ತುಮಕೂರು


ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ. ಶ್ರೀ ವೀರಭದ್ರ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆ. ಹರಳೂರು.ತುಮಕೂರು ತಾಲ್ಲೂಕು.ತುಮಕೂರು ಗ್ರಾಮಾಂತರ ಜಿಲ್ಲೆ. ಈ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಎಸ್ ಗುರುಮೂರ್ತಿ ರವರು ಮುಖ್ಯ ಶಿಕ್ಷಕರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ವಿಜಯಕುಮಾರಿ ಪಾಲನೇತ್ರಯ್ಯ ರವರು. ಗ್ರಾಮ ಪಂಚಾಯಿತಿ ಸದಸ್ಯರು. ಹರಳೂರು. ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ವಸ್ತ್ರ ವಿತರಣೆ ಮಾಡಿ . ವಿದ್ಯಾರ್ಥಿಗಳು ಜೀವನದಲ್ಲಿ ನಯ, ವಿನಯ, ಸಂಸ್ಕಾರಗಳನ್ನು ರೂಢಿಸಿಕೊಂಡು ದೇಶದ ಒಳ್ಳೆಯ ನಾಗರೀಕ ಪ್ರಜೆಗಳಾಗಿ, ಉತ್ತಮ ಅಧಿಕಾರಿಗಳಾಗಿ ಜನ ಸೇವೆ ಮಾಡಬೇಕು.ಶಾಲೆಗೆ.ತಂದೆ ತಾಯಿ ಯವರಿಗೆ ಕೀರ್ತಿ ತರಬೇಕೆಂದು ಕಿವಿ ಮಾತು ಹೇಳಿದರು.
ಶಾಲೆಯ ವಿದ್ಯಾರ್ಥಿಗಳು ಮಾಡಿದ್ದ ವಿಜ್ಞಾನ ವಸ್ತು ಪ್ರದರ್ಶನದ ಹಲವಾರು ವಸ್ತುಗಳ ಬಗ್ಗೆ ಮಾಹಿತಿ ಪಡೆದರು.ವಿದ್ಯಾರ್ಥಿಗಳು ಬಹಳ ಶ್ರಮ ವಹಿಸಿ ಹಲವಾರು ವಸ್ತುಗಳನ್ನು ತಯಾರಿಸಿ ತಂದಿದ್ದರು.
8 ನೇ ತರಗತಿಯ ಪರಮೇಶ್ ತಯಾರಿಸಿದ್ದು ರಾಕೇಟ್ ಎಲ್ಲರೂ ಗಮನ ಸೆಳೆಯಿತು. ಸೌರಮಂಡಲ. ಮೆಣಸಿನ ಕಾಯಿ ಪುಡಿ ಮಾಡುವ ಸಾಧನ.ಕಳೆ ಕೀಳುವ ಸಲಕರಣೆ. ಕಾಡಿನ ಸಂರಕ್ಷಣೆಯ ಮಾದರಿ. ಜಲಸಂರಕ್ಷಣೆ ಮಾದರಿ. ಜೀವ ಸತ್ವ ಹೀಗೆ ಹತ್ತು ಹಲವಾರು ಒಳ್ಳೆಯ ಮಾದರಿಗಳನ್ನು ತಯಾರಿಸಿ ತಂದಿದ್ದರು.ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಗೊಂಡಿತು.ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನದ ತೀರ್ಪು ಗಾರರಾಗಿ ಡಾ ,” ರವಿಕುಮಾರ್ ಅವರು ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಶಿವಕುಮಾರ ನಿರೂಪಣೆ ಮಾಡಿದರು.ಸಿದ್ದವೀರಪ್ಪನವರು ಸ್ವಾಗತಿಸಿದರು.ಜಿ.ಜೆ.ರಮೇಶ್ ವಂದಿಸಿದರು.ಜಯಣ್ಣನವರು.ಶಿವಶಂಕರ್ ರವರು.ಸುನಿಲ್ ಕುಮಾರ್. ಶಾಲೆಯ ಸಿಬ್ಬಂದಿ ವರ್ಗ.ವಿದ್ಯಾರ್ಥಿಗಳು ಮತ್ತು ಪೆÇೀಷಕರು ಭಾಗವಹಿಸಿದ್ದರು.

(Visited 3 times, 1 visits today)