ತೋವಿನಕೆರೆ


ತೋವಿನಕೆರೆ ಇಡೀ ಗ್ರಾಮವೇ ಸಂಭ್ರಮದಲ್ಲಿ ಮುಳುಗಿತ್ತು, ಗ್ರಾಮದ ದೇವರುಗಳೆಲ್ಲಾ ಬೆಳ್ಳಿ ರಥದಲ್ಲಿ ಸಾಲು ಸಾಲಾಗಿ ಮೆರವಣಿಗೆ ಹೊರಟಿದ್ದವು ನೋಡಲು ಅದೆಷ್ಟು ಸಂಭ್ರಮ ಸಂತಸ ನಮ್ಮೂರ ಹಬ್ಬದಲ್ಲಿ ಸಾಲುಗಟ್ಟಿನಿಂತ ದೇವರುಗಳ ಮೆರವಣಿಗೆಯ ಸಾಲು, ಕುಣಿದು ಕುಪ್ಪಳಿಸಿದ ಯುವ ಪೀಳಿಗೆ, ಜಾನಪದ ಕಲಾ ತಂಡಗಳ ವೈಭವ, ಸಾಗರದಂತೆ ಹರಿದು ಬಂದ ಭಕ್ತ ವೃಂದ ಇಂತಹದೊಂದು ದೃಶ್ಯ ಕಂಡು ಬಂದಿದ್ದು ಕೊರಟಗೆರೆ ತಾಲೂಕಿನ ತೋವಿನಕೆರೆಯ ನಮ್ಮೂರ ಹಬ್ಬ ಕಾರ್ಯಕ್ರಮದಲ್ಲಿ.
ತೋವಿನಕೆರೆಯ ಸನ್ಮಿತ್ರ ಸಹಕಾರ ವೇದಿಕೆಯ ದಶಮಾನೋತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಹತ್ತು ದೇವರುಗಳನ್ನು ತೋವಿನಕೆರೆ ಗ್ರಾಮದ ರಾಜಬೀದಿಯಲ್ಲಿ ಜಾನಪದ ಕಲಾ ತಂಡಗಳಾದ ನಂದಿಧ್ವಜ, ವೀರಗಾಸೆ, ಡೊಳ್ಳು ಕುಣಿತ, ಕೀಲುಗೊಂಬೆ ಕುಣಿತಗಳ ಮೂಲಕ ಮೆರವಣಿಗೆ ನಡೆಸಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹತ್ತು ದೇವರುಗಳನ್ನ ಒಂದೆಡೆ ನೋಡುವ ಸೌಭಾಗ್ಯ ಇಂದು ತೋವಿನಕೆರೆ ಜನತೆಗೆ ಒದಗಿ ಬಂದಿದ್ದು ಗ್ರಾಮೀಣ ಭಾಗದ ಯುವಕರು ಧಾರ್ಮಿಕ ಕಾರ್ಯಗಳತ್ತ ಮುಖಮಾಡಿರುವುದು ನಿಜಕ್ಕೂ ಸಂತಸದ ವಿಚಾರ ಇಂದಿನ ದಿನಗಳಲ್ಲಿ ಧಾರ್ಮಿಕ ಕಾರ್ಯಗಳನ್ನ ನಡೆಸುವವರು ಕಡಿಮೆಯಾಗುತ್ತಿದ್ದಾರೆ ಈ ನಡುವೆ ಈ ನಮ್ಮೂರ ಹಬ್ಬ ನಿಜಕ್ಕೂ ವಿಭಿನ್ನವಾಗಿದೆ ಎಂದರು.
ಎಲೆರಾಂಪುರ ಕುಂಚಿಟಿಗ ಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಹತ್ತು ದಿಕ್ಕುಗಳನ್ನು ಹೋಲುವಂತೆ ಹತ್ತು ದೇವರುಗಳನ್ನು ತೋವಿನಕೆರೆ ಜನತೆ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದಾರೆ ಆ ಎಲ್ಲಾ ದೇವರುಗಳ ಈ ಭಾರಿ ಉತ್ತಮ ಮಳೆ ನೀಡಿದ್ದು ಇನ್ನೂ ಐದು ವರ್ಷಗಳ ಕಾಲ ನೀರಿನ ಅಭಾವ ತಪ್ಪಿಸಿದ್ದಾರೆ. ಹಾಗೂ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸನ್ಮಿತ್ರ ಸಹಕಾರ ವೇದಿಕೆಯ ಎಲ್ಲಾ ಕಾರ್ಯಗಳಿಗೆ ನಮ್ಮಗಳ ಸಹಕಾರ ಇದ್ದೇ ಇರುತ್ತೇ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೊರಟಗೆರೆ ಕ್ಷೇತ್ರದ ಜನತೆ ನನ್ನನ್ನು ಎರಡು ಭಾರೀ ಆಯ್ಕೆ ಮಾಡಿದ್ದಾರೆ. ಒಳ್ಳೆಯ ಸಮಯದಲ್ಲಿ ಪಲ್ಟಿ ಹೊಡೆಸಿದ್ದಾರೆ. ನನ್ನ ಕೈಲಾದ ಕೆಲಸ ಮಾಡಿದ್ದೇನೆ ಎನ್ನುವ ಆತ್ಮತೃಪ್ತಿ ನನಗಿದೆ ಎಂದು ತಿಳಿಸಿದರು.
ಸನ್ಮಿತ್ರ ಸಹಕಾರ ವೇದಿಕೆಯ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಹಾಗೂ ಗ್ರಾಮದ ಶ್ರೇಯೋಬಿವೃದ್ಧಿಗೆ ಶ್ರಮಿಸುತ್ತಿರುವುದು ಸಂತೋಷದ ವಿಷಯ ಮುಂದಿನ ದಿನಗಳಲ್ಲಿ ಸನ್ಮಿತ್ರ ಸಹಕಾರ ವೇದಿಕೆ ಮತ್ತಷ್ಟು ಉತ್ತಮ ಕಾರ್ಯಗಳನ್ನ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಮಾಜಿ ಜಿಪಂ ಸದಸ್ಯ ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಸನ್ಮಿತ್ರ ವೇದಿಕೆಯ ಎಲ್ಲಾ ಪದಾಧಿಕಾರಿಗಳು, ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

(Visited 1 times, 1 visits today)