ಥೆ ಅಭಿನಂದಿಸುತ್ತಿ ರುವುದು ಸಂತೋಷದ ವಿಚಾರವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜಯರಾಮರಾವ್,ಶಿಕ್ಷಣದಲ್ಲಿ ಕ್ರೀಡೆ ಅತಿಮುಖ್ಯವಾದ ಸ್ಥಾನವನ್ನು ಪಡೆಯುತ್ತಿದೆ. ಕ್ರೀಡೆಯಿಂದ ವಿದ್ಯಾರ್ಥಿ ಶಿಸ್ತನ್ನು ಕಲಿಯುತ್ತಾನೆ.ಇದು ಅವರ ಜೀವನವನ್ನು ರೂಪಿಸುತ್ತಿದೆ.ನಾನು ಕೂಡು ಶಿಸ್ತಿನ ವಿದ್ಯಾರ್ಥಿ.ಇದಕ್ಕೆ ಪ್ರೆರೇಪಣೆಯೇ ನಮ್ಮ ನಡುವೆ ಇದ್ದ ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದ ಡಾ.ಶ್ರೀಶಿವಕು ಮಾರಸ್ವಾಮೀಜಿಗಳು, ನನ್ನ ವೃತ್ತಿ, ಪ್ರವೃತ್ತಿ, ಉದ್ಯೋಗ ಎಲ್ಲದರಲ್ಲಿಯೂ ಸಿದ್ದಗಂಗಾ ಶ್ರೀಗಳ ನೆರಳು ಇದೆ.ಇಂದು ಮಕ್ಕಳು ಅಂಕದ ಹಿಂದೆ ಬಿದ್ದು, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ತಂದೆ, ತಾಯಿ, ನೆರೆ,ಹೊರೆಯವರ ಒತ್ತಡಕ್ಕೆ ಸಿಲುಕಿ ಕ್ಲಾಸ್, ಟೂಷನ್ ಅಂತ ಸುತ್ತಿ, ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮಕ್ಕಳನ್ನು ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಿ, ಆತನಲ್ಲಿ ಹೊಸ ಹುರುಪು ನೀಡುತ್ತದೆ.ದೇಹಕ್ಕೆ ವಯಸ್ಸಾಗುತ್ತದೆಯೋ ಹೊರತು ಮನಸ್ಸಿಗಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಸಂದ್ರ ಶಿವಣ್ಣ, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಕ್ಲಬ್ ಸರ್ವಿಸ್ ನಿರ್ದೇಶಕ ಉಮಾಶಂಕರ್ ಕೆ., ಕಾರ್ಯದರ್ಶಿ ಉಮೇಶ್.ಎನ್.ಸಿ, ಹಾಗೂ ರೋಟರಿ ಮಾಜಿ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.

(Visited 1 times, 1 visits today)