ಪಾವಗಡ


ತಾಲೂಕಿನ ಮಡಿವಾಳ ಸಮುದಾಯಕ್ಕೆ ಮೂರು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಈ ಭಾರಿ ಅಧ್ಯಕ್ಷ ಸ್ಥಾನಕ್ಕೆ ತಿಪ್ಪೇಸ್ವಾಮಿ.ಕಾರ್ಯದರ್ಶಿಯಾಗಿ ಮುರಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ತಿಪ್ಪೇಸ್ವಾಮಿ ಮಾಧ್ಯಮರ ಬಳಿ ಮಾತನಾಡಿ ನನ್ನ ಸಮುದಾಯದವರು ಇಚ್ಛೆಯಂತೆ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಮೂಲಕ ನನ್ನ ಸಮುದಾಯಕ್ಕೆ ಅಭಿವೃದ್ಧಿ ಹಂತಕ್ಕೆ ಕೊಂಡೋಗುವ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತೇನೆ ಹಾಗೂ ಸಮುದಾಯದ ಮಕ್ಕಳ ಅಭಿವೃದ್ಧಿಗೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹೊತ್ತು ನೀಡುವ ಕೆಲಸ ಮಾಡುತ್ತೇನೆ.
ಬಹಳ ವರ್ಷದ ಬೇಡಿಕೆಯಂತೆ ಮಕ್ಕಳ ವಸತಿ ನಿಲಯ ಹಾಗೂ ಮಡಿವಾಳ ಭವನ ನಿರ್ಮಾಣ ಮಾಡುವ ಮೂಲಕ ಸಮುದಾಯಕ್ಕೆ ದುಡಿಯುತ್ತೇನೆ ಎಂದರು.
ನಂತರ ಮಾತನಾಡಿ ಕಾರ್ಯದರ್ಶಿ ಮುರಳಿ ನಮ್ಮ ಸಮುದಾಯದಲ್ಲಿ ಉತ್ತಮ ವ್ಯಕ್ತಿತ್ವವುಳ್ಳಂತಹ ವ್ಯಕ್ತಿ ತಿಪ್ಪೆಸ್ವಾಮಿಯವರಿಗೆ ಅಧ್ಯಕ್ಷ ಮಾಡಿರೋದು ನನಗೆ ಸಂತೋಷದ ವಿಷಯ ನಾವೆಲ್ಲರೂ ಸಮುದಾಯದ ಹೆಚ್ಚಿನ ಹೊತ್ತು ನೀಡಿ ಅಭಿವೃದ್ಧಿ ಹಂತಕ್ಕೆ ಕೊಂಡಯುವ ಕೆಲಸ ಮಾಡುತ್ತೇವೆ ಎಂಬುದಾಗಿ ಈ ವೇಳೆ ತಿಳಿಸಿದರು ಈಗಾಗಲೇ ತಾಲೂಕಿನಲ್ಲಿ ಮಡಿವಾಳದ ಸುಮಾರು 13 ಸಾವಿರ ಜನಸಂಖ್ಯೆ ಹೊಂದಿದ್ದು ಈಗಾಗಲೇ ಸ್ಥಳೀಯ ಶಾಸಕರಾದಂತ ವೆಂಕಟಪ್ಪನವರು ಲಕ್ಷ ಹಾಗೂ ಸಂಸದರು ಸಹ ಅವರ ಅನುದಾನವನ್ನು ನೀಡಿದ್ದಾರೆ ಮುಂದಿನ ದಿನಗಳಲ್ಲಿ ಉತ್ತಮ ಅಭಿವೃದ್ಧಿ ಪಡಿಸುವುದೇ ನಮ್ಮೆಲ್ಲರ ಒಂದು ಉದ್ದೇಶವಾಗಿದೆ.
ಈ ವೇಳೆ ಸಮುದಾಯದ ಯುವ ಮುಖಂಡ ಹಾಗೂ ನಿರ್ದೆಶಕ ಕಿರಣ್.ಮಂಜುನಾಥ್.ಉಪಾಧ್ಯಕ್ಷ ನಾಗರಾಜ್.ಗೌರವ ಅಧ್ಯಕ್ಷ ತಿಪ್ಪೆಲಿಂಗಪ್ಪ.ಗೋವಿಂದಪ್ಪ. ಸುಬ್ರಹ್ಮಣ್ಯಂ. ಸತ್ಯನಾರಾಯಣ.ಪಿಟಿ ಲಕ್ಮೀನರಸಿಂಹಪ್ಪ.ರಂಜಿತ್. ನಾಗೇಶ್.ನಾಗರಾಜ್. ವಿಶ್ವನಾಥ್.ರಾಮೂ.ಪರುಶುರಾಮ್ ಇದ್ದರು.

(Visited 7 times, 1 visits today)