ತುಮಕೂರು :

      ನಗರದ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ.ಶ್ರೀಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಕರ್ನಾಟಕ ಫಿಟ್‍ನೆಸ್ ಅಂಡ್ ಬಾಡಿ ಬಿಲ್ಡರ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ ದೇಹದಾಢ್ಯ ಸ್ಪರ್ಧೆ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮಗಳು ಜರುಗಿದವು.

     ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 150ಕ್ಕೂ ಹೆಚ್ಚು ದೇಹದಾಢ್ಯಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆರು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯುವ ದೇಹದಾಢ್ಯ ಪಟುವನ್ನು ಮುಂದಿನ ತಿಂಗಳು ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ದೊರೆಯಲಿದೆ.

     ಪ್ರಮುಖವಾಗಿ ಮೆನ್ ಫಿಸಿಕ್,ಹುಮೆನ್ ಫಿಸಿಕ್,ಕರ್ನಾಟಕ ಉದಯ,ಕರ್ನಾಟಕ ಕುಮಾರ್,ಕರ್ನಾಟಕ ಕಿಶೋರ್, ಕರ್ನಾಟಕ ಕೇಸರಿ ವಿಭಾಗಗಳಲ್ಲಿ ತಲಾ ನಾಲ್ಕು ಸುತ್ತುಗಳಿದ್ದು,ಪ್ರತಿ ಸುತ್ತಿನಲ್ಲಿ ಮೊದಲು ಐದು ಸ್ಥಾನ ಪಡೆಯುವ ಕ್ರೀಡಾಪಟುಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ದೇಹಾದಾಢ್ಯ ಪಟುಗಳಿಗೆ ಕರ್ನಾಟಕ ಉದಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

      ತುಮಕೂರಿನ ದೇಹದಾಢ್ಯ ಪಟುಗಳಾದ ಜಿಮ್ ಜೆಪಿ,ಕೆ.ಉಮೇಶ್,ರಾಜೇಶ್ ಅವರುಗಳು ಆಯೋಜಸಿದ್ದ ಈ ಸ್ಪರ್ಧೆಯಲ್ಲ ಸ್ಥಳೀಯ ಕ್ರೀಡಾಪಟುಗಳ ಜೊತೆಗೆ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಇನ್ನಿತರ ಕಡೆಗಳಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ಜನರಲ್ಲಿ ಬೆಂಗಳೂರಿನ ಬಹುತೇಕ ಕ್ರೀಡಾಪಟುಗಳು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

      ಸ್ಪರ್ಧೆಯಲ್ಲಿ ವಿಜೇತರಿಗೆ ಆಡಿಟರ್ ಆರ್.ಸಿ.ಆಂಜನಪ್ಪ,ತುಮಕೂರು ನಗರಪಾಲಿಕೆ ಆಯುಕ್ತರಾದ ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ,ತುಮಕೂರು ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷರಾದ ಎನ್.ಗೋವಿಂದರಾಜು, ಮುಖಂಡರಾದ ಡಿ.ಎಂ.ಸತೀಶ್, ಮಲ್ಲಸಂದ್ರ ಶಿವಣ್ಣ,ಟಿ.ಆರ್.ಸದಾಶಿವಯ್ಯ, ಹೆಚ್.ಮಹೇಶ್ ಕೆ.ಯು.ಡಬ್ಲ್ಯಜೆ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರುಗಳು ಬಹುಮಾನ ವಿತರಿಸಿದರು.

      ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಪಿಟ್‍ನೆಸ್ ಎಂಬುದು ದೇಹದ ಆರೋಗ್ಯಕ್ಕೆ ಪೂರಕವಾದ ವಿಷಯವಾಗಿದೆ. ಮನಸ್ಸು ಮತ್ತು ದೇಹದ ಆರೋಗ್ಯ ಇದರಲ್ಲಿ ಅಡಗಿದೆ.ದೇಹದಾಢ್ಯ ಸ್ಪರ್ಧೆಯ ಹಿಂದೆ ಕ್ರೀಡಾಪಟುಗಳ ನಿರಂತರ ಪರಿಶ್ರಮವಿರುತ್ತದೆ.ನಮ್ಮ ಪೊಲೀಸ್ ಅಕಾಡೆಮಿಯಲ್ಲಿಯೂ ಪ್ರತಿವರ್ಷ ಇಂತಹ ಸ್ಪರ್ಧೆಗಳು ನಡೆಯುತ್ತವೆ.ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

     ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು ಮಾತನಾಡಿ, ದೇಹದಾಢ್ಯ ಕ್ರೀಡೆಯ ಹಿಂದೆ ನಿರಂತರ ಪರಿಶ್ರಮವಿರುತ್ತದೆ. ದಿನ ಕನಿಷ್ಠ 5-6 ಗಂಟೆ ಕಾಲ,ನಿರಂತರ 4-5 ವರ್ಷ ದೇಹದಂಡಿಸಿದರೆ ಮಾತ್ರ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಲು ಸಾಧ್ಯ. ಇಷ್ಟು ಪರಿಶ್ರಮ ಪಡುವ ಕ್ರೀಡಾಪಟುಗಳಿಗೆ ಸರಕಾರದಿಂದ ಪ್ರೋತ್ಸಾಹ ಸಿಗುವಂತಾಗಬೇಕು.ಪ್ರತಿಭಾವಂತರನ್ನು ದತ್ತು ಪಡೆದು, ಅವರ ಮುಂದಿನ ಕ್ರೀಡೆಗೆ ಸಹಕರಿಸುವ ಕೆಲಸ ಆಗಬೇಕೆಂದರು.

(Visited 38 times, 1 visits today)