ತುರುವೇಕೆರೆ


ಸರ್ಕಾರ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬೊಮ್ಮೇನಹಳ್ಳಿ ನಂದೀಶ್ ಆಗ್ರÀ್ರಹಿಸಿದರು.
ಇತ್ತೀಚಿಗೆ ಕೊರಟಗೆರೆ ತಾಲ್ಲೂಕಿನ ಆಸ್ಪತ್ರೆಗೆ ಅಪಘಾತದ ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತರನ್ನು ನಿಂದಿಸಿ ಸಿಬ್ಬಂದಿಗಳೊಡಗೂಡಿ ಹಲ್ಲೆಮಾಡಿರುವ ಕ್ರಮವನ್ನು ಖಂಡಿಸಿ ಮಾತನಾಡಿದದರು.
ಸರ್ಕಾರಗಳು ಗ್ರಾಮೀಣ ಭಾಗದ ಪತರಕರ್ತರುಗಳಿಗೆ ಸವಲತ್ತುಗಳನ್ನು ನೀಡುತ್ತೇವೆಂದು ಹೇಳುತ್ತಲೇ ಬಂದಿವೆ
ಆದರೆ ಯಾವೊಂದು ಸವಲತ್ತುಗಳು ಇಲ್ಲಿಯವರೆಗೂ ಕಾಗದ ಪತ್ರದಲ್ಲೇ ಉಳಿದಿರುವುದು ಒಂದು ದುರಂತವಾದರೆ ಮತ್ತೊಂದೆಡೆ ಗ್ರಾಮೀಣ ಭಾಗದ ಪತ್ರಕರ್ತರು ಸುದ್ದಿ ಮಾಡಲು ಹೆದರುವ ಹಾಗೂ ಭಯದಿಂದ ಬದುಕುವ ಪರಿಸ್ಥಿತಿ ಉಂಟಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಪತ್ರಕರ್ತರ ರಕ್ಷಣೆಗೆ ಮುಂದಾಗಬೇಕು, ಕಟ್ಟು ನಿಟ್ಟಿನ ಕಾನೂನುಗಳನ್ನು ತರುವ ಮೂಲಕ ಪತ್ರಕರ್ತರ ರಕ್ಷಣೆ ಮಾಡಬೇಕಿದೆ ಹಾಗೂ ಸುದ್ದಿ ನಿರತ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವ ಕೊರಟಗೆರೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ನವೀನ್ ಹಾಗೂ ತಪಿತಸ್ಥರ ಪರವಾಗಿ ನಿಂತು ಪತ್ರಕರ್ತರ ವಿರುದ್ದ ದೂರು ದಾಖಲಿಸಿರುವ ಪಿ ಎಸ್.ಐ.ನಾಗರಾಜು ಇವರುಗಳನ್ನು ಸೇವೆಯಿಂದ ಅಮಾನತ್ತು ಮಾಡಿ ಭಂದಿಸುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಗ್ರೇಡ್-2ತಹಶೀಲ್ದಾರ್ ಸುನಿಲ್ ಕುಮಾರ್ ಮುಖೇನ ಕಾರ್ಯನಿರತ ಪತ್ರಕರ್ತರ ಸಂಘ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಹರೀಶ್,
ಪದಾದಿಕಾರಿಗಳಾದ ಎಂ.ಬಿ.ಧರಣೀಶ್, ಸ್ವಾಮಿ ಮಾಯಸಂದ್ರ . ನಾಗಭೂಷಣ್ , ಗಿರೀಶ್ ಕೆ ಭಟ್ ಇದ್ದರು.

(Visited 1 times, 1 visits today)