ತುಮಕೂರು


ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಭಾರಿ ಪ್ರಮಾಣದಲ್ಲಿ ಕೊಡುಗೆ ನೀಡಿ ಸೂಕ್ತ ಸ್ಥಾನಮಾನ ನೀಡಿ ಗೌರವ ನೀಡುತ್ತಿದೆ. ಬಿಜೆಪಿ ಬಗ್ಗೆ ಅಲ್ಪಸಂಖ್ಯಾತರು ಭಯ ಪಡುವುದು ಬೇಡ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ನಜೀರ್ ಪಾಷ ತಿಳಿಸಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತರ ಮೋರ್ಚಾದ ನಗರ ಮಂಡಲ ಸಭೆಯಲ್ಲಿ ದೀನ್‍ದಯಾಳ್ ಉಪಾಧ್ಯಾಯ, ಶ್ಯಾಮ್‍ಪ್ರಕಾಶ ಮುಖರ್ಜಿ ಹಾಗೂ ಭಾರತಮಾತಾ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡುತ್ತಾ, ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರಗಳು ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗೆ ಪ್ರಾಮುಖ್ಯತೆ ನೀಡಿ, ಅಲ್ಪಸಂಖ್ಯಾತ ಬಂಧುಗಳನ್ನು ಸಮಾಜದ ಮುಖ್ಯವಾಹಿನಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತ ಸಮಾಜದ ಕಡು ಬಡವರು, ವಿದ್ಯಾವಂತರು, ಮಹಿಳೆಯರು ಮತ್ತು ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಭರಪೂರದ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸಾವಿರಾರು ಕೋಟಿ ರೂ.ಗಳ ಅನುದಾನದ ಹಣವನ್ನು ನೀಡುತ್ತಿವೆ ಎಂದರು.
ತುಮಕೂರು ಜಿಲ್ಲೆಯ ಎಲ್ಲಾ ಮಂಡಲ, ವಾರ್ಡ್, ಮೊಹಲ್ಲಾಗಳಲ್ಲಿ ಅಲ್ಪಸಂಖ್ಯಾತರ ಮೋರ್ಚಾಕ್ಕೆ ಕಾರ್ಯಕರ್ತರನ್ನು ಗುರ್ತಿಸಿ, ಕ್ರೀಯಾಶೀಲರನ್ನಾಗಿ ಮಾಡಿ, ಸಂಘಟನೆಯಲ್ಲಿ ಪದಾಧಿಕಾರಿಗಳನ್ನಾಗಿ ಮಾಡೋಣ ಎಂದರು. ಪದಾಧಿಕಾರಿಗಳು, ಕಾರ್ಯಕರ್ತರು ಸಮದಾಯಕ್ಕೆ ಸರ್ಕಾರದಿಂದ ದೊರಕುವ ನೂರಾರು ಯೋಜನೆಗಳನ್ನು ತಲುಪಿಸಿ, ಸ್ಪಂದಿಸಿದರೆ ಮಾತ್ರ ಜಬರ್ಧಸ್ ಆಗಿ ಸಂಘಟನೆ ಮಾಡಬಹುದು. ಸಂಘಟನೆ ಬಲಗೊಳ್ಳಲು ಸಕ್ರೀಯವಾಗಿ ಪ್ರವಾಸ ಮಾಡಬೇಕೆಂದು ಜವಾಬ್ದಾರಿ ಇರುವ ಪದಾಧಿಕಾರಿಗಳಿಗೆ ವಿನಂತಿಸಿದರು.
ಅಲ್ಪಸಂಖ್ಯಾತರ ಏಳಿಗೆಗೆ ಕಟಿ ಬದ್ದ : ಶಬ್ಬೀರ್ ಆಹಮ್ಮದ್
ನಮ್ಮ ಸಮುದಾಯಗಳ ಅಭಿವೃದ್ಧಿಗೆ ವಕ್ರ್ಫ್ ಬೋರ್ಡ್ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿಗೆ ಕಟಿ ಬದ್ದವಾಗಿದೆ. ಹಲವಾರು ಜನಪರ ಯೋಜನೆಗಳ ಬಗ್ಗೆ ಅರಿವನ್ನು ಅಲ್ಪಸಂಖ್ಯಾತರ ಮೋರ್ಚಾವು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಬಿಜೆಪಿ ತುಮಕೂರು ಮಂಡಲ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಹಾಗೂ ಜಿಲ್ಲಾ ವಕ್ರ್ಫ್ ಬೋರ್ಡ್ ಉಪಾಧ್ಯಕ್ಷ ಶಬ್ಬೀರ್ ಆಹಮ್ಮದ್ ತಿಳಿಸಿದರು.
ಪಕ್ಷ ಸಂಘಟನೆಗೆ ಒತ್ತು : ಅಫ್ರೋಜ್ ಆಹಮ್ಮದ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ತುಮಕೂರು ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷ, ವಕೀಲರು ಹಾಗೂ ಜಿಲ್ಲಾ ವಕ್ರ್ಫ್ ಬೋರ್ಡ್ ಅಧ್ಯಕ್ಷರಾದ ಅಪ್ರೋಜ್ ಆಹಮ್ಮದ್‍ರವರು, ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಪಕ್ಷ ಸಂಘಟನೆಗೆ ಕ್ರೀಯಾಶೀಲವಾಗಿ ಪ್ರವಾಸ ಮಾಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಬಿಜೆಪಿ ಕೆಸರುಮಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮನ್ಸೂರ್ ಆಹಮ್ಮದ್‍ಖಾನ್, ಸದಸ್ಯರಾದ ಸೈಯದ್ ಅಫ್ಸರ್‍ಖಾನ್, ಕುನ್ನಾಲ ಪಂಚಾಯಿತಿ ಸದಸ್ಯರಾದ ಫೈರೋಜ್, ಮಹಮ್ಮದ್ ರಫೀಕ್‍ರವರನ್ನು ಮೈಸೂರು ಪೇಟ ಶಾಲು ಹಾಕಿ ಗೌರವವಿತವಾಗಿ ಸನ್ಮಾನಿಸಲಾಯಿತು.
ಈ ಸಂಘಟನ್ಮಾಕ ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಹಮ್ಮದ್ ಶಿರಾಜುದ್ದೀನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಪ್ರಭಾರಿ ಮಹಮ್ಮದ್ ಉರೂಜ್‍ಪಾಷ, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ನದೀಂಪಾಷ, ತುಮಕೂರು ನಗರ ಮಂಡಲ ಉಪಾಧ್ಯಕ್ಷ ರಫೀಕ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿ ಶುಹೋವ್ ಇಮ್ರಾನ್, ಪ್ರಮುಖರಾದ ಮಹಮ್ಮದ್ ಐಮಾನ್, ಸಲ್ಮಾನ್, ಮುಕ್ರಂ ಪಾಷ ಮತ್ತಿತರರು ಉಪಸ್ಥಿತರಿದ್ದರು.
ಈ ಸಭೆಯನ್ನು ಬಿಜೆಪಿ ತುಮಕೂರು ನಗರ ಮಂಡಲ ಅಲ್ಪಸಂಖ್ಯಾತರ ಮೋರ್ಚಾದ ಕಾರ್ಯದರ್ಶಿ ಟಿ.ಎಸ್.ಚಾಂದ್‍ಪಾಷ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

(Visited 6 times, 1 visits today)